ನಿತೀಶ್ ತಿವಾರಿ ಅವರ ಕನಸಿನ ಪ್ರಾಜೆಕ್ಟ್ ರಾಮಾಯಣ ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಅವತಾರದಲ್ಲಿ ರಣಬೀರ್ ಕಪೂರ್ ಅವರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ.
ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತದ ಸಿನಿಮಾ ಇತಿಹಾಸದಲ್ಲೇ ಅತೀ ದೊಡ್ಡ ಬಜೆಟ್‌ನ ಅದ್ದೂರಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಮತ್ತು ಉತ್ತರ ಭಾರತದ ದಿಗ್ಗಜ ನಟರು ಒಂದೇ ಪರದೆಯ ಮೇಲೆ ಅಬ್ಬರಿಸುತ್ತಿರುವ ಈ ಚಿತ್ರದ ಟೀಸರ್ ಹೊರಬಿದ್ದ ಬೆನ್ನಲ್ಲೇ, ಇದೀಗ ಚಿತ್ರತಂಡದ ಪ್ರಮುಖ ನಟರು ಪಡೆದಿರುವ ಸಂಭಾವನೆಯ ಗುಟ್ಟು ರಟ್ಟಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ
ರಾಮಾಯಣ ತಾರಾಬಳಗದ ಸಂಭಾವನೆ ಪಟ್ಟಿ ಇಲ್ಲಿದೆ:
ಈ ಸಿನಿಮಾ ಎರಡು ಭಾಗಗಳಲ್ಲಿ (Part 1 & Part 2) ಬಿಡುಗಡೆಯಾಗುತ್ತಿದ್ದು, ನಟರಿಗೆ ಒಟ್ಟಾರೆಯಾಗಿ ಸಂಭಾವನೆ ನಿಗದಿಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ರಣಬೀರ್ ಕಪೂರ್ (ಶ್ರೀರಾಮ): ಚಿತ್ರದ ಮರ್ಯಾದಾ ಪುರುಷೋತ್ತಮನ ಪಾತ್ರಕ್ಕಾಗಿ ರಣಬೀರ್ ಪ್ರತಿ ಭಾಗಕ್ಕೆ 75 ಕೋಟಿ ರೂ.ಗಳಂತೆ ಒಟ್ಟು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಅವರ ಹಿಂದಿನ ಅನಿಮಲ್ ಚಿತ್ರದ ಸಂಭಾವನೆಗಿಂತ ಸುಮಾರು ಮೂರು ಪಟ್ಟು ಹೆಚ್ಚಾಗಿದೆ.
ರಾಕಿಂಗ್ ಸ್ಟಾರ್ ಯಶ್ (ರಾವಣ): ಟೀಸರ್‌ನಲ್ಲಿ ಯಶ್ ಅವರ ಎಂಟ್ರಿ ಅಭಿಮಾನಿಗಳಿಗೆ ರೋಮಾಂಚನ ತಂದಿದೆ. ರಾವಣನ ಪಾತ್ರಕ್ಕಾಗಿ ಯಶ್ ಪ್ರತಿ ಭಾಗಕ್ಕೆ 50 ಕೋಟಿ ರೂ.ನಂತೆ ಒಟ್ಟು 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಸಾಯಿ ಪಲ್ಲವಿ (ಸೀತೆ): ಸೀತೆಯಾಗಿ ಕಾಣಿಸಿಕೊಳ್ಳುತ್ತಿರುವ ಸಾಯಿ ಪಲ್ಲವಿ ಅವರಿಗೆ ಪ್ರತಿ ಭಾಗಕ್ಕೆ 6 ಕೋಟಿ ರೂ.ನಂತೆ ಒಟ್ಟು 12 ಕೋಟಿ ರೂ. ನೀಡಲಾಗಿದೆ. ದಕ್ಷಿಣದ ಸಿನಿಮಾಗಳಿಗೆ ಹೋಲಿಸಿದರೆ ಅವರ ಸಂಭಾವನೆಯಲ್ಲಿ ಇದು ಭಾರಿ ಏರಿಕೆಯಾಗಿದೆ.ಇದು ಅವರ ಕೆರಿಯರ್‌ನಲ್ಲೇ ಹೈಯೆಸ್ಟ್ ಸ್ಯಾಲರಿ
ಸನ್ನಿ ಡಿಯೋಲ್ (ಹನುಮಂತ): ಭಗವಾನ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ಸನ್ನಿ ಡಿಯೋಲ್ ಅವರಿಗೆ ಒಟ್ಟು 40 ಕೋಟಿ ರೂ. (ಪ್ರತಿ ಭಾಗಕ್ಕೆ 20 ಕೋಟಿ ರೂ.) ಸಂಭಾವನೆ ನಿಗದಿಪಡಿಸಲಾಗಿದೆ.
ರವಿ ದುಬೆ (ಲಕ್ಷ್ಮಣ): ಟಿವಿ ಲೋಕದ ಸ್ಟಾರ್ ರವಿ ದುಬೆ ಲಕ್ಷ್ಮಣನ ಪಾತ್ರಕ್ಕಾಗಿ 2 ರಿಂದ 4 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ವಿಶ್ವದ ಗಮನ ಸೆಳೆಯಲಿರುವ 4,000 ಕೋಟಿ ಬಜೆಟ್
ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದು ಅತೀ ದೊಡ್ಡ ಬಜೆಟ್‌ನ ಸಿನಿಮಾ. ಬರೋಬ್ಬರಿ 4,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಹಾಲಿವುಡ್ ಮಟ್ಟದ ತಾಂತ್ರಿಕತೆಯನ್ನು ಹೊಂದಿದೆ. ವಿಶೇಷವೆಂದರೆ, ಆಸ್ಕರ್ ವಿಜೇತ ಹ್ಯಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಮೊದಲ ಬಾರಿಗೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.
ರಾಮಾಯಣ’ದ ಮೊದಲ ಭಾಗವು 2026 ರ ಅಕ್ಟೋಬರ್‌ನಲ್ಲಿ (ದೀಪಾವಳಿ ಸಮಯ) ವಿಶ್ವಾದ್ಯಂತ ತೆರೆಗೆ ಬರಲಿದೆ. ಇನ್ನು ಎರಡನೇ ಭಾಗವು 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಅಂದಾಜಿಸಲಾಗಿದೆ

