HomeLatest News'ಬಡವರ ಮಕ್ಳು ಬೆಳಿಬೇಕು ' ಎಂದ ಡಾಲಿ ಧನಂಜಯ್ ;  ಕುತೂಹಲ ಮೂಡಿಸಿದ 'ತಾಯಾಣೆ' ಪೋಸ್ಟರ್

‘ಬಡವರ ಮಕ್ಳು ಬೆಳಿಬೇಕು ‘ ಎಂದ ಡಾಲಿ ಧನಂಜಯ್ ;  ಕುತೂಹಲ ಮೂಡಿಸಿದ ‘ತಾಯಾಣೆ’ ಪೋಸ್ಟರ್

ಬೆಂಗಳೂರು :  ನಟ ಹಾಗೂ ನಿರ್ಮಾಪಕ ಡಾಲಿ ಧನಂಜಯ್ ತಮ್ಮ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಮತ್ತೊಂದು ಆಸಕ್ತಿದಾಯಕ ಸಿನಿಮಾವನ್ನು ಘೋಷಿಸಿದ್ದಾರೆ. ಮೈಸೂರಿನ ಖ್ಯಾತ ‘ಕೆಇಬಿ’ (KEB) ಯೂಟ್ಯೂಬ್ ತಂಡದ ಜೊತೆಗೂಡಿ ಧನಂಜಯ್ ಅವರು ‘ಮದರ್ ಪ್ರಾಮಿಸ್’ (Mother Promise) ಎಂಬ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದು, ಕನ್ನಡದಲ್ಲಿ ಈ ಸಿನಿಮಾಗೆ ‘ತಾಯಾಣೆ’ ಎಂದು ಹೆಸರಿಡಲಾಗಿದೆ. ‘ಬಡವರ ಮಕ್ಳು ಬೆಳಿಬೇಕು’ ಎಂಬ ಘೋಷ ವಾಕ್ಯದಂತೆ ಸದಾ ಹೊಸ ಪ್ರತಿಭೆಗಳಿಗೆ ಸಾಥ್ ನೀಡುವ ಡಾಲಿ, ಈ ಬಾರಿ ತಮ್ಮ ಆಪ್ತ ಗೆಳೆಯರ ತಂಡಕ್ಕೆ ದೊಡ್ಡ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.

ಇತ್ತೀಚೆಗಷ್ಟೇ ‘ಹೆಗ್ಗಣ ಮುದ್ದು’ ಚಿತ್ರವನ್ನು ಘೋಷಿಸಿದ್ದ ಅವರು, ಈಗ ತಮ್ಮ ನಿರ್ಮಾಣ ಸಂಸ್ಥೆಯಡಿ ಮತ್ತೊಂದು ಆಸಕ್ತಿದಾಯಕ ಸಿನಿಮಾವನ್ನು ಅನಾವರಣಗೊಳಿಸಿದ್ದಾರೆ. ಈ ಚಿತ್ರಕ್ಕೆ ‘ಮದರ್ ಪ್ರಾಮಿಸ್’ (Mother Promise) ಎಂದು ಹೆಸರಿಡಲಾಗಿದ್ದು, ಕನ್ನಡದಲ್ಲಿ ‘ತಾಯಾಣೆ’ ಎಂಬ ಟೈಟಲ್ ನೀಡಲಾಗಿದೆ.

ಡಾಲಿ ಧನಂಜಯ್ ಮತ್ತು ಅವರ ಮೈಸೂರಿನ ಗೆಳೆಯರ ತಂಡ ‘ಕೆಇಬಿ’ (KEB) ಯೂಟ್ಯೂಬ್ ಚಾನೆಲ್ ಮೂಲಕ ಚಿರಪರಿಚಿತ. ಇದೀಗ ‘ಡಾಲಿ ಪಿಕ್ಚರ್ಸ್’ ಮತ್ತು ‘ಕೆಇಬಿ’ ಜಂಟಿಯಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿವೆ.ಚಿತ್ರದಲ್ಲಿ ಮೈಸೂರು ಪೂರ್ಣ, ನಾಗಭೂಷಣ, ವಿನಯಾ ಪ್ರಸಾದ್, ಡಾಲಿ ಧನಂಜಯ್ ಮತ್ತು ಗುರುದತ್ ಅವರೊಂದಿಗೆ ಹಲವು ಖ್ಯಾತ ಹಾಸ್ಯ ನಟರು ಕಾಣಿಸಿಕೊಳ್ಳಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರಕ್ಕೆ ಮೈಸೂರು ಪೂರ್ಣ ಅವರೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.ಪೋಸ್ಟರ್ ನೋಡಿದರೆ ಇದು ಹಾಸ್ಯ, ಭಾವನಾತ್ಮಕ ಮತ್ತು ಥ್ರಿಲ್ಲರ್ ಅಂಶಗಳನ್ನೊಳಗೊಂಡ ವಿಭಿನ್ನ ಕಥೆಯಂತೆ ಕಂಡುಬರುತ್ತಿದೆ.ಕೆಲ ದಿನಗಳ ಹಿಂದಷ್ಟೇ ಚಿತ್ರತಂಡವು ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ, ಹೆಸರನ್ನು ಗೆಸ್ ಮಾಡುವಂತೆ ಪ್ರೇಕ್ಷಕರಿಗೆ ಸವಾಲು ಹಾಕಿತ್ತು. ಇದೀಗ ಅಧಿಕೃತವಾಗಿ ‘ಮದರ್ ಪ್ರಾಮಿಸ್’ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular