HomeIndiaಸಭೆ ವೇಳೆ ನಶೆಯಲ್ಲಿ ಚೇರ್ ಮೇಲೆ ತೂರಾಡಿದ್ದವ ಈಗ ಬಿಹಾರದ ಆರೋಗ್ಯ ಸಚಿವ: ಮೊದಲು ಆತನಿಗೆ...

ಸಭೆ ವೇಳೆ ನಶೆಯಲ್ಲಿ ಚೇರ್ ಮೇಲೆ ತೂರಾಡಿದ್ದವ ಈಗ ಬಿಹಾರದ ಆರೋಗ್ಯ ಸಚಿವ: ಮೊದಲು ಆತನಿಗೆ ಟ್ರೀಟ್‌ಮೆಂಟ್ ಕೊಡಿಸಿ ಎಂದ ಜನ; ವಿಡಿಯೊ

ಬಿಹಾರದ ನೂತನ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ನಿನ್ನೆ ( ಮೇ 7 ) ಬಿಜೆಪಿ – ಜೆಡಿಯು ಮೈತ್ರಿಕೂಟದ ಒಟ್ಟು 31 ಶಾಸಕರು ಪ್ರಮಾಣ ವಚನ ಸ್ವೀಕರಿಸಿದರು.

ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಸಭೆ ಪ್ರವೇಶಿಸಿದ್ದ ನಿತಿಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಸಹ ಈ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದು, ಪ್ರಮಾಣ ವಚನ ಸ್ವೀಕರಿಸಿದರು.

ನಿಶಾಂತ್ ಕುಮಾರ್‌ಗೆ ಸಾಮ್ರಾಟ್ ಚೌಧರಿ ಸರ್ಕಾರದಲ್ಲಿ ಆರೋಗ್ಯ ಸಚಿವ ಸ್ಥಾನ ದೊರಕಿದೆ. ಹಲವು ವರ್ಷಗಳ ಕಾಲ ಕಾರ್ಯಕರ್ತರು ಎಷ್ಟೇ ಮನವಿ ಮಾಡಿಕೊಂಡರೂ ರಾಜಕೀಯಕ್ಕೆ ಬಾರದಿದ್ದ ನಿಶಾಂತ್ ಕುಮಾರ್ ಇದೀಗ ಮಂತ್ರಿಯಾಗಿ ವಿಧಾನಸಭೆ ಪ್ರವೇಶಕ್ಕೆ ಸಜ್ಜಾಗಿರುವುದು ನಿತಿಶ್ ಕುಮಾರ್ ಬೆಂಬಲಿಗರಲ್ಲಿ ಸಂತಸವನ್ನುಂಟುಮಾಡಿದ್ದರೆ, ಈ ಆಯ್ಕೆ ಸಾಮಾನ್ಯ ಜನರಿಗೆ ಹಾಸ್ಯಾಸ್ಪದವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೌದು, ನಿಶಾಂತ್ ಕುಮಾರ್ ಆರೋಗ್ಯ ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ವಿಡಿಯೊಗಳನ್ನು ಹಂಚಿಕೊಂಡಿದ್ದು, ಮೊದಲು ಈತನ ಆರೋಗ್ಯ ಸರಿ ಮಾಡಿಕೊಳ್ಳಲು ಹೇಳಿ ಎಂದು ಕಾಲೆಳೆದಿದ್ದಾರೆ. ಪಕ್ಷದ ಸಭೆಯಲ್ಲಿ ವ್ಯಕ್ತಿಯೋರ್ವ ಭಾಷಣ ಮಾಡುತ್ತಿದ್ದರೆ ಪಕ್ಕದಲ್ಲಿದ್ದ ಕುರ್ಚಿ ಮೇಲೆ ಕುಳಿತಿದ್ದ ನಿಶಾಂತ್ ಕುಮಾರ್ ನಶೆಯಲ್ಲಿ ತೇಲಾಡಿದ್ದ ವಿಡಿಯೊ ಹಂಚಿಕೊಂಡಿದ್ದು, ಇಂಥವರಿಗೆ ಹೇಗೆ ಆರೋಗ್ಯ ಸಚಿವನ ಸ್ಥಾನ ಕೊಡಲು ಸಾಧ್ಯ ಎಂದು ಟೀಕಿಸಿದ್ದಾರೆ. ಅಲ್ಲದೇ ನಿಶಾಂತ್ ಕುಮಾರ್ ದೇಹದ ಪರಿಸ್ಥಿತಿ ಬಗ್ಗೆಯೂ ಸಹ ಕಾಮೆಂಟ್ ಮಾಡಲಾಗಿದ್ದು, ಅನಾರೋಗ್ಯಕ್ಕೆ ತುತ್ತಾದಂತಿರುವ ಈತ ಜನರ ಆರೋಗ್ಯ ಸುಧಾರಿಸುವಂತಹ ಕ್ರಮಗಳನ್ನು ಕೈಗೊಳ್ಳಲು ಹೇಗೆ ಸಾಧ್ಯ ಎಂದು ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular