HomeLatest Newsಇದು ವಿಶ್ವದ ಮೊದಲ 'ಪ್ರೋಟೀನ್' ಕಾಂಡೋಮ್ : ನೆಟ್ಟಿಗರ ಕುತೂಹಲ ಕೆರಳಿಸಿದ 'ಬೀಸ್ಟ್ ಲೈಫ್' ಜಾಹೀರಾತು...

ಇದು ವಿಶ್ವದ ಮೊದಲ ‘ಪ್ರೋಟೀನ್’ ಕಾಂಡೋಮ್ : ನೆಟ್ಟಿಗರ ಕುತೂಹಲ ಕೆರಳಿಸಿದ ‘ಬೀಸ್ಟ್ ಲೈಫ್’ ಜಾಹೀರಾತು !

ಜಿಮ್ ಪ್ರಿಯರಿಗೆ ಪ್ರೋಟೀನ್ ಶೇಕ್, ಪ್ರೋಟೀನ್ ಬಾರ್’ಗಳು ಗೊತ್ತು. ಆದರೆ ಈಗ “ಪ್ರೋಟೀನ್ ಕೊಂಡೋಮ್” (Protein Condom) ಸರದಿ! ಹೌದು, ಖ್ಯಾತ ಯೂಟ್ಯೂಬರ್ ಗೌರವ್ ತನೇಜಾ (Flying Beast) ಒಡೆತನದ ‘ಬೀಸ್ಟ್ ಲೈಫ್’ ಸಂಸ್ಥೆಯು ವಿಶ್ವದ ಮೊಟ್ಟಮೊದಲ ಪ್ರೋಟೀನ್ ಕೊಂಡೋಮ್ ಬಿಡುಗಡೆ ಮಾಡುವುದಾಗಿ ಘೋಷಿಸಿ ಇಂಟರ್ನೆಟ್’ನಲ್ಲಿ ಸಂಚಲನ ಮೂಡಿಸಿದೆ.

ಏಪ್ರಿಲ್ 1ರ ‘ಮೂರ್ಖರ ದಿನ’ ಹತ್ತಿರವಿರುವ ಬೆನ್ನಲ್ಲೇ ಬಂದಿರುವ ಈ ವಿಚಿತ್ರ ಪ್ರಕಟಣೆ, ಇದು ನಿಜವಾದ ಉತ್ಪನ್ನವೋ ಅಥವಾ ಕೇವಲ ಮಾರ್ಕೆಟಿಂಗ್ ತಂತ್ರವೋ ಎಂಬ ಗೊಂದಲ ಮತ್ತು ಕುತೂಹಲವನ್ನು ನೆಟ್ಟಿಗರಲ್ಲಿ ಏಕಕಾಲಕ್ಕೆ ಹುಟ್ಟುಹಾಕಿದೆ.
ಪ್ರೋಟೀನ್ ಕೇವಲ ಮಸಲ್ ಬಿಲ್ಡಿಂಗ್ಗೆ ಮಾತ್ರವಲ್ಲ, ಇನ್ನು ಮುಂದೆ ಬೆಡ್ರೂಮ್ಗೂ ಎಂಟ್ರಿ ಕೊಡಲಿದೆ! ಏನಿದು ‘ಬೀಸ್ಟ್ ಲೈಫ್’ ಕಂಪನಿಯ ಹೊಸ ಪ್ರೋಟೀನ್ ಕೊಂಡೋಮ್ ಐಡಿಯಾ? ಇಲ್ಲಿದೆ ಪೂರ್ಣ ಮಾಹಿತಿ.

ಹೌದು. ಇತ್ತೀಚೆಗೆ ಭಾರತದ ಪ್ರಸಿದ್ಧ ಫಿಟ್ನೆಸ್ ಬ್ರಾಂಡ್ ಆದ ‘ಬೀಸ್ಟ್ ಲೈಫ್’ (Beast Life), ಪ್ರಪಂಚದ ಮೊಟ್ಟಮೊದಲ ‘ಪ್ರೋಟೀನ್ ಕಾಂಡೋಮ್ ‘ ಅನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ಈ ಬ್ರಾಂಡ್ ಅನ್ನು ಪ್ರಸಿದ್ಧ ಯೂಟ್ಯೂಬರ್ ಮತ್ತು ಫಿಟ್ನೆಸ್ ಪ್ರಿಯ ಗೌರವ್ ತನೇಜಾ (Flying Beast) ಸ್ಥಾಪಿಸಿದ್ದಾರೆ.ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಂಸ್ಥೆಯು, “ಪ್ರಪಂಚದ ಮೊದಲ ಪ್ರೋಟೀನ್ ಕೊಂಡೋಮ್ ಅನ್ನು ಪರಿಚಯಿಸುತ್ತಿದ್ದೇವೆ.. ನಿಮ್ಮ ರಾತ್ರಿಯ ಪ್ರದರ್ಶನವನ್ನು (Night Performance) ಅಪ್ಗ್ರೇಡ್ ಮಾಡಲು ನಾವು ಬರುತ್ತಿದ್ದೇವೆ” ಎಂದು ಕ್ಯಾಪ್ಷನ್ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೆಟ್ಟಿಗರ ಪ್ರತಿಕ್ರಿಯೆ: ಈ ವಿಚಿತ್ರ ಪ್ರಕಟಣೆಯನ್ನು ನೋಡಿ ನೆಟ್ಟಿಗರು ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. “ಇದು ವೇ-ಐಸೋಲೇಟ್ ಪ್ರೋಟೀನ್ ಅಥವಾ ನಾರ್ಮಲ್ ಪ್ರೋಟೀನ್ ಹೌದಾ?” ಎಂದು ಒಬ್ಬರು ಕೇಳಿದರೆ, “ಅಗತ್ಯವಿಲ್ಲದ ಸಮಸ್ಯೆಗೆ ಅದ್ಭುತ ಪರಿಹಾರ ಸಿಕ್ಕಿದೆ” ಎಂದು ಮತ್ತೊಬ್ಬರು ಚಮತ್ಕರಿಸಿದ್ದಾರೆ.

ಏಪ್ರಿಲ್ ಫೂಲ್ ಗಿಮಿಕ್?: ಏಪ್ರಿಲ್ 1 ಹತ್ತಿರ ಬರುತ್ತಿರುವುದರಿಂದ, ಇದು ಕೇವಲ ಒಂದು ‘ಏಪ್ರಿಲ್ ಫೂಲ್’ ಪ್ರಾಂಕ್ ಅಥವಾ ಬ್ರಾಂಡ್ ಪ್ರಚಾರಕ್ಕಾಗಿ ಮಾಡುತ್ತಿರುವ ಗಿಮಿಕ್ ಎಂದು ಹೆಚ್ಚಿನ ಜನರು ಅಭಿಪ್ರಾಯಪಟ್ಟಿದ್ದಾರೆ.: ಹಿಂದೆ ಜರ್ಮನಿಯ ಸಂಸ್ಥೆಯೊಂದು ವಿಡಿಯೋ ರೆಕಾರ್ಡಿಂಗ್ ತಡೆಯಲು ‘ಡಿಜಿಟಲ್ ಕೊಂಡೋಮ್’ ಆ್ಯಪ್ ಪರಿಚಯಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಒಟ್ಟಾರೆಯಾಗಿ, ಈ ‘ಪ್ರೋಟೀನ್ ಕೊಂಡೋಮ್’ ನಿಜವಾಗಿಯೂ ಮಾರುಕಟ್ಟೆಗೆ ಬರುತ್ತದೆಯೇ ಅಥವಾ ಇದು ಕೇವಲ ತಮಾಷೆಯ ಮಾರ್ಕೆಟಿಂಗ್ ತಂತ್ರವೇ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಸದ್ಯಕ್ಕಂತೂ ಇದು ಇಂಟರ್ನೆಟ್ನಲ್ಲಿ ಫುಲ್ ವೈರಲ್ ಆಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular