HomeLatest Newsಮಹಿಳೆಯರನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಸಾಧು ವೇಷಧಾರಿ ಅರೆಸ್ಟ್, ವೀಡಿಯೋ ವೈರಲ್ |WATCH VIDEO

ಮಹಿಳೆಯರನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಸಾಧು ವೇಷಧಾರಿ ಅರೆಸ್ಟ್, ವೀಡಿಯೋ ವೈರಲ್ |WATCH VIDEO

ಶಿಮ್ಲಾ: ಹಿಮಾಚಲ ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾದ ಶಿಮ್ಲಾದ ಮಾಲ್ ರೋಡ್‌ನಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಸಾಧುವಿನ ವೇಷ ಧರಿಸಿ ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ ಎನ್ನಲಾಗಿದೆ.

ಶಿಮ್ಲಾದ ಮಾಲ್ ರೋಡ್‌ನಲ್ಲಿ ಸಾಧು ವೇಷ ಧರಿಸಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಕಾಮುಕ ಈಗ ಜೈಲು ಪಾಲಾಗಿದ್ದಾನೆ.   ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ಈತನನ್ನು ಹೆಡೆಮುರಿ ಕಟ್ಟಿದ್ದಾರೆ.

ಏನಿದು ಘಟನೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಕೆಲವು ದಿನಗಳಿಂದ ಈ ಸಾಧು ವೇಷಧಾರಿಯು ಮಾಲ್ ರೋಡ್‌ನಲ್ಲಿ ಓಡಾಡುತ್ತಾ, ಆಶೀರ್ವಾದ ಮಾಡುವ ನೆಪದಲ್ಲಿ ಅಥವಾ ಜನದಟ್ಟಣೆಯ ಲಾಭ ಪಡೆದು ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದನು. ಈತನ ಅಸಭ್ಯ ವರ್ತನೆಯ ದೃಶ್ಯಗಳನ್ನು ಯಾರೋ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.

ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕೂಡಲೇ ಎಚ್ಚೆತ್ತ ಶಿಮ್ಲಾ ಪೊಲೀಸರು ತನಿಖೆ ನಡೆಸಿ, ವಿಡಿಯೋದಲ್ಲಿದ್ದ ವ್ಯಕ್ತಿಯನ್ನು ಗುರುತಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular