ಬೆಂಗಳೂರು: ಬೆಳಗ್ಗಿನ ಉಪಹಾರಕ್ಕೆ ಇಡ್ಲಿ-ದೋಸೆ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕೆಲಸದ ಒತ್ತಡದಲ್ಲಿ ಹೆಚ್ಚಿನವರು ವಾರಕ್ಕೆ ಆಗುವಷ್ಟು ಹಿಟ್ಟನ್ನು ಒಂದೇ ಬಾರಿ ರುಬ್ಬಿ ಫ್ರಿಜ್‌ನಲ್ಲಿ ಶೇಖರಿಸಿ ಇಡುತ್ತಾರೆ. ಆದರೆ, ಇದು ಸೌಕರ್ಯದ ಜೊತೆಗೆ ದೊಡ್ಡ ಕಾಯಿಲೆಗಳನ್ನು ತಂದೊಡ್ಡಬಹುದು ಎಂಬುದು ನಿಮಗೆ ಗೊತ್ತೇ?
ಹಳೆಯ ಹಿಟ್ಟಿನಿಂದ ಹೊಂಚು ಹಾಕುತ್ತಿದೆ ಅಪಾಯ
3 ದಿನಗಳೇ ಲಿಮಿಟ್: ಅಕ್ಕಿ ಮತ್ತು ಉದ್ದಿನ ಹಿಟ್ಟು 3 ದಿನಗಳಿಗಿಂತ ಹೆಚ್ಚು ಕಾಲ ಫ್ರಿಜ್‌ನಲ್ಲಿಟ್ಟರೆ ಅದರಲ್ಲಿ ಅಪಾಯಕಾರಿ ಈಸ್ಟ್ ಮತ್ತು ಆಲ್ಕೋಹಾಲ್ ತರಹದ ಅಂಶಗಳು ಸೃಷ್ಟಿಯಾಗುತ್ತವೆ.
ಆಸಿಡಿಟಿ ಕಾಟ: ಅತಿಯಾಗಿ ಹುದುಗಿದ (Fermented) ಹಿಟ್ಟನ್ನು ಬಳಸುವುದರಿಂದ ಎದೆಯುರಿ, ಗ್ಯಾಸ್ ಮತ್ತು ತೀವ್ರ ಆಸಿಡಿಟಿ ಸಮಸ್ಯೆ ಕಾಡುತ್ತದೆ.
ಫುಡ್ ಪಾಯಿಸನಿಂಗ್ ಭೀತಿ: ಹಳೆಯ ಹಿಟ್ಟಿನಲ್ಲಿ ‘ಸಾಲ್ಮೊನೆಲ್ಲಾ’ ಎಂಬ ಬ್ಯಾಕ್ಟೀರಿಯಾಗಳು ಬೆಳೆಯುವ ಸಾಧ್ಯತೆ ಇರುತ್ತದೆ. ಇದು ವಾಂತಿ ಮತ್ತು ಭೇದಿಗೆ ಕಾರಣವಾಗಬಹುದು.
ಬೇಸಿಗೆಯಲ್ಲಿ ಅತಿ ವೇಗ: ಸದ್ಯದ ಬಿಸಿಲಿಗೆ ಹಿಟ್ಟು 8-10 ಗಂಟೆಗಳ ಬದಲು ಕೇವಲ 4-5 ಗಂಟೆಯಲ್ಲೇ ಅತಿಯಾಗಿ ಹುಳಿಯಾಗುತ್ತದೆ. ಇದು ಆಹಾರವನ್ನು ವಿಷಕಾರಿಯಾಗಿಸಬಹುದು.
ಹಿಟ್ಟು ಕೆಡದಂತೆ ತಡೆಯಲು ಈ ಟಿಪ್ಸ್ ಫಾಲೋ ಮಾಡಿ:
ಉಪ್ಪು ಹಾಕಬೇಡಿ: ಹಿಟ್ಟನ್ನು ಫ್ರಿಜ್‌ನಲ್ಲಿ ಇಡುವಾಗ ಮೊದಲೇ ಉಪ್ಪು ಸೇರಿಸಬೇಡಿ. ಉಪ್ಪು ಹಾಕದಿದ್ದರೆ ಹಿಟ್ಟು ಬೇಗ ಹುಳಿಯಾಗುವುದಿಲ್ಲ.
ಸ್ಟೀಲ್ ಪಾತ್ರೆ ಬಳಸಿ: ಪ್ಲಾಸ್ಟಿಕ್ ಡಬ್ಬಗಳಿಗಿಂತ ಸ್ಟೀಲ್ ಅಥವಾ ಗಾಜಿನ ಪಾತ್ರೆಗಳಲ್ಲಿ ಹಿಟ್ಟು ಸಂಗ್ರಹಿಸುವುದು ಆರೋಗ್ಯಕರ.
ಫಿಲ್ಟರ್ ನೀರು ಬಳಸಿ: ಹಿಟ್ಟು ರುಬ್ಬುವಾಗ ನಲ್ಲಿ ನೀರಿನ ಬದಲು ಶೋಧಿಸಿದ ನೀರನ್ನು ಬಳಸುವುದರಿಂದ ಬ್ಯಾಕ್ಟೀರಿಯಾ ಸೋಂಕು ತಡೆಯಬಹುದು.
ವಾಸನೆ ಗಮನಿಸಿ: ಹಿಟ್ಟು ಬಣ್ಣ ಬದಲಾಗಿದ್ದರೆ ಅಥವಾ ವಿಪರೀತ ಹುಳಿ ವಾಸನೆ ಬರುತ್ತಿದ್ದರೆ ಅದನ್ನು ತಕ್ಷಣ ಎಸೆದುಬಿಡಿ.

