ಶಿರಸಿ: ಅಳಿಯನನ್ನು ಕೊಂದಿದ್ದ ಮಾವನಿಗೆ ಉತ್ತರ ಕನ್ನಡ ಜಿಲ್ಲೆ ಶಿರಸಿಯ 1ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಜೀವಿತಾವಧಿ ಜೈಲು ಶಿಕ್ಷೆ ಪ್ರಕಟಿಸಿದೆ.
2024ರ ಮೇ 2 ರಂದು ಮಂಜುನಾಥಗೌಡನ ತಲೆಗೆ ಹೊಡೆದು ಕೊಲೆ ಮಾಡಲಾಗಿತ್ತು. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮಳಲಿ ಗ್ರಾಮದಲ್ಲಿ ಹತ್ಯೆ ನಡೆದಿತ್ತು. ಕುಡಿಯಲು ಹಣ ನೀಡದಿದ್ದಕ್ಕೆ ಕಟ್ಟಿಗೆಯಿಂದ ಹೊಡೆದು ಅಳಿಯನನ್ನು ಮಾವ ಕೊಲೆ ಮಾಡಿದ್ದ.
ಮಾವ ವೆಂಕಟರಮಣಗೌಡನಿಂದ ಹಲ್ಲೆಗೊಳಗಾದ ಮಂಜುನಾಥಗೌಡ ಸ್ಥಳದಲ್ಲಿ ಮೃತಪಟ್ಟಿದ್ದ. ಅಪರಾಧಿ ವೆಂಕಟರಮಣಗೌಡನಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ಶಿರಸಿಯ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಜಡ್ಜ್ ಕಿರಣ್ ಕಿಣಿ ಆದೇಶಿಸಿದ್ದಾರೆ.

