HomeKarnatakaBREAKING : ಬೆಂಗಳೂರಿನ  ಪರಪ್ಪನ  ಅಗ್ರಹಾರ ಜೈಲಿಗೆ ಡ್ರಗ್ಸ್, ಸಿಮ್ ಪೂರೈಕೆ ; ಯುವತಿ ಅರೆಸ್ಟ್

BREAKING : ಬೆಂಗಳೂರಿನ  ಪರಪ್ಪನ  ಅಗ್ರಹಾರ ಜೈಲಿಗೆ ಡ್ರಗ್ಸ್, ಸಿಮ್ ಪೂರೈಕೆ ; ಯುವತಿ ಅರೆಸ್ಟ್

ಬೆಂಗಳೂರು :   ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಡ್ರಗ್ಸ್ ಮತ್ತು ಸಿಮ್ ಕಾರ್ಡ್‌ಗಳನ್ನು ಪೂರೈಸಲು ಯತ್ನಿಸಿದ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೆ ಡ್ರಗ್ಸ್ ಮತ್ತು ಸಿಮ್ ಕಾರ್ಡ್‌ಗಳನ್ನು ಅಕ್ರಮವಾಗಿ ಸರಬರಾಜು ಮಾಡಲು ಯತ್ನಿಸಿದ ಆರೋಪದ ಮೇಲೆ ಯುವತಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಯುವತಿಯನ್ನು ರಿತಿಕಾ ರೈ (27) ಎಂದು ಗುರುತಿಸಲಾಗಿದೆ.

ಘಟನೆಯವಿವರ ಮಾರ್ಚ್ 26 ರಂದು ರಿತಿಕಾ ರೈ ಜೈಲಿನಲ್ಲಿರುವ ಫರಾನ್ ಖಾನ್ ಎಂಬ ವಿಚಾರಣಾಧೀನ ಕೈದಿಯನ್ನು ಭೇಟಿಯಾಗಲು ಬಂದಿದ್ದಳು. ಜೈಲಿನ ಗೇಟ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ಈಕೆಯನ್ನು ಗಮನಿಸಿದ ಮಹಿಳಾ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ತೀವ್ರ ತಪಾಸಣೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಯುವತಿಯ ಬಳಿ ಹಲವು  ವಸ್ತುಗಳು ಪತ್ತೆಯಾಗಿವೆ. ಬಂಧಿತಳಿಂದ 3 ಏರ್‌ಟೆಲ್ ಸಿಮ್ ಕಾರ್ಡ್‌ಗಳು, 30 ಗ್ರಾಂ ಗಾಂಜಾ, ಬೀಡಿ ವಶಕ್ಕೆ ಪಡೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ಕ್ರಮ : ಜೈಲಿನ ಒಳಗೆ ಕೈದಿಗಳಿಗೆ ನಿಷೇಧಿತ ವಸ್ತುಗಳನ್ನು ತಲುಪಿಸಲು ಸಂಚು ರೂಪಿಸಿದ್ದ ಯುವತಿಯನ್ನು ಪರಪ್ಪನ ಅಗ್ರಹಾರ ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ. ಜೈಲಿನ ಭದ್ರತಾ ನಿಯಮಗಳನ್ನು ಮೀರಿ ಈ ರೀತಿ ಡ್ರಗ್ಸ್ ಮತ್ತು ಸಿಮ್ ಪೂರೈಕೆ ಮಾಡುತ್ತಿರುವುದು ಭದ್ರತಾ ಸಿಬ್ಬಂದಿಗಳ ಆತಂಕಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular