HomeLatest Newsಕೈಲಾಸ ಮಾನಸ ಸರೋವರ ಯಾತ್ರೆಗೆ ನೋಂದಣಿ ಆರಂಭ: ಈ ಬಾರಿಯ ಯಾತ್ರೆಗಿದೆ ಮೋಕ್ಷದ ಬಾಗಿಲು ತೆರೆಯುವ...

ಕೈಲಾಸ ಮಾನಸ ಸರೋವರ ಯಾತ್ರೆಗೆ ನೋಂದಣಿ ಆರಂಭ: ಈ ಬಾರಿಯ ಯಾತ್ರೆಗಿದೆ ಮೋಕ್ಷದ ಬಾಗಿಲು ತೆರೆಯುವ ‘ಅಗ್ನಿ ಕುದುರೆ ವರ್ಷ’ದ ವಿಶೇಷ

ನವದೆಹಲಿ: 2026ನೇ ಸಾಲಿನ ಕೈಲಾಸ ಮಾನಸ ಸರೋವರ ಯಾತ್ರೆಗೆ ಇಂದಿನಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಈ ವರ್ಷದ ಯಾತ್ರೆ ಅತ್ಯಂತ ಮಹತ್ವದ್ದಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಫೈರ್ ಹಾರ್ಸ್ ಅಥವಾ ಅಗ್ನಿ ಕುದುರೆ ವರ್ಷ ಎಂದು ಕರೆಯಲಾಗುತ್ತದೆ. ಏನಿದು ಅಗ್ನಿ ಕುದುರೆ ವರ್ಷ? ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರುವವರು ಏನೆಲ್ಲ ಕ್ರಮ ಅನುಸರಿಸಬೇಕು ಎಂಬ ಬಗ್ಗೆ ಇಲ್ಲಿದೆ ಸಂಕಷಿಪ್ತ ಮಾಹಿತಿ.

ಈ ಬಾರಿಯ ಕೈಲಾಸ ಮಾನಸ ಸರೋವರ ಯಾತ್ರೆಯು 60 ವರ್ಷಗಳಿಗೊಮ್ಮೆ ಬರುವ ಅಪರೂಪದ ಟಿಬೆಟಿಯನ್ ಮತ್ತು ಹಿಮಾಲಯನ್ ಜ್ಯೋತಿಷ್ಯದ ಸಂಯೋಜನೆಯ ಮಹತ್ವವನ್ನು ಸಾರುತ್ತದೆ. ಇದನ್ನು ಅಗ್ನಿ ಕುದುರೆ ವರ್ಷ ಅಥವಾ Fire Horse ಎಂದು ಕರೆಯಲಾಗುತ್ತಿದೆ. ಈ ಅವಧಿಯಲ್ಲಿ ಕೈಲಾಸ ಮಾನಸ ಸರೋವರ ದರ್ಶನ ಮಾಡುವುದು ಹಿಂದೂ, ಜೈನ ಮತ್ತು ಬೌದ್ಧ ಧರ್ಮಗಳಲ್ಲಿ ಮೋಕ್ಷದ ಬಾಗಿಲು ತೆರೆದಂತೆ ಎಂದು ನಂಬಲಾಗುತ್ತದೆ. ಈ ಸಂಯೋಗವು 60 ವರ್ಷಗಳಿಗೆ ಒಮ್ಮೆ ಬರುತ್ತದೆ. ಈ ದೈವಿಕ ಸಂಯೋಗದ ಕಾರಣದಿಂದಾಗಿ ಈ ವರ್ಷ ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕೈಲಾಸ ಯಾತ್ರೆಯ ಮೊದಲ ಬ್ಯಾಚ್ ಜೂನ್ ಮೊದಲ ವಾರದಲ್ಲಿ ಹೊರಡಲಿದೆ. ಈ ಬಾರಿ ಉತ್ತರಾಖಂಡ ಮಾರ್ಗದ ಮೂಲಕ 500 ಯಾತ್ರಿಕರಿಗೆ ಅವಕಾಶ ಕಲ್ಪಿಸಲು ಸರ್ಕಾರ ಯೋಜಿಸಿದೆ. ಹಿಮಾಲಯದ ಕಠಿಣ ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ಸಚಿವಾಲಯ ಭಕ್ತರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಿದೆ.

ವಿದೇಶಾಂಗ ಸಚಿವಾಲಯವು ಪ್ರತಿ ವರ್ಷ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆಯನ್ನು ಆಯೋಜಿಸುತ್ತದೆ. ಲಿಪುಲೇಖ್ ಪಾಸ್ (ಉತ್ತರಾಖಂಡ)ದ ಮೂಲಕ ಹಾಗೂ ನಾಥು ಲಾ ಪಾಸ್ (ಸಿಕ್ಕಿಂ) ಮೂಲಕ ಯಾತ್ರೆ ಆಯೋಜಿಸಲಾಗುತ್ತದೆ.

ಲಿಪುಲೇಖ್ ಪಾಸ್ (ಉತ್ತರಾಖಂಡ) ಇದು ಅತ್ಯಂತ ಜನಪ್ರಿಯ ಮಾರ್ಗವಾಗಿದೆ. ದೆಹಲಿಯಿಂದ ಪ್ರಾರಂಭವಾಗುವ ಯಾತ್ರೆ ತನಕ್‌ಪುರ, ಪಿಥೋರಗಢ ಮತ್ತು ಧಾರ್ಚುಲಾ ಮೂಲಕ ಲಿಪುಲೇಖ್ ಪಾಸ್ ತಲುಪುತ್ತದೆ. ಈ ಮಾರ್ಗವು ಈಗ ವಾಹನ ಸಂಚಾರಕ್ಕೆ ಹೆಚ್ಚು ಅನುಕೂಲಕರವಾಗಿದ್ದು, ಕೈಲಾಸ ಪರ್ವತದ ಪವಿತ್ರ ಪ್ರದಕ್ಷಿಣೆಯನ್ನು ಒಳಗೊಂಡಿದೆ.

ನಾಥು ಲಾ ಪಾಸ್ (ಸಿಕ್ಕಿಂ): ಈ ಮಾರ್ಗವು ದೆಹಲಿಯಿಂದ ಗ್ಯಾಂಗ್ಟಾಕ್ ಮೂಲಕ ಸಾಗುತ್ತದೆ. ಲಿಪುಲೇಖ್ ಮಾರ್ಗಕ್ಕೆ ಹೋಲಿಸಿದರೆ ಇಲ್ಲಿ ಪಾದಯಾತ್ರೆ (Trekking) ಕಡಿಮೆ ಮತ್ತು ಪ್ರಯಾಣ ಹೆಚ್ಚು ಆರಾಮದಾಯಕವಾಗಿರುತ್ತದೆ.

ಯಾತ್ರೆಯಲ್ಲಿ ಭಾಗವಹಿಸುವ ಯಾತ್ರಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಹಾಗೂ ಈ ಕೆಳಗಿನ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ವಿದೇಶಾಂಗ ಸಚಿವಾಲಯದ (MEA) ಅಧಿಕೃತ ಪೋರ್ಟಲ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಬೇಕು.
ಮಾನ್ಯತೆ ಇರುವ ಭಾರತೀಯ ಪಾಸ್‌ಪೋರ್ಟ್ ಅಥವಾ OCI ಕಾರ್ಡ್ ಮತ್ತು ಸರ್ಕಾರಿ ಗುರುತಿನ ಚೀಟಿ.
ಹೆಚ್ಚಿನ ಎತ್ತರದಲ್ಲಿ ಪ್ರಯಾಣಿಸಬೇಕಿರುವುದರಿಂದ ನವೀಕರಿಸಿದ ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರ ಅತ್ಯಗತ್ಯ.

ಯಾತ್ರಾರ್ಥಿಗಳಿಗೆ ಸೂಚನೆ:
ಕೈಲಾಸ ಮಾನಸ ಸರೋವರವು ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿರುವುದರಿಂದ ಆಮ್ಲಜನಕದ ಮಟ್ಟ ಕಡಿಮೆ ಇರುತ್ತದೆ. ಹೀಗಾಗಿ, ಪ್ರಯಾಣಕ್ಕೆ ಕೆಲವು ದಿನಗಳ ಮೊದಲು ದೇಹವನ್ನು ಅಲ್ಲಿನ ವಾತಾವರಣಕ್ಕೆ ಒಗ್ಗಿಸಿಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಈ ಇಡೀ ಯಾತ್ರೆಯು ಪೂರ್ಣಗೊಳ್ಳಲು ಹವಾಮಾನಕ್ಕೆ ಅನುಗುಣವಾಗಿ 15 ರಿಂದ 20 ದಿನಗಳು ಬೇಕಾಗುತ್ತವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular