HomeLatest News49 ವರ್ಷಗಳ ಹಳೆಯ ರಹಸ್ಯ ಬಯಲು: ಒಂದೇ ಗರ್ಭದಲ್ಲಿ ಹುಟ್ಟಿದ ಅವಳಿ ಸಹೋದರಿಯರಿಗೆ ತಂದೆ ಬೇರೆ...

49 ವರ್ಷಗಳ ಹಳೆಯ ರಹಸ್ಯ ಬಯಲು: ಒಂದೇ ಗರ್ಭದಲ್ಲಿ ಹುಟ್ಟಿದ ಅವಳಿ ಸಹೋದರಿಯರಿಗೆ ತಂದೆ ಬೇರೆ ಬೇರೆ ವೈದ್ಯಕೀಯ ಲೋಕವೇ ಶಾಕ್

ಒಂದೇ ತಾಯಿಯ ಗರ್ಭದಲ್ಲಿ ಬೆಳೆದು, ಕೆಲವೇ ನಿಮಿಷಗಳ ಅಂತರದಲ್ಲಿ ಜನಿಸಿದ ಅವಳಿ ಸಹೋದರಿಯರ ಡಿಎನ್‌ಎ (DNA) ಪರೀಕ್ಷೆಯ ವರದಿಯೊಂದು ಈಗ ಜಾಗತಿಕ ವೈದ್ಯಕೀಯ ಲೋಕವನ್ನೇ ಬೆರಗುಗೊಳಿಸಿದೆ. ತಾವು ಇಷ್ಟು ವರ್ಷ ಯಾರನ್ನು ಹೆತ್ತ ತಂದೆಯೆಂದು ನಂಬಿದ್ದರೋ, ಅವರು ತಮ್ಮ ನಿಜವಾದ ತಂದೆಯಲ್ಲ ಎಂಬ ಸತ್ಯದ ಜೊತೆಗೆ, ಅವರಿಬ್ಬರ ಜೈವಿಕ ತಂದೆಯಂದಿರು ಬೇರೆ ಬೇರೆ ಎಂಬ ಆಘಾತಕಾರಿ ರಹಸ್ಯ ಈಗ ಬಹಿರಂಗವಾಗಿದೆ.ಬ್ರಿಟನ್‌ನ ನಾಟಿಂಗ್‌ಹ್ಯಾಮ್‌ನಲ್ಲಿ 1976 ರಲ್ಲಿ ಜನಿಸಿದ ಮಿಶೆಲ್ ಮತ್ತು ಲವಿನಿಯಾ ಆಸ್ಬೋರ್ನ್ (49) ಎಂಬ ಅವಳಿ ಸಹೋದರಿಯರ ಜೀವನದಲ್ಲೇ ಈ ವಿಚಿತ್ರ ಘಟನೆ ನಡೆದಿದೆ.

49 ವರ್ಷಗಳ ಹಳೆಯ ರಹಸ್ಯ ಬಯಲಾಗಿದ್ದು ಹೇಗೆ?

ಬಾಲ್ಯದಿಂದಲೂ ಈ ಸಹೋದರಿಯರಿಗೆ ತಮ್ಮ ತಂದೆಯ ಗುರುತಿನ ಬಗ್ಗೆ ಅನುಮಾನವಿತ್ತು. ತಾನು ತಂದೆಯೆಂದು ನಂಬಿದ್ದ ‘ಜೇಮ್ಸ್’ ಎಂಬ ವ್ಯಕ್ತಿಗೂ ತನಗೂ ಯಾವುದೇ ಹೋಲಿಕೆ ಇಲ್ಲ ಎಂದು ಮಿಶೆಲ್ ಅವರಿಗೆ ಯಾವಾಗಲೂ ಅನಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಮಿಶೆಲ್ ಮನೆಯಲ್ಲೇ ಮಾಡಬಹುದಾದ ಡಿಎನ್‌ಎ ಕಿಟ್ ತರಿಸಿಕೊಂಡು ಪರೀಕ್ಷೆ ಮಾಡಿಸಿಕೊಂಡರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿ ಬಂದಾಗ ಜೇಮ್ಸ್ ಅವಳ ನಿಜವಾದ ತಂದೆಯಲ್ಲ ಎಂಬುದು ಸಾಬೀತಾಯಿತು. ನಂತರ ಲವಿನಿಯಾ ಕೂಡ ಡಿಎನ್‌ಎ ಪರೀಕ್ಷೆ ಮಾಡಿಸಿಕೊಂಡಾಗ ಮತ್ತೊಂದು ದೊಡ್ಡ ರಹಸ್ಯ ಬಯಲಾಯಿತು. ಅವರಿಬ್ಬರ ತಂದೆ ಕೂಡ ಒಬ್ಬರೇ ಆಗಿರಲಿಲ್ಲ, ಬದಲಾಗಿ ಇಬ್ಬರೂ ಬೇರೆ ಬೇರೆ ವ್ಯಕ್ತಿಗಳಾಗಿದ್ದರು! ಅಂದರೆ ಇವರಿಬ್ಬರಿಗೂ ತಾಯಿ ಒಬ್ಬರೇ ಆದರೂ, ಜೈವಿಕವಾಗಿ ಇವರು ಅರ್ಧ-ಸಹೋದರಿಯರು (Half-sisters).

ಏನಿದು ವೈದ್ಯಕೀಯ ಪವಾಡ? ಇದು ಹೇಗೆ ಸಾಧ್ಯ?

ವೈದ್ಯಕೀಯ ಜಗತ್ತಿನಲ್ಲಿ ಇದನ್ನು ಅತ್ಯಂತ ವಿರಳ ಎಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ಭಾಷೆಯಲ್ಲಿ ಈ ಸ್ಥಿತಿಯನ್ನು ‘ಹೆಟೆರೊಪ್ಯಾಟರ್ನಲ್ ಸೂಪರ್‌ಫೆಕಂಡೇಶನ್’ (Heteropaternal Superfecundation) ಎಂದು ಕರೆಯಲಾಗುತ್ತದೆ.

ಸಾಮಾನ್ಯವಾಗಿ ಮಹಿಳೆಯರ ದೇಹದಲ್ಲಿ ಒಂದು ಮಾಸಿಕ ಚಕ್ರದ ಅವಧಿಯಲ್ಲಿ ಒಂದು ಅಂಡಾಣು ಮಾತ್ರ ಬಿಡುಗಡೆಯಾಗುತ್ತದೆ.

ಆದರೆ ಅಪರೂಪದ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಅಂಡಾಣುಗಳು ಬಿಡುಗಡೆಯಾಗುತ್ತವೆ.

ಆ ಎರಡು ಅಂಡಾಣುಗಳು ಅತ್ಯಂತ ಅಲ್ಪ ಕಾಲದ ಅಂತರದಲ್ಲಿ, ಬೇರೆ ಬೇರೆ ಪುರುಷರ ವೀರ್ಯಾಣುಗಳೊಂದಿಗೆ ಫಲೀಕರಣಗೊಂಡಾಗ (Fertilize) ಇಂತಹ ಅವಳಿ ಮಕ್ಕಳು ಜನಿಸುತ್ತಾರೆ.

ಬಿಬಿಸಿ (BBC) ವರದಿಯ ಪ್ರಕಾರ, ಇಡೀ ವಿಶ್ವದ ವೈದ್ಯಕೀಯ ಇತಿಹಾಸದಲ್ಲಿ ಈವರೆಗೆ ಇಂತಹ 24 ಕ್ಕೂ ಕಡಿಮೆ ಪ್ರಕರಣಗಳು ಮಾತ್ರ ಪತ್ತೆಯಾಗಿದ್ದು, ಬ್ರಿಟನ್‌ನಲ್ಲಿ ದಾಖಲಾದ ಮೊದಲ ಅಧಿಕೃತ ಪ್ರಕರಣ ಇದಾಗಿದೆ.

ಮಿಶ್ರ ಭಾವನೆ ಮೂಡಿಸಿದ ಸತ್ಯ:

ಈ ರಹಸ್ಯ ಹೊರಬಂದಾಗ ಲಾವಿನಿಯಾಗೆ ತೀವ್ರ ಆಘಾತವಾಗಿತ್ತು. ಬಾಲ್ಯದಿಂದಲೂ ಅವಳು ಕೇವಲ ನನಗೆ ಮಾತ್ರ ಸೇರಿದವಳು ಎಂದುಕೊಂಡಿದ್ದೆ, ಆದರೆ ಈಗ ಅವಳು ಸಂಪೂರ್ಣವಾಗಿ ನನ್ನವಳಲ್ಲ ಎನಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಮಿಶೆಲ್ ಇದಕ್ಕೆ ಭಿನ್ನವಾಗಿ ಪ್ರತಿಕ್ರಿಯಿಸಿದ್ದು, ನನಗೇನೂ ಅಚ್ಚರಿಯಾಗಲಿಲ್ಲ. ಇದು ವಿಚಿತ್ರ, ಅಪರೂಪದ ಘಟನೆ ಹೌದು, ಆದರೆ ಈಗ ಎಲ್ಲದಕ್ಕೂ ಒಂದು ಅರ್ಥ ಸಿಕ್ಕಂತಾಗಿದೆ ಎಂದಿದ್ದಾರೆ. ಬಾಲ್ಯದಲ್ಲಿ ಕಷ್ಟದ ದಿನಗಳನ್ನು ಎದುರಿಸಿದ್ದ ಈ ಸಹೋದರಿಯರು, ಒಬ್ಬರಿಗೊಬ್ಬರು ಆಸರೆಯಾಗಿ ಬೆಳೆದಿದ್ದರು.

ಸತ್ಯ ಹೊರಬಂದ ದಿನವೇ ತಾಯಿ ನಿಧನ

ವಿಷಾದದ ಸಂಗತಿಯೆಂದರೆ, ಈ ಸಹೋದರಿಯರ ತಾಯಿ ಈ ಸತ್ಯವನ್ನು ಜೀವನಪರ್ಯಂತ ರಹಸ್ಯವಾಗಿಯೇ ಇಟ್ಟಿದ್ದರು. 2022ರಲ್ಲಿ ಈ ಡಿಎನ್‌ಎ ವರದಿಗಳು ಅಂತಿಮವಾಗಿ ಸತ್ಯವನ್ನು ಹೊರಹಾಕಿದ ದಿನವೇ ಅವರ ತಾಯಿ ನಿಧನರಾದರು. ಹಾಗಾಗಿ ತಾಯಿಯಿಂದ ಅವರಿಗೆ ಯಾವುದೇ ಪ್ರಶ್ನೆಗಳಿಗೆ ಉತ್ತರ ಸಿಗಲಿಲ್ಲ.

ನಿಜವಾದ ತಂದೆಯರ ಪತ್ತೆ:

ಬಿಸಿಸಿ ರೇಡಿಯೋ 4ರ ಸರಣಿ ದ ಗಿಫ್ಟ್ನಲ್ಲಿ ತಮ್ಮ ಅನುಭವ ಹಂಚಿಕೊಂಡ ಸಹೋದರಿಯರು, ಈಗ ತಮ್ಮ ನಿಜವಾದ ತಂದೆಯರನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮಿಶೆಲ್ ಅವರ ನಿಜವಾದ ತಂದೆ ಅಲೆಕ್ಸ್ (ಅವರ ತಾಯಿಯ ಸೋದರನ ಗೆಳೆಯ) ಹಾಗೂ ಲವಿನಿಯಾ ಅವರ ತಂದೆ ಆರ್ಥರ್ ಎಂದು ತಿಳಿದುಬಂದಿದೆ.

ಲವಿನಿಯಾ ಈಗ ಲಂಡನ್‌ನಲ್ಲಿರುವ ತನ್ನ ತಂದೆ ಆರ್ಥರ್ ಅವರನ್ನು ನಿಯಮಿತವಾಗಿ ಭೇಟಿ ಮಾಡುತ್ತಿದ್ದಾರೆ. ಡಿಎನ್‌ಎ ವರದಿಯು ತಂದೆ ಬೇರೆ ಬೇರೆ ಎಂದು ಹೇಳಿರಬಹುದು, ಆದರೆ ಇಂದಿಗೂ ನಮ್ಮ ನಡುವಿನ ಪ್ರೀತಿ ಮತ್ತು ಬಾಂಧವ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ನಾವು ಮೊದಲಿನಂತೆಯೇ ಅತ್ಯಂತ ಆಪ್ತವಾಗಿದ್ದೇವೆ ಎಂದು ಈ ಸಹೋದರಿಯರು ಹೆಮ್ಮೆಯಿಂದ ಹೇಳುತ್ತಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular