HomeEntertainmentನಟ ಪ್ರಕಾಶ್ ರಾಜ್ ಗೆ ಮಾತೃ ವಿಯೋಗ

ನಟ ಪ್ರಕಾಶ್ ರಾಜ್ ಗೆ ಮಾತೃ ವಿಯೋಗ

ಹೈದರಾಬಾದ್: ಬಹುಭಾಷಾ ನಟ, ನಿರ್ದೇಶಕ ಪ್ರಕಾಶ್ ರಾಜ್ ಅವರಿಗೆ ಮಾತೃವಿಯೋಗವಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಪ್ರಕಾಅಶ್ ರಾಜ್ ಅವರ ತಾಯಿ ಸ್ವರ್ಣಲತಾ ಹೈದರಾಬಾದ್​ ನಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಗದಗ ಮೂಲದವರಾದ ತಾಯಿ ಸ್ವರ್ಣಲತಾ, ಅವರ ಬಗ್ಗೆ ಈ ಹಿಂದೆ ಪ್ರಕಾಶ್ ರಾಜ್ ಮಾತನಾಡಿದ್ದರು. ‘ನನ್ನ ತಾಯಿ ಗದಗದವರು. ಅವರು ಅನಾಥೆ ಆಗಿದ್ದರು. ನನ್ನ ಅಜ್ಜಿ ತೀರಿಕೊಂಡಾಗ ಅಮ್ಮನಿಗೆ 12 ವರ್ಷ ವಯಸ್ಸು. ಬೆಳಗಾವಿಯ ಅನಾಥಾಶ್ರಾಮದಲ್ಲಿ ಬೆಳೆದರು. ನರ್ಸಿಂಗ್ ಟ್ರೇನಿಂಗ್ ಮಾಡಿ ಬೆಂಗಳೂರಿಗೆ ಬಂದರು’ ಎಂದಿದ್ದರು.

‘ನಮ್ಮ ಅಪ್ಪ ಮಂಗಳೂರಿನವರು. ಅವರು ಬೆಂಗಳೂರಿಗೆ ಬಂದರು. ಇಬ್ಬರೂ ಮದುವೆ ಆದರು. ನಮ್ಮ ಅಪ್ಪನಿಗೆ ಅವರದ್ದೇ ಆದ ನಂಬಿಕೆ ಇದೆ, ತಾಯಿಗೆ ಅವರದ್ದೇ ಆದ ದೇವರ ನಂಬಿಕೆ ಇದೆ. ನನ್ನ ನಂಬಿಕೆ ಬೇರೆಯದೇ ಇದೆ’ ಎಂದು ಪ್ರಕಾಶ್ ರಾಜ್ ಹೇಳಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಎಲ್ಲರನ್ನೂ ಓದಿಸಿದ್ದು ನನ್ನ ಅಮ್ಮ. ಅವಳ ತ್ಯಾಗ ಅಮೂಲ್ಯವಾದುದು. ನನ್ನ ತಂದೆ ದುಡಿಯುತ್ತಾ ಇರಲಿಲ್ಲ. ತಂಗಿಯನ್ನು ಮದುವೆ ಮಾಡಿದ್ದು ಅವಳೇ. ನನ್ನ ತಾಯಿ ದೇವರ ಮುಂದೆ ನಿಂತು ಜಗಳ ಆಡುತ್ತಿದ್ದಳು, ಪ್ರಾರ್ಥನೆ ಮಾಡುತ್ತಿದ್ದಳು’ ಎಂದು ಪ್ರಕಾಶ್ ರಾಜ್ ಹೇಳಿದ್ದರು. ಇದೀಗ ಅವರ ತಾಯಿ ಸ್ವರ್ಣಲತಾ ವಯೋಸಹಜ ಕಾಅಯಿಲೆಯಿಂದ ನಿಧನರಾಗಿದ್ದು, ಪ್ರಕಾಶ್ ರಾಜ್ ಕಂಬನಿ ಮಿಡಿದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular