ಧಾರವಾಡ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಿಭಾಗ-1 ಕಲಬುರಗಿ ಘಟಕ-1 ರಿಂದ ಕಲಬುರಗಿಯಿಂದ ದಾಂಡೇಲಿಗೆ ಪ್ರೇಕ್ಷಣಿಯ ಸ್ಥಳಗಳ ವೀಕ್ಷಣೆಗಾಗಿ ಸಾರ್ವಜನಿಕ ಪ್ರಯಾಣಿಕರ ಬೇಡಿಕೆಯಂತೆ ಪ್ರಯಾಣಿಕರ ಅನುಕೂಲಕ್ಕಾಗಿ ಮೇ 2026 ರಿಂದ ಕಲಬುರಗಿ-ದಾಂಡೇಲಿಗೆ ನಾನ್ ಎ.ಸಿ ಸ್ವೀಪರ್ ಸಾರಿಗೆಯನ್ನು ಪ್ರಾರಂಭಿಸಿ ಕಾರ್ಯಾಚರಣೆ ಮಾಡಲಾಗುತ್ತಿದೆ.
ಈ ಸಾರಿಗೆಯು ವ್ಹಾಯಾ ಜೇವರ್ಗಿ, ಶಹಾಪುರ, ಅಂಗಸೂಗುರು, ಕುಷ್ಟಗಿ, ಗದಗ, ಹುಬ್ಬಳ್ಳಿ, ಧಾರವಾಡ ಮಾರ್ಗವಾಗಿ ಕಾರ್ಯಾಚರಣೆಯಲ್ಲಿರುತ್ತದೆ.
ಕಲಬುರಗಿ ಬಸ್ ನಿಲ್ದಾಣದಿಂದ ರಾತ್ರಿ 10 ಗಂಟೆಗೆ ನಿರ್ಗಮಿಸುವುದು. ದಾಂಡೇಲಿಗೆ ಬೆಳಿಗ್ಗೆ 8:30 ಗಂಟೆಗೆ ತಲುಪುವುದು. ದಾಂಡೇಲಿ ಬಸ್ ನಿಲ್ದಾಣದಿಂದ ಸಂಜೆ 6:30 ಗಂಟೆಗೆ ನಿರ್ಗಮಿಸುವುದು. ಕಲಬುರಗಿಗೆ ಬೆಳಿಗ್ಗೆ 5 ಗಂಟೆಗೆ ತಲುಪುತ್ತದೆ. ಸಾರ್ವಜನಿಕ ಪ್ರಯಾಣಿಕರು ಸದರಿ ಸಾರಿಗೆ ಸದುಪಯೋಗ ಪಡೆದುಕೊಳ್ಳುವಂತೆ ಕಲಬುರಗಿ ವಿಭಾಗ-1 ರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜುಲೈ 7 ರಂದು ರಾಷ್ಟ್ರೀಯ ಲೋಕ ಆದಾಲತ್
ಧಾರವಾಡ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ಆದೇಶದ ಮೇರೆಗೆ ಧಾರವಾಡ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಜುಲೈ 7, 2026 ರಂದು ರಾಷ್ಟ್ರೀಯ ಲೋಕ ಆದಾಲತ್ ಆಯೋಜಿಸಲಾಗುವುದು.
ಲೋಕ ಅದಾಲತ್‍ನಲ್ಲಿ ಪೂರ್ವವ್ಯಾಜ್ಯ ಪ್ರಕರಣಗಳು ಹಾಗೂ ನ್ಯಾಯಾಲಯಗಳಲ್ಲಿ ರಾಜಿ ಆಗಬಹುದಾದ ಪ್ರಕರಣಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರಾಜಿ ಸಂದಾನ ಮಾಡಿಕೊಳ್ಳಲು ಹಾಗೂ ಲೋಕ ಅದಾಲತ್‍ನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

