HomeKarnatakaಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಪೊಲೀಸ್, ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ವಿತರಣೆ

ಕಾಲು ಜಾರಿ ನದಿಗೆ ಬಿದ್ದು ಮೃತಪಟ್ಟ ಪೊಲೀಸ್, ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ವಿತರಣೆ

ಶಿವಮೊಗ್ಗ: ಪೊಲೀಸ್ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಸರ್ಕಾರದಿಂದ ಎಂಒಯು ಮಾಡಿಕೊಂಡ ಬ್ಯಾಂಕ್‌ಗಳು ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ತಿಳಿಸಿದರು.

 ದಿ: 12-10-2025 ರಂದು ಭದ್ರಾವತಿಯ ಭದ್ರಾ ನದಿಯಲ್ಲಿ ಕಾಲು ಜಾರಿ ಬಿದ್ದು ಮುಳುಗಿ ಮರಣ ಹೊಂದಿದ್ದ ಎಲ್. ಚಂದ್ರಶೇಖರ್, ಆರ್‌ಹೆಚ್‌ಸಿ-60, 8ನೇ ಪಡೆ, ಕೆಎಸ್‌ಆರ್‌ಪಿ, ಶಿವಮೊಗ್ಗ ಇವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ನೀಡಲಾದ ರೂ.1 ಕೋಟಿ ಪರಿಹಾರ ಚೆಕ್ ವಿತರಣೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 ಶನಿವಾರ 8ನೇ ಪಡೆ, ಕೆಎಸ್‌ಆರ್‌ಪಿ, ಮಾಚೇನಹಳ್ಳಿ, ಶಿವಮೊಗ್ಗ ಇಲ್ಲಿ ಶನಿವಾರ ದಿವಂಗತ ಎಲ್ ಚಂದ್ರಶೇಖರ್‌ರವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್‌ ಅನ್ನು ವಿತರಣೆ ಮಾಡಲು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಮೃತ ಎಲ್ ಚಂದ್ರಶೇಖರ್‌ ರವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಶಿವಮೊಗ್ಗ ಶಾಖೆಯಲ್ಲಿ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಖಾತೆದಾರರಾಗಿರುತ್ತಾರೆ. ಆದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಈ ಸೌಲಭ್ಯ ದೊರೆಯುತ್ತಿದೆ ಎಂದರು.

 ಎಸ್. ಯುವಕುಮಾರ್, ಕಮಾಂಡೆಂಟ್, 8ನೇ ಪಡೆ, ಕೆಎಸ್‌ಆರ್‌ಪಿ ಶಿವಮೊಗ್ಗ ಇವರು ಮಾತನಾಡಿ, ನೌಕರರು ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಅಪಘಾತ, ದುರ್ಘಟನೆಗಳು ಸಂಭವಿಸಿದಾಗ ಕುಟುಂಬವು ಆರ್ಥಿಕ ದುಸ್ಥಿತಿಗೆ ಒಳಗಾಗದಂತೆ ತಡೆಯುವ ಸಲುವಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಿಎಂಎಸ್‌ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಹಾಗೂ ಪೊಲೀಸ್ ಸ್ಯಾಲರಿ ಪ್ಯಾಕೇಜ್‌ಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.

 ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಮುಚಾರ್ಲರವರು ಎಲ್. ಚಂದ್ರಶೇಖರ್‌ ರವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ ರೂ.1 ಕೋಟಿ ಚೆಕ್‌ ನ್ನು ವಿತರಣೆ ಮಾಡಿದರು. ಈ ವೇಳೆ ಎಸ್‌ಬಿಐ ನ ಪ್ರಾದೇಶಿಕ ಪ್ರಬಂಧಕರು ವಿಜಯ್ ಸಾಯಿ ಮದುಗುಲ, ಎಸ್‌ಬಿಐ(ಡಿ-ವಿಎಎಸ್)ಮುಖ್ಯ ಪ್ರಬಂಧಕರಾದ ಕೆ.ಪುಷ್ಪಲತಾ, ಎಸ್‌ಬಿಐ ಬಿ ಹೆಚ್ ರಸ್ತೆ ಶಾಖೆಯ ಮುಖ್ಯ ಪ್ರಬಂಧಕದ ಪ್ರಕಾಶ್‌ ಕುಮಾರ್, ಮತ್ತು 8ನೇ ಪಡೆಯ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular