HomeKarnatakaBREAKING : ಮದುವೆ ಸಮಾರಂಭಗಳಲ್ಲಿ ಮಕ್ಕಳ ಚಿನ್ನಾಭರಣ ಕದಿಯುತ್ತಿದ್ದ ಕುಖ್ಯಾತ ಕಳ್ಳ 'ಪಲ್ಸರ್ ಬಾಬು' ಬಂಧನ

BREAKING : ಮದುವೆ ಸಮಾರಂಭಗಳಲ್ಲಿ ಮಕ್ಕಳ ಚಿನ್ನಾಭರಣ ಕದಿಯುತ್ತಿದ್ದ ಕುಖ್ಯಾತ ಕಳ್ಳ ‘ಪಲ್ಸರ್ ಬಾಬು’ ಬಂಧನ

ಮದುವೆ ಸಮಾರಂಭಗಳಲ್ಲಿ ಅತಿಥಿಯಂತೆ ನಟಿಸಿ ಮಕ್ಕಳ ಮೈಮೇಲಿದ್ದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಸರಣಿ ಕಳ್ಳ ‘ಪಲ್ಸರ್ ಬಾಬು’ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ ₹5.5 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮದುವೆ ಮನೆಗಳಿಗೆ ಅತಿಥಿಯಂತೆ ನುಗ್ಗಿ ಕಳ್ಳತನ ಮಾಡುತ್ತಿದ್ದ ವಿಶಿಷ್ಟ ಕಾರ್ಯಾಚರಣೆಯ ಕಳ್ಳನನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಅಂತಿಮವಾಗಿ ಸೆರೆಹಿಡಿದಿದ್ದಾರೆ. ಬಂಧಿತ ಆರೋಪಿಯನ್ನು ಪೀಣ್ಯ 2ನೇ ಹಂತದ ನಿವಾಸಿ ಎಚ್.ಕೆ. ಬಾಬು ಎಂದು ಗುರುತಿಸಲಾಗಿದ್ದು, ಈತ ಅಪರಾಧ ಲೋಕದಲ್ಲಿ ‘ಪಲ್ಸರ್ ಬಾಬು’ ಎಂದೇ ಕುಖ್ಯಾತನಾಗಿದ್ದಾನೆ.

ಏಳು ವರ್ಷದ ಬಾಲಕಿಯ ಸರ ಅಪಹರಣ : ಇತ್ತೀಚೆಗೆ ಥಣಿಸಂದ್ರ ಮುಖ್ಯರಸ್ತೆಯ ಕಲ್ಯಾಣ ಮಂಟಪವೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಬಾಬು ಏಳು ವರ್ಷದ ಬಾಲಕಿಯ ಬಳಿ ಹೋಗಿದ್ದ. ಆಕೆಯೊಂದಿಗೆ ಮಾತನಾಡಿದಂತೆ ನಟಿಸಿ, ಅತಿ ಚಾಣಾಕ್ಷತನದಿಂದ ಆಕೆಯ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ದೂರು ದಾಖಲಾದ ಬೆನ್ನಲ್ಲೇ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಈತನನ್ನು ಪತ್ತೆ ಹಚ್ಚಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಾಣಾಕ್ಷ ಕಳ್ಳನ ಕಾರ್ಯಾಚರಣೆ ಹೀಗಿತ್ತು: ಮೂಲತಃ ಚನ್ನಪಟ್ಟಣ ತಾಲೂಕಿನ ಹೊನ್ನನಾಯಕನಹಳ್ಳಿ ಗ್ರಾಮದವನಾದ ಬಾಬು, ಮದುವೆ ಮನೆಗಳಲ್ಲೇ ಕಳ್ಳತನ ಮಾಡುವುದರಲ್ಲಿ ನಿಸ್ಸೀಮ. ಈತನ ವಿರುದ್ಧ ಈಗಾಗಲೇ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳು ದಾಖಲಾಗಿವೆ.ಈತ ಚೆನ್ನಾಗಿ ಉಡುಪು ಧರಿಸಿ, ಯಾರೂ ಅನುಮಾನ ಪಡದಂತೆ ಅತಿಥಿಯಂತೆ ಮದುವೆ ಮನೆ ಪ್ರವೇಶಿಸುತ್ತಿದ್ದ.ಮದುವೆ ಮನೆಯಲ್ಲಿ ಆಟವಾಡುತ್ತಿರುವ ಮಕ್ಕಳನ್ನು ಗುರುತಿಸಿ, ಅವರ ಬಳಿ ಹೋಗಿ ಮುದ್ದಾಡುವಂತೆ ನಟಿಸುತ್ತಿದ್ದ. ಎಲ್ಲರೂ ಸಂಭ್ರಮದಲ್ಲಿ ಮಗ್ನರಾಗಿದ್ದಾಗ ಮಕ್ಕಳ ಮೈಮೇಲಿನ ಒಡವೆಗಳನ್ನು ಲಪಟಾಯಿಸುತ್ತಿದ್ದ.

ವಧು-ವರರ ರೂಮಿನಲ್ಲೂ ಕಳ್ಳತನ: ಕೇವಲ ಮಕ್ಕಳಷ್ಟೇ ಅಲ್ಲದೆ, ವಧು-ವರರ ಕೊಠಡಿಗಳಿಗೆ ನುಗ್ಗಿ ಅಲ್ಲಿ ಸಿಗುವ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಫೆಬ್ರವರಿ 8ರಂದು ಥಣಿಸಂದ್ರ ಮುಖ್ಯರಸ್ತೆಯ ಇಬಿಸಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆಯಲ್ಲಿ ಏಳು ವರ್ಷದ ಬಾಲಕಿಯಿಂದ ಒಟ್ಟು 70 ಗ್ರಾಂ ತೂಕದ ಚಿನ್ನದ ಸರ ಮತ್ತು ಬಳೆಗಳನ್ನು ಈತ ಕದ್ದಿದ್ದ. ಸದ್ಯ ಪೊಲೀಸರು ಈತನಿಂದ ₹5.5 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular