HomeLatest News'ವಾಹನ ಸವಾರರೇ' ಎಚ್ಚರ ; ಕಾರಿಗೆ 'ಫಾಸ್ಟ್‌ಟ್ಯಾಗ್' ಅಂಟಿಸದಿದ್ದರೆ ಕಾರ್ಡ್ ಬ್ಲಾಕ್ : NHAI ಖಡಕ್...

‘ವಾಹನ ಸವಾರರೇ’ ಎಚ್ಚರ ; ಕಾರಿಗೆ ‘ಫಾಸ್ಟ್‌ಟ್ಯಾಗ್’ ಅಂಟಿಸದಿದ್ದರೆ ಕಾರ್ಡ್ ಬ್ಲಾಕ್ : NHAI ಖಡಕ್ ಎಚ್ಚರಿಕೆ.!

ಭಾರತದಲ್ಲಿ ಟೋಲ್ ಸಂಗ್ರಹ ಪ್ರಕ್ರಿಯೆಯನ್ನು ಸುಲಭಗೊಳಿಸಲು ಪರಿಚಯಿಸಲಾದ ತಾಂತ್ರಿಕ ವ್ಯವಸ್ಥೆಯೇ ಫಾಸ್ಟ್‌ಟ್ಯಾಗ್ (FASTag). ಇದು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ.

ವಾಹನವು ಟೋಲ್ ಪ್ಲಾಜಾ ಬಳಿ ಬಂದಾಗ, ಫಾಸ್ಟ್‌ಟ್ಯಾಗ್‌ನಲ್ಲಿರುವ ಚಿಪ್ ಅನ್ನು ಸ್ಕ್ಯಾನ್ ಮಾಡಿ ಟೋಲ್ ಶುಲ್ಕವನ್ನು ಸ್ವಯಂಚಾಲಿತವಾಗಿ ವಾಹನ ಮಾಲೀಕರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದರಿಂದಾಗಿ ನಗದು ಪಾವತಿಯ ಅಗತ್ಯತೆ ಕಡಿಮೆಯಾಗಿ, ಟ್ರಾಫಿಕ್ ದಟ್ಟಣೆಯೂ ತಗ್ಗುತ್ತದೆ.

ಆದರೆ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾರ್ಗಸೂಚಿಗಳ ಪ್ರಕಾರ, ಫಾಸ್ಟ್‌ಟ್ಯಾಗ್ ಅನ್ನು ಕಡ್ಡಾಯವಾಗಿ ವಾಹನದ ಮುಂಭಾಗದ ವಿಂಡ್‌ಸ್ಕ್ರೀನ್ (ಗಾಜು) ಮೇಲೆ ಅಂಟಿಸಬೇಕು. ಆದರೆ ಕೆಲವರು ವಾಹನ ಸವಾರರು ಅದನ್ನು ಕೈಯಲ್ಲಿ ಹಿಡಿದು ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಈ ವಿಷಯವನ್ನು NHAI ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಂಡ್‌ಸ್ಕ್ರೀನ್ ಮೇಲೆ ಫಾಸ್ಟ್‌ಟ್ಯಾಗ್ ಅಂಟಿಸುವುದರ ಪ್ರಯೋಜನಗಳು:

ಟೋಲ್ ಗೇಟ್‌ಗಳಲ್ಲಿ ಸುಲಭವಾಗಿ ಸ್ಕ್ಯಾನ್ ಆಗುತ್ತದೆ.

ವಾಹನಗಳು ನಿಲ್ಲದೆ ಸುಲಲಿತವಾಗಿ ಮುಂದೆ ಸಾಗುತ್ತವೆ. ತನ್ಮೂಲಕ ಟ್ರಾಫಿಕ್ ದಟ್ಟಣೆ ಕಡಿಮೆಯಾಗುತ್ತದೆ.

ಒಂದೇ ಫಾಸ್ಟ್‌ಟ್ಯಾಗ್ ಅನ್ನು ಹಲವು ವಾಹನಗಳಲ್ಲಿ ಬಳಸುವ ದುರುಪಯೋಗವನ್ನು ಇದು ತಡೆಯುತ್ತದೆ.

ಫಾಸ್ಟ್‌ಟ್ಯಾಗ್ ಅನ್ನು ಸರಿಯಾಗಿ ಅಂಟಿಸದಿದ್ದರೆ ಅದನ್ನು ಬ್ಲಾಕ್ ಮಾಡಲಾಗುವುದು ಎಂದು NHAI ಎಚ್ಚರಿಸಿದೆ.

ಫಾಸ್ಟ್‌ಟ್ಯಾಗ್ ಆನ್ಯುವಲ್ (ವಾರ್ಷಿಕ) ಪಾಸ್ ವಂಚನೆ!

ಫಾಸ್ಟ್‌ಟ್ಯಾಗ್ ಆನ್ಯುವಲ್ ಪಾಸ್‌ಗಳನ್ನು ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಳ್ಳುವ ನಕಲಿ ವೆಬ್‌ಸೈಟ್‌ಗಳು ಮತ್ತು ಅನಧಿಕೃತ ಲಿಂಕ್‌ಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು NHAI ತಿಳಿಸಿದೆ.

ಈ ಪಾಸ್‌ಗಳು ಕೇವಲ ಅಧಿಕೃತ ‘ರಾಜಮಾರ್ಗಯಾತ್ರಾ’ (Rajmargyatra) ಆಪ್ ಮೂಲಕ ಮಾತ್ರ ಲಭ್ಯವಿರುತ್ತವೆ.

ಈ ಪಾಸ್‌ಗಳನ್ನು ಮಾರಾಟ ಮಾಡುವ ಅಧಿಕಾರ ಬೇರೆ ಯಾವುದೇ ಪ್ಲಾಟ್‌ಫಾರ್ಮ್‌ಗಳಿಗೆ ಇಲ್ಲ.

ಇಂತಹ ನಕಲಿ ಪ್ಲಾಟ್‌ಫಾರ್ಮ್‌ಗಳನ್ನು ನಂಬಿದರೆ, ಆರ್ಥಿಕ ವಂಚನೆಗೆ ಅಥವಾ ವೈಯಕ್ತಿಕ ಮಾಹಿತಿ ದುರುಪಯೋಗಕ್ಕೆ ಕಾರಣವಾಗಬಹುದು.

ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ಅಪರಿಚಿತ ಲಿಂಕ್‌ಗಳನ್ನು ನಂಬಬಾರದು ಎಂದು NHAI ಸ್ಪಷ್ಟಪಡಿಸಿದೆ. 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular