HomeLatest NewsBIG NEWS : ರಾಜ್ಯದ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ...

BIG NEWS : ರಾಜ್ಯದ ಶಾಲಾ ಶಿಕ್ಷಕರೇ ಗಮನಿಸಿ : 2025-26ನೇ ಸಾಲಿನ ವರ್ಗಾವಣೆಗೆ ಅಂತಿಮ ವೇಯ್ಟೆಡ್ ಅಂಕ ಪ್ರಕಟ.!

2025-26 ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2025ರ ಅಂತ್ಯಕ್ಕೆ ಶಿಕ್ಷಕರ ಅಂತಿಮ ವೇಯ್ಟೆಡ್ ಅಂಕಗಳನ್ನು (Weighted Marks) ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ  ಹೊರಡಿಸಿದೆ.

ಏನಿದೆ ಸುತ್ತೋಲೆಯಲ್ಲಿ..?

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ (1) ಮತ್ತು (2) ರನ್ವಯ, 2025-26ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ ಮತ್ತು ಮುಖ್ಯ ಶಿಕ್ಷಕರುಗಳ, ಡಿಸೆಂಬರ್-2025 ತಿಂಗಳ ಅಂತ್ಯದವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಯ್ಟೆಡ್ ಅಂಕಗಳನ್ನು, ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್‌ನಲ್ಲಿ ಹಾಗೂ ಇಲಾಖಾ ವೆಬ್‌ಸೈಟ್ ನಲ್ಲಿ ಉಲ್ಲೇಖ (4) ರಲ್ಲಿ ಪ್ರಕಟಿಸಲಾಗಿರುತ್ತದೆ. ಉಲ್ಲೇಖ (3) ಈ ಕಚೇರಿಯ ಸುತ್ತೋಲೆಯಲ್ಲಿ ಸೇವಾ ಮಾಹಿತಿಯ ಇಂದೀಕರಣಕ್ಕಾಗಿ ದಿನಾಂಕ : 30-01-2026 ರವರೆಗೆ ಕಾಲಾವಕಾಶವನ್ನು ನೀಡಲಾಗಿತ್ತು. ಉಲ್ಲೇಖ (4) ರಲ್ಲಿ ದಿನಾಂಕ : 27-02-2026 ರವರೆಗೆ ವಿಸ್ತರಿಸಿ ಕಾಲಾವಕಾಶವನ್ನು ನೀಡಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಂದುವರೆದು ವರ್ಗಾವಣೆ ಪೂರ್ವದಲ್ಲಿ ವಿವಿಧ ಕಾರ್ಯಗಳ ನಿರ್ವಹಿಸಬೇಕಾಗಿರುವುದರಿಂದ ಮತ್ತು ಈಗಾಗಲೇ ಇ.ಇ.ಡಿ.ಎಸ್ ನಲ್ಲಿ ಮಾಹಿತಿ ಇಂದೀಕರಣಕ್ಕಾಗಿ ಸಾಕಷ್ಟು ಕಾಲಾವಕಾಶವನ್ನು ನೀಡಿರುವುದರಿಂದ ಇನ್ನು ಮುಂದೆ ಇ.ಇ.ಡಿ.ಎಸ್ ನಲ್ಲಿ ಇಂದೀಕರಣ / ತಿದ್ದುಪಡಿ / ಬದಲಾವಣೆಯನ್ನು ವರ್ಗಾವಣೆಗೆ ಪರಿಗಣಿಸಲಾಗುವುದಿಲ್ಲ. ಅಂತಿಮವಾಗಿ ಪ್ರಕಟಿಸಲ್ಪಟ್ಟ ಸೇವಾ ಅಂಕಗಳನ್ನೇ ಪ್ರಸಕ್ತ ಸಾಲಿನಲ್ಲಿ ನಡೆಯುವ ವರ್ಗಾವಣೆಯ ಎಲ್ಲಾ ಪ್ರಕ್ರಿಯೆಗಾಗಿ ಪರಿಗಣಿಸಲಾಗುವುದು ಹಾಗೂ ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ / ಪ್ರೌಢಶಾಲಾ ಸಹಶಿಕ್ಷಕರ / ದೈಹಿಕ ಶಿಕ್ಷಣ ಶಿಕ್ಷಕರು / ವಿಶೇಷ ಶಿಕ್ಷಕರು ಹಾಗೂ ತತ್ಸಮಾನ ವೃಂದದ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು / ತತ್ಸಮಾನ ವೃಂದದ ಶಿಕ್ಷಕರುಗಳ ಇಂದೀಕರಿಸಲ್ಪಟ್ಟ ಅಂತಿಮ ಸೇವಾ ಅಂಕಗಳನ್ನು (weighted score) ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್, ಕ್ಷೇತ್ರಶಿಕ್ಷಣಾಧಿಕಾರಿಗಳ / ಉಪನಿರ್ದೇಶಕರ ಲಾಗಿನ್ ಹಾಗೂ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸದರಿ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಹಾಗೂ ಎಲ್ಲಾ ಶಿಕ್ಷಕರಿಗೆ ತಲುಪಿಸಲು ಕ್ರಮವಹಿಸುವಂತೆ ಇಲಾಖೆಯ ಎಲ್ಲಾ ಕಚೇರಿಯ ಮುಖ್ಯಸ್ಥರಿಗೆ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular