ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಶಿಕ್ಷಣ ತಜ್ಞ ಡಾ. ಮೋಹನ್ ಆಳ್ವ ಅವರ ಸೇರಿದಂತೆ ಆರು ಸಾಧಕರಿಗೆ ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯ 2026ನೇ ಸಾಲಿನ ಗೌರವ ಡಾಕ್ಟರೇಟ್ ನೀಡಿದೆ.
ವಿಶ್ವವಿದ್ಯಾಲಯದ ಕುಲಾಧಿಪತಿಗಳಿಂದ ರಚಿಸಲಾದ ತಜ್ಞ ಪರಿಶೀಲನಾ ಸಮಿತಿ ಶಿಫಾರಸ್ಸಿನ ಮೇರೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತಿದೆ. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವೆಂಕಟೇಶ್ ಪ್ರಸಾದ್, ಸಂಗೀತ ಕ್ಷೇತ್ರದಿಂದ ಅರ್ಜುನ್ ಜನ್ಯ, ಶಿಕ್ಷಣ ತಜ್ಞರಾದ ಟಿ.ಕೆ. ನಾರಾಯಣಪ್ಪ ಮತ್ತು ಡಾ. ಮೋಹನ್ ಆಳ್ವ, ಉದ್ಯಮಿ ಬಾವಾ ಮೊಹಮದ್ ಫಾರೂಕ್ ಅವರಿಗೆ ಮನಮೋಹನ್ ಸಿಂಗ್ ಬೆಂಗಳೂರು ನಗರ ವಿವಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ವಿವಿ ಕುಲಪತಿ ಪ್ರೊ. ರಮೇಶ್ ತಿಳಿಸಿದ್ದಾರೆ.

