ಬೆಂಗಳೂರು: ಕಂಪನಿ ಸಂಬಳ ನೀಡಿಲ್ಲ ಎಂದು ಕೋಪಗೊಂಡ ಇಬ್ಬರು ಉದ್ಯೋಗಿಗಳು ಬೆಂಅಗ್ಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನ ಸಿಸಿಟಿವಿ ಕೇಬಲ್ ಕಟ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿಸಿಟಿವಿ ಕೇಬಲ್ ಕಟ್ ಆಗಿರುವುದನ್ನು ಕಂಡು ಪರಿಶೀಲಿಸಿದ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಇಬ್ಬರ ಕರಾಮತ್ತು ಬೆಳಕಿಗೆ ಬಂದಿದೆ. ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಸಿಟಿವಿ ಅಳವಡಿಕೆಗೆ ಐವಿಎಸ್ ಡಿಜಿಟಲ್ ಸಲ್ಯೂಷನ್ ಕಂಪನಿಗೆ ಸಬ್ ಕಾಂಟ್ರಾಕ್ಟ್ ನೀಡಲಾಗಿತ್ತು. ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಹಾಗೂ ಅಬ್ದುಲ್ ಎಂಬುವವರು ಕೇಬಲ್ ಕಟ್ ಮಾಡಿದ್ದಾರೆ.
ಆರೋಪಿಗಳು ಸುಮಾರು 240 ಸಿಸಿಟಿವಿ ಕನಕ್ಷನ್ ಕಟ್ ಮಾಡಿದ್ದಾರೆ. ಮಂಜುನಾಥ್ ಹಾಗೂ ಅಬ್ದುಲ್ ಗೆ ಕಂಪನಿಯಿಂದ ಸಂಬಳ ನೀಡಿರಲಿಲ್ಲವಂತೆ. ಇದರಿಂದ ಕೋಪಗೊಂಡ ಇಬ್ಬರೂ ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿ ಯಾರಿಹೂ ಗೊತ್ತಾಗದಂತೆ ಕೇಬಲ್ ಕಟ್ ಮಾಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

