HomeKarnatakaಸೊರಬದ ‘ಸನಾದಿ ಅಪ್ಪಣ್ಣ’ ಶಹನಾಯಿ ನಾದಸುಧೆಗೆ ಮನಸೋತ ಮಾಜಿ ಸಚಿವ ಕುಮಾರ್ ಬಂಗಾರಪ್ಪ

ಸೊರಬದ ‘ಸನಾದಿ ಅಪ್ಪಣ್ಣ’ ಶಹನಾಯಿ ನಾದಸುಧೆಗೆ ಮನಸೋತ ಮಾಜಿ ಸಚಿವ ಕುಮಾರ್ ಬಂಗಾರಪ್ಪ

ಸೊರಬ ಸನಾದಿ ಅಪ್ಪಣ್ಣ ಎಂದೇ ಕರೆಯಲ್ಪಡುವ ಶಹನಾಯಿ ವಾದಕರಾದ ರಾಮಪ್ಪ ಆನವಟ್ಟಿ ಅವರ ಗಾನಸುಧೆಗೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಮನಸೋತಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ರಾಮಪ್ಪ ಆನವಟ್ಟಿ ಅವರ ಅದ್ಭುತ ನಾದಲಹರಿ ಆಸ್ವಾದಿಸುವ ಅವಕಾಶ ಸಿಕ್ಕಿತು ಎಂದು ತಿಳಿಸಿದ್ದಾರೆ.

​ಸಂಗೀತಕ್ಕೆ ಭಾಷೆಯ ಹಂಗಿಲ್ಲ, ಅದು ನೇರವಾಗಿ ಹೃದಯವನ್ನು ತಲುಪುತ್ತದೆ. ಇತ್ತೀಚೆಗೆ ನಮ್ಮ ಕುಟುಂಬದ ವಿವಾಹ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದಾಗ, ನಮ್ಮ ಸೊರಬ ಮತಕ್ಷೇತ್ರದ ಹೆಮ್ಮೆಯ ಶಹನಾಯಿ ವಾದಕರಾದ ರಾಮಪ್ಪ ಆನವಟ್ಟಿ ಅವರ ಅದ್ಭುತ ನಾದಲಹರಿಯನ್ನು ಆಸ್ವಾದಿಸುವ ಅವಕಾಶ ಸಿಕ್ಕಿತು. ​ಇವರ ಶಹನಾಯಿ ವಾದನವನ್ನು ಕೇಳುತ್ತಿದ್ದಾಗ ನನಗೆ ತಕ್ಷಣ ನೆನಪಾದದ್ದು ವರನಟ ಡಾ. ರಾಜಕುಮಾರ್ ಅಭಿನಯದ ಅಮರ ಚಿತ್ರ ‘ಸನಾದಿ ಅಪ್ಪಣ್ಣ’.ಆ ಚಿತ್ರದಲ್ಲಿ ಅಪ್ಪಣ್ಣನವರು ಶಹನಾಯಿ ನುಡಿಸುತ್ತಾ ಹೇಗೆ ಎಲ್ಲರ ಮನಗೆದ್ದರೋ, ಹಾಗೆಯೇ ರಾಮಪ್ಪ ಅವರು ತಮ್ಮ ಕಲೆಯ ಮೂಲಕ ಮದುವೆಯ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

​ಬಿಸ್ಮಿಲ್ಲಾ ಖಾನ್ ಅವರ ನಾದಮಾಧುರ್ಯ ಮತ್ತು ಡಾ. ರಾಜ್‌ ಅವರ ಆ ಚಿತ್ರದ ಪಾತ್ರದ ಗಾಂಭೀರ್ಯ ಎರಡೂ ರಾಮಪ್ಪ ಅವರ ವಾದನದಲ್ಲಿ ಮೇಳೈಸಿದಂತಿದೆ. ನಮ್ಮ ಮಣ್ಣಿನ ಇಂತಹ ಅದ್ಭುತ ಕಲಾವಿದರು ನಮ್ಮ ನಡುವೆ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ​ಕಲೆಗೆ ಬೆಲೆ ಕಟ್ಟಲಾಗದು, ಆದರೆ ಕಲಾವಿದರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ. ರಾಮಪ್ಪ ಆನವಟ್ಟಿ ಅವರ ಕಲಾಪ್ರಯಾಣ ಹೀಗೆಯೇ ನಿರಂತರವಾಗಿ ಸಾಗಲಿ, ಅವರಿಗೆ ಭಗವಂತನು ಆರೋಗ್ಯ ಮತ್ತು ಆಯುಷ್ಯವನ್ನು ನೀಡಿ ಹರಸಲಿ ಎಂದು ಹಾರೈಸುತ್ತೇನೆ ಎಂದು ಕುಮಾರ್ ಬಂಗಾರಪ್ಪ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular