HomeIPL 2026ಮುಂಬೈ ಇಂಡಿಯನ್ಸ್‌ನಲ್ಲಿ ಬಿರುಕು; ನಾಯಕ ಪಾಂಡ್ಯಗಿಲ್ಲ ಬೆಲೆ, ಬುಮ್ರಾ - ಪಾಂಡ್ಯ ಕಿತ್ತಾಟ ಕಂಡು ತಲೆ...

ಮುಂಬೈ ಇಂಡಿಯನ್ಸ್‌ನಲ್ಲಿ ಬಿರುಕು; ನಾಯಕ ಪಾಂಡ್ಯಗಿಲ್ಲ ಬೆಲೆ, ಬುಮ್ರಾ – ಪಾಂಡ್ಯ ಕಿತ್ತಾಟ ಕಂಡು ತಲೆ ಮೇಲೆ ಕೈಹೊತ್ತ ರೋಹಿತ್; ವಿಡಿಯೊ

ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಹೀನಾಯ ಆರಂಭ ಪಡೆದುಕೊಂಡಿದೆ.

ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್ ಬಳಿಕ ನಡೆದ ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಹೀನಾಯ ಸೋಲುಂಡು ಇಂದಿಗೆ ( ಏಪ್ರಿಲ್ 17 ) ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.

ಅದರಲ್ಲಿಯೂ ನಿನ್ನೆ ( ಏಪ್ರಿಲ್ 16 ) ತವರು ವಾಂಖೆಡೆಯಲ್ಲಿ ನಡೆದ ಪಂದ್ಯದಲ್ಲಿ ಹಾಲಿ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮುಗ್ಗರಿಸಿ ಸೋತು ಮುಖಭಂಗಕ್ಕೊಳಗಾಯಿತು. ಡಿ ಕಾಕ್ ಶತಕ ಬಾರಿಸದ್ದು ಬಿಟ್ಟರೆ ಮುಂಬೈ ಪರ ಹೇಳಿಕೊಳ್ಳುವಂತಹ ಅಂಶ ನಿನ್ನೆಯ ಪಂದ್ಯದಲ್ಲಿ ಇನ್ನೇನೂ ಇಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂಡದಲ್ಲಿ ವಿಶ್ವಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಜಸ್‌ಪ್ರೀತ್ ಬುಮ್ರಾ ಇದ್ದರೂ ಸಹ ಮುಂಬೈ ಇಂಡಿಯನ್ಸ್ ಬೌಲಿಂಗ್ ವಿಫಲ ಹೊಂದಿದೆ. ಬುಮ್ರಾ ಟೂರ್ನಿಯಲ್ಲಿ ಇಲ್ಲಿಯವರೆಗೂ ಒಂದೂ ವಿಕೆಟ್ ಪಡೆಯದೇ ಫಾರ್ಮ್ ಕಳೆದುಕೊಂಡಂತಿದೆ.

ಇಷ್ಟೆಲ್ಲ ನ್ಯೂನತೆಗಳು ತಂಡವನ್ನು ಕಾಡುತ್ತಿರುವ ಸಂದರ್ಭದಲ್ಲೇ ಮತ್ತೊಮ್ಮೆ ಮುಂಬೈಗೆ ಹಾರ್ದಿಕ್ ಪಾಂಡ್ಯ ನಾಯಕನಾಗಿ ಎಷ್ಟು ಯೋಗ್ಯ ಎಂಬ ಪ್ರಶ್ನೆಗಳು ಎದ್ದಿವೆ. ನಿನ್ನೆಯ ಪಂದ್ಯದಲ್ಲಿ ಆಟಗಾರರು ಹಾಗೂ ಪಾಂಡ್ಯ ನಡುವಿನ ಕೆಲ ಸನ್ನಿವೇಶಗಳು ಪಾಂಡ್ಯ ನಾಯಕತ್ವದಲ್ಲಿ ಎಲ್ಲವೂ ಸರಿ ಇಲ್ಲ ಎಂಬ ಅನುಮಾನಗಳನ್ನು ಮೂಡಿಸಿದೆ.

ಅದರಲ್ಲಿಯೂ ಜಸ್‌ಪ್ರೀತ್ ಬುಮ್ರಾ ಕ್ಯಾಚ್ ಡ್ರಾಪ್ ಮಾಡಿದಾಗ ಹಾರ್ದಿಕ್ ಪಾಂಡ್ಯ ನಡೆದುಕೊಂಡ ರೀತಿ ಬುಮ್ರಾ ಮೇಲೆ ಪರಿಣಾಮ ಬೀರಿದೆ. ಈ ಕುರಿತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ನೆಟ್ಟಿಗರು ಮುಂಬೈ ತಂಡದಲ್ಲಿ ಸಮಸ್ಯೆಗಳಿವೆ, ನಾಯಕನ ಬದಲಾವಣೆಯಾಗಬೇಕಿದೆ ಎಂದಿದ್ದಾರೆ. ಕೆಲವರು ಬೌಲರ್‌ಗೆ ಬೇಕಾದ ರೀತಿ ಫೀಲ್ಡ್ ಸೆಟ್ ಮಾಡಿಕೊಳ್ಳಲು ಬಿಡದ ಪಾಂಡ್ಯ ತನ್ನ ಮಾತೇ ನಡೆಯಬೇಕು ಎಂದು ಹಠಕ್ಕೆ ಬಿದ್ದು ಫೀಲ್ಡ್ ಸೆಟ್ ಮಾಡಿಕೊಳ್ಳುತ್ತಾರೆ ಎಂಬ ಗಂಭೀರ ಆರೋಪವನ್ನೂ ಸಹ ಮಾಡಿದ್ದಾರೆ. ಇನ್ನೂ ಕೆಲವರು ಪಾಂಡ್ಯಗೆ ನಾಯಕನಿಗೆ ಸಿಗಬೇಕಾದ ಬೆಲೆಯನ್ನು ತಂಡದ ಸಹ ಆಟಗಾರರು ನೀಡುತ್ತಿಲ್ಲ ಎಂದೂ ಸಹ ಬರೆದುಕೊಂಡಿದ್ದಾರೆ.

ಹೀಗೆ ಮೈದಾನದಲ್ಲೇ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಬೇಸರದ ನಡೆ ಕಂಡುಬಂದಿದ್ದು, ಇದನ್ನು ನಿನ್ನೆಯ ಪಂದ್ಯಕ್ಕೆ ಗಾಯದ ಸಮಸ್ಯೆಯಿಂದ ಅಲಭ್ಯರಾಗಿ ಡಗ್‌ಔಟ್‌ನಲ್ಲಿ ಕುಳಿತು ವೀಕ್ಷಿಸುತ್ತಿದ್ದ ರೋಹಿತ್ ಶರ್ಮಾ ಗಮನಿಸಿದ್ದಾರೆ. ಅಲ್ಲದೇ ತಂಡದ ಪರಿಸ್ಥಿತಿ ಕಂಡು ತಲೆ ಮೇಲೆ ಕೈಹೊತ್ತು ಬೇಸರ ಹೊರಹಾಕಿದ್ದಾರೆ. ಈ ವಿಡಿಯೊ ತುಣುಕು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular