HomeIPL 2026IPL 2026: ಬೆಳಗ್ಗೆ ಕೊಹ್ಲಿ ಕೈನಲ್ಲಿದ್ದ ಆರೆಂಜ್ ಕ್ಯಾಪ್ ರಾತ್ರಿ ಅಭಿಷೇಕ್ ಪಾಲು; ಒಂದೇ ದಿನ...

IPL 2026: ಬೆಳಗ್ಗೆ ಕೊಹ್ಲಿ ಕೈನಲ್ಲಿದ್ದ ಆರೆಂಜ್ ಕ್ಯಾಪ್ ರಾತ್ರಿ ಅಭಿಷೇಕ್ ಪಾಲು; ಒಂದೇ ದಿನ ನಾಲ್ವರ ಕೈ ಸೇರಿದ ಆರೆಂಜ್ ಕ್ಯಾಪ್, ಇದು ಐಪಿಎಲ್‌ನಲ್ಲೇ ಮೊದಲು!

ನಿನ್ನೆ ( ಏಪ್ರಿಲ್ 25 ) ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 35 ಮತ್ತು 36ನೇ ಪಂದ್ಯಗಳು ಜರುಗಿದವು. ಎರಡೂ ಪಂದ್ಯಗಳು ಸೇರಿದಂತೆ ಬರೋಬ್ಬರಿ 986 ರನ್‌ಗಳ ಹೊಳೆಯೇ ಹರಿದುಬಂತು.

ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್ ತಂಡಕ್ಕೆ 265 ರನ್ ಗಳ ಬೃಹತ್ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 265 ರನ್ ಬಾರಿಸಿ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಗುರಿ ಬೆನ್ನಟ್ಟಿದ ದಾಖಲೆ ಬರೆಯಿತು.

ನಂತರ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್ ಅರ್ಧಶತಕಗಳ ನೆರವಿನಿಂದ 18.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 229 ರನ್ ಕಲೆಹಾಕಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಎರಡು ಪಂದ್ಯಗಳು ಆರಂಭವಾಗುವ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರಾಟ್ ಕೊಹ್ಲಿ ಬಳಿ ಇದ್ದ ಆರೆಂಜ್ ಕ್ಯಾಪ್ ಪಂದ್ಯ ಮುಗಿದ ಬಳಿಕ ಅಭಿಷೇಕ್ ಶರ್ಮಾ ಕೈಸೇರಿತು. ಇದಕ್ಕೂ ಮುನ್ನ ಕೆಎಲ್ ರಾಹುಲ್ ಹಾಗೂ ವೈಭವ್ ಸೂರ್ಯವಂಶಿ ಬಳಿಗೂ ಸಹ ಆರೆಂಜ್ ಕ್ಯಾಪ್ ಹೋಗಿಬಂದಿತ್ತು. ಹೀಗೆ ಆರೆಂಜ್ ಕ್ಯಾಪ್ ಒಂದೇ ದಿನ ನಾಲ್ವರ ಪಾಲಾದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆಯಿತು.

ಮೊದಲಿಗೆ 328 ರನ್ ಬಾರಿಸಿದ್ದ ಕೊಹ್ಲಿ ಬಳಿ ಇದ್ದ ಆರೆಂಜ್ ಕ್ಯಾಪ್ 152 ರನ್ ಚಚ್ಚಿ ಟೂರ್ನಿಯಲ್ಲಿ ಒಟ್ಟು 357 ರನ್ ಬಾರಿಸಿದ ಕೆಎಲ್ ರಾಹುಲ್ ಶಿರ ಅಲಂಕರಿಸಿತು. ಸಂಜೆ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 103 ರನ್ ಬಾರಿಸಿ 357 ರನ್ ಮುಟ್ಟಿದ ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ತೊಟ್ಟರು. ಇದೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅಭಿಷೇಕ್ ಶರ್ಮಾ 57 ರನ್ ಕಲೆಹಾಕುವ ಮೂಲಕ ಟೂರ್ನಿಯಲ್ಲಿ ಒಟ್ಟು 380 ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular