HomeKarnatakaಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಜಮೀನು ಪರಭಾರೆ: ಪ್ರಕಿಯೆ ರದ್ದುಗೊಳಿಸಿದ ಹೈಕೋರ್ಟ್, ಸಿಬಿಐ ತನಿಖೆಗೆ...

ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗೆ 55 ಎಕರೆ ಜಮೀನು ಪರಭಾರೆ: ಪ್ರಕಿಯೆ ರದ್ದುಗೊಳಿಸಿದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶ

ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಅಮಾನಿ ಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿನ ಸುಮಾರು 55 ಎಕರೆ ಜಮೀನನ್ನು ಅಸ್ತಿತ್ವದಲ್ಲಿಯೇ ಇಲ್ಲದ Lake View Tourism Corporation ಗೆ ಪರಭಾರೆ ಮಾಡಿದ ಪಕ್ರಿಯೆಯನ್ನು ರಾಜ್ಯ ಹೈಕೋರ್ಟ್ ರದ್ದುಗೊಳಿಸುವುದರ ಜೊತೆಗೆ ಇದರ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿ ನಿರ್ದೇಶನ ನೀಡಿದೆ.

ಈ ಕುರಿತಾಗಿ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ನನಗೆ ತೀವ್ರ ಸಂತಸ ತಂದ ಹಾಗೂ ಆತ್ಮವಿಶ್ವಾಸ ಹೆಚ್ಚಿಸಿದ ಹೈಕೋರ್ಟ್ ತೀರ್ಪು ನಿನ್ನೆ ಹೊರ ಬಿದ್ದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಂಗಳೂರು ಉತ್ತರ ತಾಲೂಕಿನ ಹೆಬ್ಬಾಳ ಮತ್ತು ಅಮಾನಿ ಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿನ ಸುಮಾರು 55 ಎಕರೆ ಜಮೀನನ್ನು ಅಸ್ತಿತ್ವದಲ್ಲಿಯೇ ಇಲ್ಲದ ” Lake View Tourism Corporation” ಗೆ ಪರಭಾರೆ ಮಾಡಿದ ಪಕ್ರಿಯೆಯನ್ನು ರಾಜ್ಯ ಹೈಕೋರ್ಟ್ #ರದ್ದುಗೊಳಿಸುವುದರ ಜೊತೆಗೆ ಇದರ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿ ನಿರ್ದೇಶನ ನೀಡಿದೆ.

ಇದೇ ಭೂಮಿ ತನ್ನ ಬಹುದ್ದೇಶಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ತನಗೆ ಅಗತ್ಯವಿದೆಯೆಂದು ನಮ್ಮ ಮೆಟ್ರೋ – BMRCL – ಮನವಿ ಮಾಡುತ್ತಲೇ ಇತ್ತು.

ಅದಕ್ಕೆ ಪಾವತಿ ಮಾಡಬೇಕಾದ ಪರಿಹಾರ ಧನವನ್ನು ಭರಿಸಲು ತಾನು ಸಿದ್ಧನಿದ್ದೇನೆ ಎಂದೂ ಹೇಳಿತ್ತು.

ನಾನು ಈ ಕುರಿತು ರಾಜ್ಯದ ಕೈಗಾರಿಕಾ ಸಚಿವರಿಗೆ, ಬೆಂಗಳೂರು ಅಭಿವೃದ್ಧಿಯ ಜವಾಬ್ದಾರಿಯನ್ನು ಹೊಂದಿರುವ ರಾಜ್ಯದ ಉಪಮುಖ್ಯಮಂತ್ರಿಗಳಿಗೆ ಮತ್ತು ಸ್ವತಃ ಮುಖ್ಯಮಂತ್ರಿಗಳಿಗೆ ಅದೆಷ್ಟು ಪತ್ರಗಳನ್ನು ಬರೆದು ಈ ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಬರಬಾರದು, ಆ ಸಂಸ್ಥೆಗೆ ಈ ಬೆಲೆ ಬಾಳುವ ಭೂಮಿಯನ್ನು ನೀಡಿರುವುದನ್ನು ರದ್ದು ಮಾಡಬೇಕೆಂದು ಆಗ್ರಹ ಮಾಡಿದ್ದೆ ಎಂಬುದು ಲೆಕ್ಕಕ್ಕೆ ಸಿಗದು.

ಆದರೆ ತಮ್ಮ ತಮ್ಮ ವೈಯಕ್ತಿಕ ನಿಲುವುಗಳಿಗಾಗಿ ಕಟ್ಟಿಬದ್ಧರಾಗಿದ್ದ ನಮ್ಮ ರಾಜ್ಯದ ಈ ಮಹನೀಯರು ನನ್ನ ಮನವಿಯನ್ನು ಪುರಸ್ಕರಿಸಲೇ ಇಲ್ಲ.

ರಾಜ್ಯ ಉಚ್ಚ ನ್ಯಾಯಾಲಯ ಈ ಒಟ್ಟು ಪ್ರಕರಣವನ್ನು  ಒಂದು ಹಗರಣ ಎಂದೇ ಬಣ್ಣಿಸಿ, ಇದರ ಹಿಂದಿರುವ ದುರುದ್ದೇಶವನ್ನು ಅರ್ಥ ಮಾಡಿಕೊಂಡು ಅಸ್ತಿತ್ವದಲ್ಲೇ ಇರದ” ಹಾಗೂ ಓರ್ವ ಪ್ರಭಾವಶಾಲಿ ವ್ಯಕ್ತಿಯ ಸಂಸ್ಥೆಗೆ ಈ ರೀತಿ ಬೆಲೆಬಾಳುವ ಜಾಗವನ್ನು ಪರಭಾರೆ ಮಾಡಿರುವುದನ್ನು ಬಹಳ ತೀವ್ರ ಪದಗಳಿಂದ ಖಂಡಿಸಿ ರದ್ದು ಮಾಡಿರುವುದು ಅತ್ಯಂತ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ಜೊತೆಗೆ ವೈಯಕ್ತಿಕ ಕಾರಣಗಳಿಗಾಗಿ ರಾಜ್ಯ ಸರ್ಕಾರ ಈ ಬೆಳೆಬಾಳುವ ಭೂಮಿಯನ್ನು ಈ ರೀತಿ ಪರಭಾರೆ ಮಾಡಿರುವುದರ ಬಗ್ಗೆ ವಿಚಾರಣೆ ನಡೆಸಲು ಸಿಬಿಐಗೆ ಆದೇಶ ಕೊಟ್ಟಿರುವುದು ಇನ್ನಷ್ಟು ಪರಿಣಾಮಕಾರಿ. ರಾಜ್ಯ ಉಚ್ಚ ನ್ಯಾಯಾಲಯಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಎಂದು ತಿಳಿಸಿದ್ದಾರೆ.

https://www.facebook.com/share/p/1Jzir8qpZ6

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular