ನವದೆಹಲಿ: ಲಿವ್ ಇನ್ ರಿಲೇಶನ್ ಶಿಪ್(ಸಹಜೀವನ) ಸಂಗಾತಿಗಳು ತಮ್ಮ ಸಂಬಂಧ ಸ್ಥಿರವಾದದು ಎಂದು ದೃಢೀಕರಿಸಿದರೆ ಜನಗಣತಿಯ ವೇಳೆ ವಿವಾಹಿತ ದಂಪತಿಗಳು ಎಂದು ಪರಿಗಣಿಸುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಸ್ವಯಂ ಗಣತಿ ಪೋರ್ಟಲ್ ನಲ್ಲಿ ಪದೇ ಪದೇ ಕೇಳಿದ ಪ್ರಶ್ನೆಗಳ ಕುರಿತಂತೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಜನಗಣತಿಯ ಸಮಯದಲ್ಲಿ ಸ್ವಯಂಗಣತಿ ಆಯ್ಕೆ ಮಾಡಿಕೊಳ್ಳುವ ಜನರಿಗೆ ಪೋರ್ಟಲ್ ತೆರೆಯಲಾಗಿದೆ. ಲಿವ್ ಇನ್ ಸಂಬಂಧದಲ್ಲಿರುವ ಸಂಗಾತಿಗಳನ್ನು ವಿವಾಹಿತ ದಂಪತಿ ಎಂದು ಪರಿಗಣಿಸಲಾಗುತ್ತದೆಯೇ ಎನ್ನುವ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರ ನೀಡಿದೆ. ಜೋಡಿಗಳು ತಮ್ಮ ಸಂಬಂಧವನ್ನು ಶಾಶ್ವತವೆಂದು ಖಚಿತಪಡಿಸಿದರೆ ವಿವಾಹಿತ ದಂಪತಿಗಳು ಎಂದು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.
ಏಪ್ರಿಲ್ 1ರಿಂದ ಜನಗಣತಿ ಆರಂಭವಾಗಲಿದೆ. ಆರಂಭದಲ್ಲಿ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ. ಈ ಸಂಬಂಧ ಮಾಹಿತಿ ನೀಡಲು 33 ಪ್ರಶ್ನೆ ಒಳಗೊಂಡ ಪ್ರಶ್ನಾವಳಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

