HomeIPL 2026ಈ ತಂಡವನ್ನು ಮುಂದುವರಿಸಿದ್ರೆ ಕಪ್ ಅಲ್ಲ ಪ್ಲೇಆಫ್ ಕೂಡ ಅನುಮಾನ; ಆರ್‌ಸಿಬಿಯಿಂದ ಮೊದಲು ಈ ಇಬ್ಬರು...

ಈ ತಂಡವನ್ನು ಮುಂದುವರಿಸಿದ್ರೆ ಕಪ್ ಅಲ್ಲ ಪ್ಲೇಆಫ್ ಕೂಡ ಅನುಮಾನ; ಆರ್‌ಸಿಬಿಯಿಂದ ಮೊದಲು ಈ ಇಬ್ಬರು ವಂಚಕರನ್ನು ಹೊರಹಾಕಿ ಎಂದ ಅಭಿಮಾನಿಗಳು

ನಿನ್ನೆ ( ಮೇ 7 ) ಲಕ್ನೋದ ಏಕನ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಲೀಗ್ ಹಂತದ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 9 ರನ್‌ಗಳ ರೋಚಕ ಗೆಲುವನ್ನು ಕಂಡಿತು.

ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಮಳೆಯಿಂದಾಗಿ ಎರಡು ಬಾರಿ ನಿಂತು ನಡೆದ ಪಂದ್ಯದಲ್ಲಿ ಒಂದು ಓವರ್ ಕಡಿತಗೊಂಡು 19 ಓವರ್‌ಗಳ ಪಂದ್ಯ ನಡೆದಿದ್ದು, ಲಕ್ನೋ ಸೂಪರ್ ಜೈಂಟ್ಸ್ 3 ವಿಕೆಟ್ ನಷ್ಟಕ್ಕೆ 209 ರನ್ ಬಾರಿಸಿತು. ಡೆಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಆರ್‌ಸಿಬಿಗೆ 213 ರನ್‌ಗಳ ಗುರಿ ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.

ಹೀಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡುವ ಬಳಗದಲ್ಲಿ ಬದಲಾವಣೆ ಬೇಕಿದೆ ಎಂದು ಅಭಿಮಾನಿಗಳು ಕಿಡಿಕಾರಿ ಸಲಹೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅದರಲ್ಲೂ ಟೂರ್ನಿಯುದ್ದಕ್ಕೂ ಫ್ಲಾಪ್ ಆಗಿ ನಿನ್ನೆಯ ಪಂದ್ಯದಲ್ಲೂ ಮಕಾಡೆ ಮಲಗಿದ ಇಬ್ಬರು ವಂಚಕರನ್ನು ಮೊದಲು ತಂಡದಿಂದ ಹೊರಹಾಕಿ ಎಂದು ಸಲಹೆ ನೀಡಿದ್ದಾರೆ. ಟೂರ್ನಿಯಲ್ಲಿ ಆಡಿದ 10 ಪಂದ್ಯಗಳ ಪೈಕಿ ಕೇವಲ 64 ರನ್ ಬಾರಿಸಿರುವ ಜಿತೇಶ್ ಶರ್ಮಾ ಹಾಗೂ 10 ಪಂದ್ಯಗಳನ್ನಾಡಿರುವ ರೊಮಾರಿಯೊ ಶೆಫರ್ಡ್ 79 ರನ್ ಮಾತ್ರ ಕಲೆಹಾಕಿದ್ದು, ತೀರ ಕೆಟ್ಟ ಪ್ರದರ್ಶನ ನೀಡಿದ್ದಾರೆ.

ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಗೆದ್ದು ಟಾಪ್ 2 ಸ್ಥಾನಗಳನ್ನು ಭದ್ರಪಡಿಸಿಕೊಳ್ಳಬೇಕೆಂದರೆ ಜಿತೇಶ್‌ ಶರ್ಮಾ ಹೊರಹಾಕಿ ಆತನ ಬದಲಿಗೆ ವಿಕೆಟ್ ಕೀಪರ್ ಜೋರ್ಡನ್ ಕಾಕ್ಸ್ ಕರೆತನ್ನಿ, ರೊಮಾರಿಯೊ ಶೆಫರ್ಡ್ ಕೂರಿಸಿ ಜೇಕಬ್ ಡಫಿ ಕರೆತನ್ನಿ, ಜೇಕಬ್ ಬೆಥೆಲ್‌ನನ್ನು ತಂಡದಿಂದ ಹೊರಹಾಕಿ, ಕೊಹ್ಲಿ ಹಾಗೂ ಪಡಿಕ್ಕಲ್‌ರನ್ನು ಆರಂಭಿಕರಾಗಿ ಬಳಸಿ ಎಂದಿದ್ದಾರೆ.

ಹೀಗೆ ಮಾಡಿದರೆ ಬ್ಯಾಟಿಂಗ್‌ ಬಲವನ್ನು ಜೋರ್ಡನ್ ಕಾಕ್ಸ್ ಹೆಚ್ಚಿಸಲಿದ್ದು, ಡಫಿ ಹಾಗೂ ಜೋಶ್ ಹೇಜಲ್‌ವುಡ್‌ರನ್ನು ಒಟ್ಟಿಗೆ ಆಡಿಸಬಹುದು ಎಂದಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular