ನವದೆಹಲಿ: ಬಾಡಿಗೆ ಮನೆಯೊಂಂದರಲ್ಲಿ ಇಬ್ಬರು ಸಹೋದರರು ಶವವಾಗಿ ಪ್ತತೆಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಉತ್ತಮ್ ನಗರದಲ್ಲಿ ನಡೆದಿದೆ.
ಸಹೋದರರಿಬ್ಬರೂ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದೆ. ಉತ್ತಮ್ ನಗರ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ದ್ವಾರಕಾ ಜಿಲ್ಲೆಗೆ ಸೇರಿದ ಮೋಹನ್ ಗಾರ್ಡನ್ನಲ್ಲಿರುವ ಮೆಟ್ರೋ ಪಿಲ್ಲರ್ ಸಂಖ್ಯೆ 743 ರ ಬಳಿಯ ಮನೆಯೊಳಗೆ ಎರಡು ಶವಗಳು ಕಂಡುಬಂದಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಪರಾಧ ಶಾಖೆಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೃತರನ್ನು ಮೋಹನ್ ಗಾರ್ಡನ್ ನಿವಾಸಿ ದೇವೇಂದರ್ (50) ಮತ್ತು ಹಸ್ತಲ್ನ ಜೆಜೆ ಕಾಲೋನಿಯ ನಿವಾಸಿ ಅಮಿತ್ ಕುಮಾರ್ (48) ಎಂದು ಗುರುತಿಸಲಾಗಿದೆ.
ಇಬ್ಬರೂ ಸಹೋದರರಾಗಿದ್ದು, ಇತ್ತೀಚೆಗೆ ಬಾಡಿಗೆಗೆ ಫ್ಲಾಟ್ಗೆ ಸ್ಥಳಾಂತರಗೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಎರಡೂ ದೇಹಗಳಲ್ಲಿ ಯಾವುದೇಗಾಯದ ಗುರುತುಗಳು ಕಂಡುಬಂದಿಲ್ಲ. ಇದು ಸಾವಿಗೆ ಕಾರಣವನ್ನು ಮತ್ತಷ್ಟು ಅಸ್ಪಷ್ಟವಾಗಿಸಿದೆ.
ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಯಾವುದೇ ಸಂಭಾವ್ಯ ಸುಳಿವುಗಳನ್ನು ಗುರುತಿಸಲು ಮೃತರ ವೈಯಕ್ತಿಕ ಮತ್ತು ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುವ ಪ್ರಯತ್ನಗಳು ನಡೆಯುತ್ತಿವೆ.
ಮರಣೋತ್ತರ ಪರೀಕ್ಷೆಯ ವರದಿ ಮತ್ತು ನಡೆಯುತ್ತಿರುವ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

