HomeKarnatakaಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು: ಯುವತಿಯ ಹೇಳಿಕೆಯ ವಿಡಿಯೋ ವೈರಲ್

ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಹೊಸ ತಿರುವು: ಯುವತಿಯ ಹೇಳಿಕೆಯ ವಿಡಿಯೋ ವೈರಲ್

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಜಿಮ್ ಟ್ರೇನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣದ ನಡುವೆ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಮುಸ್ಲಿಂ ಯುವಕನೋರ್ವ ಪ್ರೀತಿ-ಪ್ರೇಮದ ನಾಟಕವಾಡಿ ಹಿಂದೂ ಯುವತಿಯ ಮೇಲೆ ಅತ್ಯಾಚಾರ ಎಸಗಿ, ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಆರೋಪಿ ಮುಫಿಜ್ ಮಿಯಾನ್ನವರ್ ವಿರುದ್ಧ ದೂರು ದಾಖಲಾಗಿತ್ತು. ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

ಇದೇ ಪ್ರಕರಣದಲ್ಲಿ ಯುವತಿ ಮಾಡಿದ್ದು ಎನ್ನಲಾಗುತ್ತಿರುವ ಹೇಳಿಕೆಗಳ ಅನೇಕ ವಿಡಿಯೋಗಳು ವೈರಲ್ ಆಗಿವೆ. ವರ್ಷದ ಹಿಂದೆ ಯುವತಿ ಮಾಡಿದ್ದು ಎಂದು ಹೇಳಲಾಗುತ್ತಿರುವ ಹೇಳಿಕೆಗಳ ವಿಡಿಯೋಗಳು ಇದೀಗ ವೈರಲ್ ಆಗಿವೆ. ನಾವಿಬ್ಬರು ಇಷ್ಟಪಟ್ಟಿದ್ದೆವು. ಅದರಂತೆ ಧಾರವಾಡ ಸಬ್ ರಿಜಿಸ್ಟರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದೆವು ಎಂದು ಯುವತಿ ಹೇಳಿರುವ ವಿಡಿಯೋ ಕೂಡ ಇದರಲ್ಲಿದೆ.

ನಾನು ನೋಂದಣಿಗೆ ಸಹಿ ಮಾಡಿದ್ದು ಆರ್​ಎಸ್​ಎಸ್​ನವರಿಗೆ ಗೊತ್ತಾಗಿತ್ತು. ಹೀಗಾಗಿ ನಮ್ಮ ಮನೆಗೆ ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದರು. ಅವರ ಧರ್ಮ ಬೇರೆ, ನಮ್ಮ ಧರ್ಮ ಬೇರೆ ಅಂತ ಹೇಳಿದ್ದರು. ನಾನು ಮುಫಿಜ್ ಮದುವೆಯಾಗದೇ ಇದ್ದರೆ ಸಾಯುತ್ತೇನೆ ಅಂತ ಹೇಳಿದ್ದೆ. ಹೀಗಾಗಿ ಆತನ ಹೆತ್ತವರು ಮದುವೆಗೆ ಒಪ್ಪಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್​ಎಸ್​ಎಸ್​ನವರು ಬಂದು ಅನೇಕ ಬಾರಿ ಕೌನ್ಸಿಲಿಂಗ್ ಮಾಡಿದ್ದಾರೆ. ಮುಫಿಜ್ ಮೇಲೆ ಕೇಸ್ ಹಾಕಿಸುತ್ತೇವೆ ಅಂತ ಹೇಳಿದ್ದರು. ಆತನ ಮೇಲೆ ಕೇಸ್ ಹಾಕಲು ನನ್ನ ಒಪ್ಪಿಗೆ ಇಲ್ಲಾ ಎಂದಿದ್ದ ಯುವತಿ ಆದರೆ ಇದೀಗ ಮುಫಿಜ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಳೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular