ಬೀದರ್: ಪೊಲೀಸ್ ಅಧಿಕಾರಿಯೊಬ್ಬರ ಕಿರುಕುಳಕ್ಕೆ ಬೇಸತ್ತು ಯೂಟ್ಯೂಬರ್ ಓರ್ವರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ.
ಯೂಟ್ಯೂಬರ್ ಸಲ್ಮಾನ್ ಖಾನ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ಬೀದರ್ ಎಸ್ ಪಿ ಪ್ರದೀಪ್ ಗುಂಟಿ ಅವರಿಂದ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ಫೇಸ್ ಬುಕ್ ಲೈವ್ ಗೆ ಬಂದು ಕಣ್ಣಿರು ಹಾಕಿದ್ದು, ಬಳಿಕ ನಿದ್ದೆ ಮಾತ್ರೆಗಳನ್ನು ಸೇವಿಸಿದ್ದಾರೆ.
ಶಾಂತಿ ಸಭೆ ಇದೆ ಎಂದು ಕಚೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದಾರೆ. ನನ್ನ ಜೀವ ತೆಗೆಯುತ್ತಾರೆ. ಯೂಟ್ಯೂಬ್ ಚಾನಲ್ ಮುಂದುವರೆಸದಂತೆ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿ ಒಮ್ಮೆಲೆ 12 ನಿದ್ದೆ ಮಾತ್ರೆಗಳನ್ನು ನುಂಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಸಲ್ಮಾನ್ ಅವರನ್ನು ಬೀದರ್ ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

