HomeLatest Newsಇನ್ಮುಂದೆ 'ಗ್ಯಾಸ್ ಬುಕಿಂಗ್' ಕಿರಿಕಿರಿ ಇಲ್ಲ ! ಕೇವಲ ಆಧಾರ್ ತೋರಿಸಿ 5 ನಿಮಿಷದಲ್ಲಿ 5...

ಇನ್ಮುಂದೆ ‘ಗ್ಯಾಸ್ ಬುಕಿಂಗ್’ ಕಿರಿಕಿರಿ ಇಲ್ಲ ! ಕೇವಲ ಆಧಾರ್ ತೋರಿಸಿ 5 ನಿಮಿಷದಲ್ಲಿ 5 ಕೆ.ಜಿ ಸಿಲಿಂಡರ್ ಪಡೆಯಿರಿ.!

ನೀವು ಒಬ್ಬರೇ ವಾಸವಿದ್ದರೂ ಅಥವಾ ಚಿಕ್ಕ ಕುಟುಂಬವಾಗಿದ್ದರೂ, ತುರ್ತು ಸಂದರ್ಭಗಳಲ್ಲಿ ಈ 5 ಕೆಜಿ ಸಿಲಿಂಡರ್ ನಿಮಗೊಂದು ಉತ್ತಮ ಆಯ್ಕೆಯಾಗಿದೆ. ಯಾವುದೇ ದಾಖಲೆಗಳ ಕಿರಿಕಿರಿ ಇಲ್ಲದೆ ತಕ್ಷಣವೇ ಗ್ಯಾಸ್ ಸೌಲಭ್ಯ ಪಡೆಯಲು ಇದೊಂದು ಸುವರ್ಣಾವಕಾಶ. ಈಗ ಗ್ಯಾಸ್ ಸಿಲಿಂಡರ್ ಪಡೆಯುವುದು ಹಿಂದಿಗಿಂತಲೂ ಸುಲಭವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ಮತ್ತು ಬಾಡಿಗೆ ಮನೆಯಲ್ಲಿ ವಾಸಿಸುವವರಿಗೆ ಇದು ದೊಡ್ಡ ಸಮಾಧಾನದ ಸುದ್ದಿ. ಇನ್ಮುಂದೆ ಅಡ್ರೆಸ್ ಪ್ರೂಫ್ (ವಿಳಾಸದ ಪುರಾವೆ) ಇಲ್ಲವೆಂದು ಚಿಂತಿಸುವ ಅಗತ್ಯವಿಲ್ಲ. ಕೇವಲ ಒಂದು ಗುರುತಿನ ಚೀಟಿಯೊಂದಿಗೆ 5 ನಿಮಿಷಗಳಲ್ಲಿ ನೀವು ಅಡುಗೆ ಅನಿಲವನ್ನು ಮನೆಗೆ ಕೊಂಡೊಯ್ಯಬಹುದು.

ಏನಿದು 5 ಕೆಜಿ FTL ಸಿಲಿಂಡರ್ ಯೋಜನೆ ?

ಪ್ರಮುಖ ತೈಲ ಕಂಪನಿಗಳು 5 ಕೆಜಿಯ FTL (Free Trade LPG) ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಇದರ ವಿಶೇಷತೆಗಳೆಂದರೆ:

  1. ಬುಕಿಂಗ್ ಅಗತ್ಯವಿಲ್ಲ: ಸಾಲಿನಲ್ಲಿ ನಿಲ್ಲುವ ಅಥವಾ ಆನ್‌ಲೈನ್ ಬುಕಿಂಗ್‌ಗಾಗಿ ಕಾಯುವ ಅವಶ್ಯಕತೆಯಿಲ್ಲ.
  2. ಡೆಪಾಸಿಟ್ ಹೊರೆಯಿಲ್ಲ: ಹೆಚ್ಚಿನ ಮೊತ್ತದ ಡೆಪಾಸಿಟ್ ಪಾವತಿಸದೆ ನೇರವಾಗಿ ಖರೀದಿಸಬಹುದು.
  3. ಸುಲಭ ರೀಫಿಲ್ಲಿಂಗ್: ಒಮ್ಮೆ ಸಿಲಿಂಡರ್ ಪಡೆದರೆ, ದೇಶಾದ್ಯಂತ ಯಾವುದೇ ಡೀಲರ್ ಬಳಿ ಕೇವಲ 10 ನಿಮಿಷಗಳಲ್ಲಿ ರೀಫಿಲ್ ಮಾಡಿಸಿಕೊಳ್ಳಬಹುದು.

ಸಾಲಿನಲ್ಲಿ ನಿಲ್ಲುವ ಕೆಲಸವಿಲ್ಲ. ಆನ್‌ಲೈನ್ ಬುಕಿಂಗ್‌ಗಾಗಿ ಕಾಯಬೇಕಾದ ಅವಶ್ಯಕತೆಯೂ ಇಲ್ಲ. ಕೇವಲ ಆಧಾರ್ ಕಾರ್ಡ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್ ಅಥವಾ ಪಾನ್ ಕಾರ್ಡ್‌ನಂತಹ ಯಾವುದೇ ಸರ್ಕಾರಿ ಗುರುತಿನ ಚೀಟಿ ಇದ್ದರೆ ಸಾಕು. ಹೆಚ್ಚಿನ ಮೊತ್ತದ ಡೆಪಾಸಿಟ್ ಹಣ ಪಾವತಿಸುವ ಅಗತ್ಯವಿಲ್ಲದೆ ಈ ಸಿಲಿಂಡರ್‌ಗಳನ್ನು ಖರೀದಿಸಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಿ ಬೇಕಾದರೂ ರೀಫಿಲ್ ಮಾಡಬಹುದು: ಒಮ್ಮೆ ಸಿಲಿಂಡರ್ ಪಡೆದರೆ, ದೇಶಾದ್ಯಂತ ಯಾವುದೇ ಡೀಲರ್ ಬಳಿ ಕೇವಲ 10 ನಿಮಿಷಗಳಲ್ಲಿ ರೀಫಿಲ್ ಮಾಡಿಸಿಕೊಳ್ಳುವ ಸೌಲಭ್ಯವಿದೆ. ಪ್ರಮುಖ ಗ್ಯಾಸ್ ಕಂಪನಿಗಳು ಈ ವಿಶೇಷವಾದ 5 ಕೆಜಿಯ FTL (Free Trade LPG) ಸಿಲಿಂಡರ್‌ಗಳನ್ನು ಲಭ್ಯವಾಗಿಸಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ: ಪ್ರಸ್ತುತ ಈ 5 ಕೆಜಿ ಸಿಲಿಂಡರ್ ಬೆಲೆ ಅಂದಾಜು ₹649 ಆಗಿದೆ (ಪ್ರದೇಶಕ್ಕೆ ಅನುಗುಣವಾಗಿ ಬೆಲೆಯಲ್ಲಿ ಸಲ್ಪ ಬದಲಾವಣೆ ಇರಬಹುದು).

ಎಲ್ಲಿ ದೊರೆಯುತ್ತವೆ?: ನಿಮ್ಮ ಹತ್ತಿರದ ಗ್ಯಾಸ್ ಏಜೆನ್ಸಿಗಳು ಅಥವಾ ಡಿಸ್ಟ್ರಿಬ್ಯೂಟರ್‌ಗಳ ಬಳಿ. ಕೆಲವು ಆಯ್ದ ಕಿರಾಣಿ ಅಂಗಡಿಗಳು ಮತ್ತು ರಿಟೇಲ್ ಔಟ್‌ಲೆಟ್‌ಗಳಲ್ಲಿಯೂ ಇವು ಲಭ್ಯವಿವೆ.

ವಲಸೆ ಕಾರ್ಮಿಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು 2026ರ ಏಪ್ರಿಲ್‌ನಿಂದ ಈ ಸಿಲಿಂಡರ್‌ಗಳ ಹಂಚಿಕೆಯನ್ನು ದುಪ್ಪಟ್ಟು ಮಾಡಿದೆ. ಇದುವರೆಗೆ ದೇಶಾದ್ಯಂತ ಸುಮಾರು 15.5 ಲಕ್ಷ ಸಿಲಿಂಡರ್‌ಗಳು ಮಾರಾಟವಾಗಿವೆ ಎಂದರೆ ಇದರ ಅಗತ್ಯ ಎಷ್ಟಿದೆ ಎಂದು ಅರ್ಥಮಾಡಿಕೊಳ್ಳಬಹುದು. ಇದರ ಬಗ್ಗೆ ಜಾಗೃತಿ ಮೂಡಿಸಲು ತೈಲ ಕಂಪನಿಗಳು ದೇಶಾದ್ಯಂತ ಸಾವಿರಾರು ಶಿಬಿರಗಳನ್ನು ನಡೆಸುತ್ತಿವೆ.ಯಾವುದೇ ದಾಖಲೆಗಳ ತಲೆನೋವಿಲ್ಲದೆ ತಕ್ಷಣ ಗ್ಯಾಸ್ ಪಡೆಯಲು ಇದು ಅತ್ಯುತ್ತಮ ಅವಕಾಶವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular