ಬೆಂಗಳೂರು: ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಬೇಕಾದರೆ ಕೇವಲ ದೇವರ ಕೋಣೆ ಮಾತ್ರವಲ್ಲ, ಶೌಚಾಲಯವೂ ವಾಸ್ತು ಪ್ರಕಾರ ಇರುವುದು ಅತಿ ಮುಖ್ಯ. ಆಧುನಿಕ ಜೀವನಶೈಲಿಯಲ್ಲಿ ಮನೆಯೊಳಗೇ ಅಟ್ಯಾಚ್ಡ್ ಬಾತ್ರೂಮ್ಗಳು ಕಾಮನ್ ಆಗಿವೆ. ಆದರೆ ಇವುಗಳು ಸರಿಯಾದ ದಿಕ್ಕಿನಲ್ಲಿಲ್ಲದಿದ್ದರೆ ಆರ್ಥಿಕ ನಷ್ಟ ಮಾತ್ರವಲ್ಲ, ಆರೋಗ್ಯದ ಮೇಲೂ ಗಂಭೀರ ಪರಿಣಾಮ ಬೀರಬಹುದು
ವಾಸ್ತು ದೋಷದಿಂದಾಗುವ ಅಪಾಯಗಳೇನು?
ನೆಮ್ಮದಿಗೆ ಭಂಗ: ಮನೆಯಲ್ಲಿ ಸದಾ ಮಾನಸಿಕ ಒತ್ತಡ ಮತ್ತು ಅಶಾಂತಿ ಇರುತ್ತದೆ.
ಆರ್ಥಿಕ ನಷ್ಟ: ಅನಗತ್ಯ ಖರ್ಚುಗಳು ಹೆಚ್ಚಾಗಿ, ಸಂಪತ್ತು ಕೈಯಲ್ಲಿ ಉಳಿಯುವುದಿಲ್ಲ.
ಆರೋಗ್ಯ ಸಮಸ್ಯೆ: ದೈಹಿಕ ಅಸ್ವಸ್ಥತೆ ಹಾಗೂ ಮನೆಯ ಸದಸ್ಯರಿಗೆ ಪದೇ ಪದೇ ಅನಾರೋಗ್ಯ ಕಾಡಬಹುದು.
ಪಾಲಿಸಬೇಕಾದ ಗೋಲ್ಡನ್ ರೂಲ್ಸ್:
ಸೂಕ್ತ ದಿಕ್ಕು: ಶೌಚಾಲಯ ನಿರ್ಮಾಣಕ್ಕೆ ಪಶ್ಚಿಮ ಅಥವಾ ವಾಯುವ್ಯ (NW) ದಿಕ್ಕು ಅತ್ಯಂತ ಶ್ರೇಷ್ಠ. ಮಲಗುವ ಕೋಣೆಗೆ ಹೊಂದಿಕೊಂಡಿದ್ದರೆ ಪಶ್ಚಿಮ ಭಾಗ ಉತ್ತಮ.
ಇಲ್ಲಿ ಬೇಡ: ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಶೌಚಾಲಯ ಇರಲೇಬಾರದು. ಇದು ಮನೆಯ ಧನಾತ್ಮಕ ಶಕ್ತಿಯನ್ನು ಕುಂದಿಸುತ್ತದೆ.
ಕಮೋಡ್ ಸ್ಥಾನ: ಕಮೋಡ್ ಮೇಲೆ ಕುಳಿತಾಗ ಮುಖ ಪೂರ್ವ ಅಥವಾ ಉತ್ತರ ದಿಕ್ಕಿಗೆ ಇರಬಾರದು.
ನೀರಿನ ಹರಿವು: ಸ್ನಾನದ ಕೋಣೆಯ ತ್ಯಾಜ್ಯ ನೀರು ಯಾವಾಗಲೂ ಉತ್ತರ ಅಥವಾ ಪೂರ್ವ ದಿಕ್ಕಿಗೆ ಹರಿಯುವಂತಿರಲಿ.
ಬಾಗಿಲು: ಬಾತ್ರೂಮ್ ಬಾಗಿಲು ಯಾವಾಗಲೂ ಮುಚ್ಚಿರಲಿ. ಇದು ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯುತ್ತದೆ.
ಬಣ್ಣಗಳ ಆಯ್ಕೆ: ತಿಳಿ ಬಣ್ಣಗಳಾದ ಬಿಳಿ, ಆಕಾಶ ನೀಲಿ ಅಥವಾ ತಿಳಿ ಬೂದು ಬಣ್ಣ ಬಳಸುವುದು ಧನಾತ್ಮಕ ಕಂಪನಗಳಿಗೆ ಸಹಕಾರಿ.

