ಮುಟ್ಟು ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು ಕಾಡುವ ಸಮಸ್ಯೆ. ಕೆಲವರು ತೀವ್ರ ನೋವು ಅನುಭವಿಸ್ತಾರೆ. ಸಾಮಾನ್ಯ ದಿನಗಳಲ್ಲಿ ಈ ನೋವನ್ನು ಹೇಗೋ ಸಹಿಸಬಹುದು. ಆದ್ರೆ ಮದುವೆ ದಿನ ಮುಟ್ಟು ಬಂದ್ರೆ ಏನಾಗಬೇಡ? ನೆನಪು ಮಾಡಿಕೊಂಡ್ರೆ ಭಯವಾಗುತ್ತೆ.
ಈ ಬಗ್ಗೆ ಭಯಪಡುವ ಅಗತ್ಯವಿಲ್ಲ. ಮದುವೆ ದಿನ ಮುಟ್ಟಿನ ಸಮಸ್ಯೆ ಕಾಡಿದ್ರೆ ಚಿಂತೆ ಬೇಡ. ಒಂದೇ ಕಡೆ ಬಹಳ ಹೊತ್ತು ಕುಳಿತುಕೊಳ್ಳುವುದ್ರಿಂದ ಕಿರಿಕಿರಿಯುಂಟಾಗುತ್ತೆ. ಪ್ಯಾಡ್ ಒದ್ದೆಯಾಗಿ ಬದಲಾಯಿಸಲೂ ಸಮಯ ಸಿಗುವುದಿಲ್ಲ. ಹಾಗಾಗಿ ಇಂಥ ಸಂದರ್ಭದಲ್ಲಿ ಪ್ಯಾಡ್ ಗಿಂತ ಟ್ಯಾಂಪನ್ ಒಳ್ಳೆಯದು.
ಬಹುತೇಕರಿಗೆ ಟ್ಯಾಂಪನ್ ಬಳಕೆ ಬಗ್ಗೆ ತಿಳಿದಿಲ್ಲ. ಕೆಲವರಿಗೆ ಇದು ಕಿರಿಕಿರಿ ಎನ್ನಿಸುತ್ತದೆ. ಅಂತವರು ಟ್ಯಾಂಪನ್ ಬದಲು ಬಹಳ ಹೊತ್ತು ಬರುವ ಪ್ಯಾಡ್ ಆಯ್ಕೆ ಮಾಡಿಕೊಳ್ಳಿ. ಒಂದೇ ಬಾರಿ ಎರಡು ಪ್ಯಾಡ್ ಕೂಡ ಬಳಸಬಹುದು. ಇದು ಸುರಕ್ಷಿತ. ಹಾಗೆ ಒಳ ಬಟ್ಟೆ ಒದ್ದೆಯಾಗುತ್ತದೆ ಎಂಬ ಭಯವಿರುವುದಿಲ್ಲ.
ಮುಟ್ಟಿನ ಸಮಯದಲ್ಲಿ ಅನೇಕ ಹುಡುಗಿಯರಿಗೆ ಕಾಲು, ಸೊಂಟ, ಬೆನ್ನು ನೋವು ಕಾಡುತ್ತದೆ. ನೋವು ಕಡಿಮೆ ಮಾಡಿಕೊಳ್ಳಲು ಕಡಿಮೆ ಹೀಲ್ಡ್ ಚಪ್ಪಲಿಗೆ ಆದ್ಯತೆ ನೀಡಿ.
ಮುಟ್ಟಿನ ಸಮಯದಲ್ಲಿ ತುಂಬಾ ನೋವುಣ್ಣುವವರು ನೀವಾಗಿದ್ದರೆ ವೈದ್ಯರ ಸಲಹೆ ಪಡೆದು ನೋವಿನ ಮಾತ್ರೆಯನ್ನು ಸೇವಿಸಿ. ಮದುವೆಯ ಸುಂದರ ಕ್ಷಣದಲ್ಲಿ ನೋವು ನಿಮ್ಮನ್ನು ಕಾಡದಿರುವಂತೆ ನೋಡಿಕೊಳ್ಳಿ.
ಮದುವೆ ದಿನ ನೋವಿನ ಮಾತ್ರೆಯನ್ನು ನಿಮ್ಮ ಸಹೋದರಿಗೆ ನೀಡಿ. ಆಕೆ ನಿಮ್ಮ ಆಸುಪಾಸು ಸುತ್ತಾಡುತ್ತಿರುತ್ತಾಳೆ. ನೋವಾದಲ್ಲಿ ತಕ್ಷಣ ಮಾತ್ರೆ ತೆಗೆದುಕೊಳ್ಳಲು ನಿಮಗೆ ಸುಲಭವಾಗುತ್ತದೆ. ಹಾಗೆ ಒಂದಲ್ಲ ಒಂದು ಕಾರಣ ಹೇಳಿ ಆಗಾಗ ನಿಮ್ಮನ್ನು ಸಾರ್ವಜನಿಕರಿಂದ ಬೇರೆ ಕಡೆ ಕರೆದುಕೊಂಡು ಹೋಗುವಂತೆ ಹೇಳಿ. ಈ ನೆಪದಲ್ಲಿ ನೀವು ಶೌಚಾಲಯಕ್ಕೆ ಹೋಗಿ ಬರಬಹುದು.
ಮುಟ್ಟಿನ ದಿನಗಳಲ್ಲಿ ಮೊಡವೆ ಮಾಮೂಲಿ. ಮೊಡವೆ ಶುರುವಾಗ್ತಿದ್ದರೆ ಅದ್ರ ಮೇಲೆ ಟೂತ್ಪೇಸ್ಟ್ ಹಚ್ಚಿ. ಇದು ಮೊಡವೆ ದೊಡ್ಡದಾಗಲು ಬಿಡುವುದಿಲ್ಲ.