ಚೆನ್ನೈ: “ಫಲಿತಾಂಶ ಬಂದಾಗ ಈ ವಿಡಿಯೋ ಪ್ಲೇ ಮಾಡಿ” ಎಂದು ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ (PK) ನೀಡಿದ್ದ ಸವಾಲು ಈಗ ತಮಿಳುನಾಡಿನಲ್ಲಿ ನಿಜವಾಗುತ್ತಿದೆ. ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಭರ್ಜರಿ ಮುನ್ನಡೆಯು ಕಿಶೋರ್ ಅವರ ಕಾರ್ಯತಂತ್ರ ಮತ್ತು ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ.
ಅಂದು ಕಿಶೋರ್ ಹೇಳಿದ್ದೇನು?
ಕೆಲವು ತಿಂಗಳ ಹಿಂದೆ ತಂತಿ ಟಿವಿಗೆ ನೀಡಿದ್ದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಅವರು ದಳಪತಿ ವಿಜಯ್ ಅವರ ರಾಜಕೀಯ ಎಂಟ್ರಿ ಬಗ್ಗೆ ಅತ್ಯಂತ ಸ್ಫೋಟಕ ಹೇಳಿಕೆ ನೀಡಿದ್ದರು:
ಏಕಾಂಗಿ ಹೋರಾಟವೇ ಮದ್ದು: ವಿಜಯ್ ಅವರು ಯಾವುದೇ ಪಕ್ಷದ ಜೊತೆ (ವಿಶೇಷವಾಗಿ ಎಐಎಡಿಎಂಕೆ) ಮೈತ್ರಿ ಮಾಡಿಕೊಳ್ಳಬಾರದು. ಏಕಾಂಗಿಯಾಗಿ ಸ್ಪರ್ಧಿಸಿದರೆ ಮಾತ್ರ ಅವರಿಗೆ ಗೆಲ್ಲುವ ಮತ್ತು ಸರ್ಕಾರ ರಚಿಸುವ ಅವಕಾಶವಿದೆ ಎಂದು ಕಿಶೋರ್ ಹೇಳಿದ್ದರು.
ಮ್ಯಾಜಿಕ್ ನಂಬರ್ ಸವಾಲು: 118 ಸ್ಥಾನಗಳನ್ನು ಗೆಲ್ಲಲು ಸಾಧ್ಯವೇ ಎಂಬ ಪ್ರಶ್ನೆಗೆ, “ಖಂಡಿತವಾಗಿಯೂ ಸಾಧ್ಯ, ನನ್ನ ಮಾತನ್ನು ರೆಕಾರ್ಡ್ ಮಾಡಿಟ್ಟುಕೊಳ್ಳಿ” ಎಂದು ಭವಿಷ್ಯ ನುಡಿದಿದ್ದರು.
ಬೌಂಡರಿ ಬಾರಿಸಿದ ಬುಲ್ಸ್ ಐ ಭವಿಷ್ಯ
ಸದ್ಯದ ಟ್ರೆಂಡ್ ಪ್ರಕಾರ, ಕಿಶೋರ್ ಅವರ ಲೆಕ್ಕಾಚಾರಗಳು ಬುಲ್ಸ್ ಐ (ನಿಖರ ಗುರಿ) ತಲುಪಿವೆ:
ಮೈತ್ರಿ ಇರಲಿಲ್ಲ: ಕಿಶೋರ್ ಸಲಹೆಯಂತೆ ವಿಜಯ್ ಎಲ್ಲಾ 234 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಕಣಕ್ಕಿಳಿದಿದ್ದರು.
ಶತಕದ ಮುನ್ನಡೆ: ಆರಂಭಿಕ ಮತ ಎಣಿಕೆಯಲ್ಲೇ ಟಿವಿಕೆ ಪಕ್ಷವು 100ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಡಿಎಂಕೆ ಮತ್ತು ಎಐಎಡಿಎಂಕೆಯಂತಹ ದ್ರಾವಿಡ ದೈತ್ಯರನ್ನು ಬೆಚ್ಚಿಬೀಳಿಸಿದೆ.
ವಿಜಯ್-ಕಿಶೋರ್ ತಂತ್ರಗಾರಿಕೆ:
ಚುನಾವಣಾ ಕಣಕ್ಕಿಳಿಯುವ ಮುನ್ನವೇ ವಿಜಯ್ ಅವರು ಪ್ರಶಾಂತ್ ಕಿಶೋರ್ ಅವರನ್ನು ಗುಪ್ತ ಸಲಹೆಗಾರರನ್ನಾಗಿ ನೇಮಿಸಿಕೊಂಡಿದ್ದರು ಎಂಬ ಚರ್ಚೆ ಈಗ ಸದ್ದು ಮಾಡುತ್ತಿದೆ. ಪ್ರಶಾಂತ್ ಕಿಶೋರ್ ಅವರ ಇನ್ಪುಟ್ಗಳು, ಅಭ್ಯರ್ಥಿಗಳ ಆಯ್ಕೆ ಮತ್ತು ಪ್ರಚಾರದ ಶೈಲಿ ವಿಜಯ್ ಪಾಲಿಗೆ ವರದಾನವಾಗಿದೆ.

