HomeLive NewsBIG NEWS: ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 18 ಅಪ್ರಾಪ್ತರು...

BIG NEWS: ಆರ್ ಸಿಬಿ-ಎಸ್ ಆರ್ ಹೆಚ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ: 18 ಅಪ್ರಾಪ್ತರು ವಶಕ್ಕೆ: ಮಾಸ್ಟರ್ ಮೈಂಡ್ ಅರೆಸ್ಟ್: 51 ಮೊಬೈಲ್ ಜಪ್ತಿ

ಬೆಂಗಳೂರು: ಬೆಂಗಳೂರಿನಲ್ಲಿ ಐಪಿಎಲ್ ಉದ್ಗಾಟನಾ ಪಂದ್ಯ RCB ಹಾಗೂ SRH ಪಂದ್ಯದ ಸಂದರ್ಭದಲ್ಲಿ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದ 19 ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್ ಮೂಲದ ಈ ಗ್ಯಾಂಗ್‌ನಿಂದ 51 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದ್ದು, ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಬಂಧಿಸಲಾಗಿದೆ.

ಐಪಿಎಲ್ ಪಂದ್ಯದ ವೇಳೆ ಕ್ರಿಕೆಟ್ ಪ್ರೇಮಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡಿದ್ದ ಅಂತರರಾಜ್ಯ ಕಳ್ಳರನ್ನು ಕಬ್ಬನ್ ಪಾರ್ಕ್ ಪೊಲೀಸರು ಪತ್ತೆಹಚ್ಚಿದ್ದಾರೆ. ಇದರೊಂದಿಗೆ, ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ ಪಂದ್ಯದ ವೇಳೆ ನಡೆದಿದ್ದ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಪೊಲೀಸರಿಗೆ ಮಹತ್ವದ ಯಶಸ್ಸು ದೊರೆತಂತಾಗಿದೆ. ಸದ್ಯ ಪೊಲೀಸರು 51 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳ್ಳತನ ಜಾಲದಲ್ಲಿ ಭಾಗಿಯಾಗಿದ್ದ 18 ಅಪ್ರಾಪ್ತರು ಸೇರಿದಂತೆ ಒಟ್ಟು 19 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಈ ಪೈಕಿ ಒಬ್ಬನನ್ನು ಬಂಧಿಸಲಾಗಿದೆ. ವಿಶೇಷವೆಂದರೆ, ಈ ಕಳ್ಳರೆಲ್ಲರೂ ಜಾರ್ಖಂಡ್ ಮೂಲದವರಾಗಿದ್ದು, ಪಂದ್ಯದ ವೇಳೆ ಅಭಿಮಾನಿಗಳಂತೆ ಕಾಣಲು ಆರ್‌ಸಿಬಿ ತಂಡದ ಜೆರ್ಸಿ (T-shirt) ಧರಿಸುತ್ತಿದ್ದರು. ಅಭಿಮಾನಿಗಳಿಂದ ಟಿಕೆಟ್‌ಗಳನ್ನು ಕಸಿದುಕೊಂಡು ಅಥವಾ ಕಳ್ಳತನ ಮಾಡಿ ಕ್ರೀಡಾಂಗಣದ ಒಳಗೆ ಪ್ರವೇಶಿಸುತ್ತಿದ್ದ ಈ ಗ್ಯಾಂಗ್, ಜನಜಂಗುಳಿಯ ನಡುವೆ ಮೊಬೈಲ್‌ಗಳನ್ನು ಕದ್ದು ಎಸ್ಕೇಪ್ ಆಗೊದ್ದರು.

ಈ ಬೃಹತ್ ಜಾಲದ ಹಿಂದೆ ಇದ್ದ ಮಾಸ್ಟರ್ ಮೈಂಡ್ ಶುಭಮ್ ಎಂಬಾತನನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಶುಭಮ್ ಮಾತ್ರ ವಯಸ್ಕನಾಗಿದ್ದು, ಉಳಿದ 18 ಮಂದಿ ಅಪ್ರಾಪ್ತ ಬಾಲಕರು. ಈ ಬಾಲಕರನ್ನು ಬಳಸಿಕೊಂಡು ಶುಭಮ್ ನಗರದ ವಿವಿಧೆಡೆ ಕಳ್ಳತನ ಮಾಡಿಸುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular