HomeKarnatakaಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಏ. 5ರಂದು ಐಪಿಎಲ್ ಪಂದ್ಯ ಪ್ರಯುಕ್ತ ನಮ್ಮ ಮೆಟ್ರೋ ಸೇವೆ...

ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಏ. 5ರಂದು ಐಪಿಎಲ್ ಪಂದ್ಯ ಪ್ರಯುಕ್ತ ನಮ್ಮ ಮೆಟ್ರೋ ಸೇವೆ ವಿಸ್ತರಣೆ: ವಾಹನ ಪಾರ್ಕಿಂಗ್‌ ವ್ಯವಸ್ಥೆ

ಬೆಂಗಳೂರು: ಏಪ್ರಿಲ್ 5ರಂದು ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ.

ದಿನಾಂಕ 5ನೇ ಏಪ್ರಿಲ್ 2026ರಂದು ಬೆಂಗಳೂರಿನಲ್ಲಿ ನಡೆಯಲಿರುವ ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಪಂದ್ಯದ ಪ್ರಯುಕ್ತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್) ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾಗುವಂತೆ ಮೆಟ್ರೋ ರೈಲು ಸೇವಾಅವದಿಯನ್ನು ವಿಸ್ತರಿಸಿದೆ.

ಪಂದ್ಯದ ದಿನದಂದು, ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮುಂದಿನ ದಿನದ ಮುಂಜಾನೆ 2:00 ಗಂಟೆಯವರೆಗೆ ವಿಸ್ತರಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು ಕೆಳಗಿನ ವೇಳಾಪಟ್ಟಿಯಂತೆ ಹೊರಡಲಿವೆ:

ವೈಟ್‌ಫೀಲ್ಡ್ (ಕಾಡುಗೋಡಿ) ಯಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45ಕ್ಕೆ.

ರೇಷ್ಮೆ ಸಂಸ್ಥೆ ಹಾಗೂ ಮಾದಾವರ ದಿಂದ ರಾತ್ರಿ 12.45ಕ್ಕೆ.

ಬೊಮ್ಮಸಂದ್ರ ದಿಂದ ರಾತ್ರಿ 12.30ಕ್ಕೆ ಹಾಗೂ ಆರ್.ವಿ. ರಸ್ತೆ ಯಿಂದ ರಾತ್ರಿ 02.00ಕ್ಕೆ.

ನಾಡಪ್ರಭು ಕೆಂಪೇಗೌಡ ನಿಲ್ಯಾಣ-ಮಜೆಸ್ಟಿಕ್ ನಿಂದ ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡಲಿದೆ.

ನಮ್ಮ ಮೆಟ್ರೋ ಪ್ರಯಾಣವನ್ನು ಸುಗಮಗೊಳಿಸಲು, ಎರಡು ಮಾರ್ಗಗಳ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಕ್ಯೂಆರ್ (QR) ಕೋಡ್ ಡಿಜಿಟಲ್ ಐಪಿಎಲ್ ಪಂದ್ಯದ ಟಿಕೆಟ್‌ಗಳಲ್ಲಿ ಒಳಗೊಂಡಿರುತ್ತದೆ.

ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ / ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಹಾಗೂ ಲಿಂಕ್ ರಸ್ತೆ ಭಾಗದಿಂದ ಪ್ರವೇಶ /ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಳಸುವಂತೆ ಸೂಚಿಸಲಾಗಿದೆ.

ಪಂದ್ಯ ದಿನದಂದು ಪ್ರೇಕ್ಷಕರಿಗೆ ಅನುಕೂಲವಾಗಲು ಮತ್ತು ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣವನ್ನು ಖಚಿತಪಡಿಸಲು, ಬಿಎಂಆರ್‌ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯವನ್ನು ಎರಡು ಚಕ್ರ ವಾಹನಗಳಿಗೆ ರೂ. 30 ಮತ್ತು ಕಾರುಗಳಿಗೆ ರೂ. 60 ನಿಗದಿತ ದರದಲ್ಲಿ ಒದಗಿಸಲಾಗುತ್ತದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾನ್ಯವಾಗಿರುತ್ತದೆ.(ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಮಾಡಿರುವ ನಿಲ್ದಾಣದ ವಿವರಗಳು ಅನುಬಂಧದಲ್ಲಿ ಲಭ್ಯವಿದೆ).

ಪ್ರೇಕ್ಷಕರು ತಮ್ಮ ವಾಹನಗಳನ್ನು ನಿಗದಿತ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕ್ ಮಾಡಿ, ಮೆಟ್ರೋ ಮೂಲಕ ಸ್ಟೇಡಿಯಂಗೆ ನಡೆದು ಹೋಗಬಹುದಾದ ಅಂತರದಲ್ಲಿರುವ ಕಬ್ಬನ್ ಪಾರ್ಕ್ ಅಥವಾ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ. ಇದರಿಂದ ಕೇಂದ್ರ ವ್ಯವಹಾರ ಪ್ರದೇಶ (ಸಿಬಿಡಿ) ಹಾಗೂ ಸ್ಟೇಡಿಯಂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲು ಸಹಾಯವಾಗುತ್ತದೆ.

ಪ್ರಯಾಣಿಕರು ಸುಗಮ ಸಂಚಾರ, ಸುರಕ್ಷತೆ ಮತ್ತು ಜನಸಂದಣಿಯನ್ನು ತಪ್ಪಿಸಲು ಪೊಲೀಸ್, ಸ್ಟೇಡಿಯಂ ನಿರ್ವಹಣೆ ಮತ್ತು ಬಿಎಂಆರ್‌ಸಿಎಲ್ ಸಿಬ್ಬಂದಿಯ ನಿರ್ದೇಶನಗಳನ್ನು ಅನುಸರಿಸಲು ವಿನಂತಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಯಾವುದೇ ಅನಾಹುತಗಳು ಅಥವಾ ಅಹಿತಕರ ಘಟನೆಗಳನ್ನು ತಡೆಗಟ್ಟುವ ಹಿತದೃಷ್ಟಿಯಿಂದ, ಅಗತ್ಯವಿದ್ದಲ್ಲಿ ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ನಿಯಂತ್ರಿಸುವ ಅಥವಾ ತಾತ್ಕಾಲಿಕವಾಗಿ ಮುಚ್ಚುವ ಹಕ್ಕನ್ನು ಬಿಎಂಆರ್‌ಸಿಎಲ್ ಹೊಂದಿರುತ್ತದೆ.

ಹೆಚ್ಚುವರಿ ವಾಹನ ಪಾರ್ಕಿಂಗ್‌ಗಾಗಿ ಗುರುತಿಸಲಾದ ಮೆಟ್ರೋ ನಿಲ್ದಾಣಗಳ ಪಟ್ಟಿ

ವೈಟ್‌ಫೀಲ್ಡ್ (ಕಾಡುಗೋಡಿ)

ಚಿಕ್ಕಬಿದರಕಲ್ಲು

ಹೋಪ್ ಫಾರ್ಮ್ ಚನ್ನಸಂದ್ರ

ಮಂಜುನಾಥನಗರ

ಕಾಡುಗೋಡಿ ಟೀ ಪಾರ್ಕ್

ನಾಗಸಂದ್ರ

ಪಟ್ಟಂದೂರು ಅಗ್ರಹಾರ

ಜಾಲಹಳ್ಳಿ

ನಲ್ಲೂರಳ್ಳಿ

ಮಹಾಲಕ್ಷ್ಮಿ

ಕುಂದಲಹಳ್ಳಿ

ಮಹಾಕವಿ ಕುವೆಂಪು ರಸ್ತೆ

ಸೀತಾರಾಮ ಪಾಳ್ಯ

ಶ್ರೀರಾಂಪುರ

ಹೂಡಿ

ಚಿಕ್ಕಪೇಟೆ

ಸಿಂಗಯ್ಯನಪಾಳ್ಯ

ನ್ಯಾಷನಲ್ ಕಾಲೇಜು

ಕೆ.ಆ‌ರ್.ಪುರ

ಲಾಲ್‌ಬಾಗ್

ಬೈಯಪ್ಪನಹಳ್ಳಿ (ಒಎಂಆರ್ ಭಾಗ)

ಜಯನಗರ

ಬೈಯಪ್ಪನಹಳ್ಳಿ (ಎನ್‌ಜಿಇಎಫ್ ಭಾಗ)

ಬನಶಂಕರಿ

ಎಸ್.ವಿ. ರಸ್ತೆ,

ಯಲಚೇನಹಳ್ಳಿ

ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್)

ದೊಡ್ಡಕಲ್ಲಸಂದ್ರ

ಸಿಟಿ ರೈಲ್ವೆ ನಿಲ್ದಾಣ

ಆರ್.ವಿ.ರಸ್ತೆ

ಹೊಸಹಳ್ಳಿ

ರಾಗಿಗುಡ್ಡ

ಮೈಸೂರು ರಸ್ತೆ

ಬಿಟಿಎಂ ಲೌಟೊ

ನಾಯಂಡಹಳ್ಳಿ

ಸೆಂಟ್ರಲ್ ಸಿಲ್ಕ್ ಬೋರ್ಡ್

ಜ್ಞಾನಭಾರತಿ

ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ

ಕೆಂಗೇರಿ ಬಸ್ ಟರ್ಮಿನಲ್

ಎಲೆಕ್ಟ್ರಾನಿಕ್ ಸಿಟಿ

ಚಲ್ಲಘಟ್ಟ

ಬಯೋಕಾನ್ ಹೆಬ್ಬಗೋಡಿ

ಮಾದಾವರ

ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular