HomeIndiaಕೇವಲ 1 ಮತದಿಂದ ಗೆದ್ದ ಅಭ್ಯರ್ಥಿ: ತಮಿಳುನಾಡಿನಲ್ಲಿ ಸೋತೇಬಿಟ್ಟೆವು ಎಂದುಕೊಂಡೇ ಕಡಿಮೆ ಅಂತರದಲ್ಲಿ ಗೆದ್ದು ನಿಟ್ಟುಸಿರು...

ಕೇವಲ 1 ಮತದಿಂದ ಗೆದ್ದ ಅಭ್ಯರ್ಥಿ: ತಮಿಳುನಾಡಿನಲ್ಲಿ ಸೋತೇಬಿಟ್ಟೆವು ಎಂದುಕೊಂಡೇ ಕಡಿಮೆ ಅಂತರದಲ್ಲಿ ಗೆದ್ದು ನಿಟ್ಟುಸಿರು ಬಿಟ್ಟ 5 ಅಭ್ಯರ್ಥಿಗಳ ಪಟ್ಟಿ

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮೇ 4, 2026 ಒಂದು ಅವಿಸ್ಮರಣೀಯ ದಿನವಾಗಿ ದಾಖಲಾಗಿದೆ. ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಮೊದಲ ಚುನಾವಣೆಯಲ್ಲೇ 234 ಸ್ಥಾನಗಳ ವಿಧಾನಸಭೆಯಲ್ಲಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇತ್ತ ದಶಕಗಳ ಇತಿಹಾಸವಿರುವ ಡಿಎಂಕೆ ಟಿವಿಕೆ ಅಲೆಗೆ ಕೊಚ್ಚಿಹೋಗಿದ್ದು, ಅಧಿಕಾರ ಕಳೆದುಕೊಂಡಿದೆ. ಎಐಎಡಿಎಂಕೆ ಸಹ ಮೂರನೇ ಪಕ್ಷವಾಗಿ ಉಳಿದುಕೊಂಡಿದೆ.

ಹೀಗೆ ಟಿವಿಕೆ ದಾಳಿಗೆ ಅನುಭವಿ ಪಕ್ಷಗಳೇ ಧರೆಗುರುಳಿದ್ದು, ನುರಿತ ಅನುಭವವಿರುವ ರಾಜಕಾರಣಿಗಳಿಗೆ ವಿಜಯ್ ಬಳಗದ ಹೊಸ ಅಭ್ಯರ್ಥಿಗಳೇ ಮಣ್ಣುಮುಕ್ಕಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಈ ಫಲಿತಾಂಶದಲ್ಲಿ ಕೇವಲ ಒಂದು ಮತದಿಂದ ಗೆದ್ದ ಉದಾಹರಣೆಯೂ ಸಹ ಇದ್ದು, ಕಡಿಮೆ ಅಂತರದಲ್ಲಿ ಗೆದ್ದ ಹಲವು ಅಭ್ಯರ್ಥಿಗಳಿದ್ದಾರೆ. ಹಾಗಿದ್ದರೆ ಅತಿ ಕಡಿಮೆ ಅಂತರದಿಂದ ತಮಿಳುನಾಡು ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳು ಯಾರು ಎಂಬ ಪಟ್ಟಿ ಮುಂದಿದೆ.

ಕೇವಲ ಒಂದು ಮತದ ಗೆಲುವು: 185ನೇ ವಿಧಾನಸಭಾ ಕ್ಷೇತ್ರವಾದ ತಿರುಪ್ಪಾತ್ತೂರ್‌ನಲ್ಲಿ ಟಿವಿಕೆ ಪಕ್ಷದ ಸೀನಿವಾಸ ಸೇತುಪತಿ ಆರ್ ಡಿಎಂಕೆ ಪಕ್ಷದ ಪೆರಿಯಕರುಪ್ಪನ್ ಕೆಆರ್ ವಿರುದ್ಧ ಕೇವಲ 1 ಮತದಿಂದ ರೋಚಕ ಗೆಲುವು ಕಂಡಿದ್ದಾರೆ. ಡಿಎಂಕೆಯ ಪೆರಿಯಕರುಪ್ಪನ್ ಕೆಆರ್ 83374 ಮತಗಳನ್ನು ಪಡೆದರೆ, ಟಿವಿಕೆಯ ಸೀನಿವಾಸ ಸೇತುಪತಿ ಆರ್ 83375 ಮತಗಳನ್ನು ಪಡೆದುಕೊಂಡಿದ್ದಾರೆ.

138 ಮತಗಳ ಗೆಲುವು: 54ನೇ ವಿಧಾನಸಭಾ ಕ್ಷೇತ್ರ ವೆಪ್ಪನಹಳ್ಳಿಯಲ್ಲಿ ಡಿಎಂಕೆಯ ಶ್ರೀನಿವಾಸನ್ ಪಿಎಸ್ ಎಐಎಡಿಎಂಕೆಯ ಮುನುಸ್ವಾಮಿ ಕೆಪಿ ವಿರುದ್ಧ 138 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ. ಶ್ರೀನಿವಾಸನ್ ಪಿಎಸ್ 74691 ಮತಗಳನ್ನು ಪಡೆದರೆ, ಮುನುಸ್ವಾಮಿ ಕೆಪಿ 74553 ಮತಗಳನ್ನು ಪಡೆದುಕೊಂಡಿದ್ದಾರೆ.

214 ಮತಗಳ ಗೆಲುವು : ವಿಧಾನಸಭಾ ಕ್ಷೇತ್ರ 229 ಕನ್ಯಾಕುಮಾರಿಯಲ್ಲಿ ಡಿಎಂಕೆ ಅಭ್ಯರ್ಥಿ ತಲವೈ ಸುಂದರನ್ ಎಐಎಡಿಎಂಕೆ ಅಭ್ಯರ್ಥಿ ಮಹೇಶ್ ಆರ್ ವಿರುದ್ಧ 214 ಮತಗಳ ಅಂತರದಿಂದ ಗೆದ್ದರು. ತಲವೈ ಸುಂದರನ್ 75045 ಮತಗಳನ್ನು ಪಡೆದರೆ, ಮಹೇಶ್ ಆರ್ 74831 ಮತಗಳನ್ನು ಪಡೆದರು.

227 ಮತಗಳ ಗೆಲುವು: 66ನೇ ವಿಧಾನಸಭಾ ಕ್ಷೇತ್ರ ಪೊಲೂರ್‌ನಲ್ಲಿ ಡಿಎಂಡಿಕೆ ಅಭ್ಯರ್ಥಿ ಸರವಣನ್ ಪಿ ವಿರುದ್ಧ ಟಿವಿಕೆಯ ಅಭಿಷೇಕ್ ಆರ್ 227 ಮತಗಳ ಅಂತರದ ರೋಚಕ ಗೆಲುವು ಕಂಡಿದ್ದಾರೆ. ಅಭಿಷೇಕ್ ಆರ್ 67961 ಮತಗಳನ್ನು ಪಡೆದರೆ, ಸರವಣನ್ ಪಿ 67734 ಮತಗಳನ್ನು ಪಡೆದಿದ್ದಾರೆ.

285 ಮತಗಳು: 76ನೇ ವಿಧಾನಸಭಾ ಕ್ಷೇತ್ರ ತಿರುಕ್ಕೊಯಿಲೂರ್‌ನಲ್ಲಿ ಟಿವಿಕೆ ಅಭ್ಯರ್ಥಿ ವಿಜಯ್ ಆರ್ ಬರಣಿಬಾಲಾಜಿ ವಿರುದ್ಧ ಪಳನಿಸ್ವಾಮಿ ಎಐಎಡಿಎಂಕೆಯ ಪಳನಿಸ್ವಾಮಿ ಎಸ್ 285 ಮತಗಳ ಅಂತರದಿಂದ ಗೆಲುವು ಕಂಡರು. ಪಳನಿಸ್ವಾಮಿ 73033 ಮತಗಳನ್ನು ಪಡೆದರೆ, ವಿಜಯ್ ಆರ್ ಬರಣಿಬಾಲಾಜಿ 72748 ಮತಗಳನ್ನು ಪಡೆದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular