ಪ್ರಸ್ತುತ ಅಡುಗೆ ಅನಿಲದ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳು ಸಿಗದ ಕಾರಣ ಹಲವೆಡೆ ಹೋಟೆಲ್ಗಳನ್ನು ಮುಚ್ಚಲಾಗಿದೆ. ಮನೆ ಬಳಕೆಯ ಸಿಲಿಂಡರ್ಗಳಿಗೆ ಯಾವುದೇ ತೊಂದರೆಯಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ, ಬುಕ್ ಮಾಡಿದ ನಂತರ ವಿತರಣೆಗೆ (Delivery) ಬಹಳ ಸಮಯ ತೆಗೆದುಕೊಳ್ಳಲಾಗುತ್ತಿದೆ. ಗ್ಯಾಸ್ ಬುಕ್ಕಿಂಗ್ ಅವಧಿಯನ್ನು 25 ದಿನಗಳಿಗೆ ನಿಗದಿಪಡಿಸಿರುವುದು ಗ್ರಾಹಕರಲ್ಲಿ ಗೊಂದಲ ಮೂಡಿಸಿದೆ. ಕೆಲವು ಕಡೆ ಗ್ರಾಹಕರು ನೇರವಾಗಿ ಏಜೆನ್ಸಿಗಳ ಬಳಿಯೇ ಖಾಲಿ ಸಿಲಿಂಡರ್ ಹಿಡಿದು ಕ್ಯೂ ನಿಲ್ಲುತ್ತಿದ್ದಾರೆ. ಈ ನಡುವೆ ತೈಲ ಕಂಪನಿಗಳು ಗ್ರಾಹಕರಿಗೆ ಕೆಲವು ಪ್ರಮುಖ ಸೂಚನೆಗಳನ್ನು ನೀಡಿವೆ.
ವಿತರಣೆಯಲ್ಲಿ ವಿಳಂಬವೇಕೆ ? ಗ್ಯಾಸ್ ಸಿಲಿಂಡರ್ಗಳ ಕೊರತೆಯಿಲ್ಲ ಎಂದು ಸರ್ಕಾರ ಭರವಸೆ ನೀಡುತ್ತಿದ್ದರೂ, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬುಕ್ಕಿಂಗ್ ಮಾಡುತ್ತಿರುವುದರಿಂದ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಭಾರತ್ ಗ್ಯಾಸ್ ಮತ್ತು ಎಚ್ಪಿ (HP) ಗ್ಯಾಸ್ ಏಜೆನ್ಸಿಗಳು ತುಲನಾತ್ಮಕವಾಗಿ ಬೇಗನೆ ಸಿಲಿಂಡರ್ ಒದಗಿಸುತ್ತಿದ್ದರೂ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (Indane) ಏಜೆನ್ಸಿಗಳು ವಿತರಣೆಗೆ 10 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ ಎನ್ನಲಾಗಿದೆ.
ನಿಮ್ಮ ಸಿಲಿಂಡರ್ ಎಲ್ಲಿದೆ ಎಂದು ಟ್ರ್ಯಾಕ್ ಮಾಡುವುದು ಹೇಗೆ ? ಗ್ಯಾಸ್ ವಿತರಣೆ ವಿಳಂಬವಾಗುತ್ತಿರುವ ಈ ಸಂದರ್ಭದಲ್ಲಿ, ಕೆಲವು ಏಜೆನ್ಸಿಗಳು ಮತ್ತು ಡೆಲಿವರಿ ಬಾಯ್ಸ್ ಸಿಲಿಂಡರ್ಗಳನ್ನು ಕಪ್ಪು ಮಾರುಕಟ್ಟೆಯಲ್ಲಿ (Black Market) ಮಾರಾಟ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ನಿಮ್ಮ ಬುಕ್ಕಿಂಗ್ ಸ್ಥಿತಿಯನ್ನು ತಿಳಿಯಲು ಈಗ ನೀವು ಏಜೆನ್ಸಿಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ ಟ್ರ್ಯಾಕ್ ಮಾಡಬಹುದು:
- ಆಪ್ ಬಳಸಿ: ಇಂಡೇನ್, ಎಚ್ಪಿ ಅಥವಾ ಭಾರತ್ ಗ್ಯಾಸ್ ಗ್ರಾಹಕರು ಆಯಾ ಕಂಪನಿಯ ಅಧಿಕೃತ ಆಪ್ ಡೌನ್ಲೋಡ್ ಮಾಡಿಕೊಂಡು, ನೋಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಿ.
- ಟ್ರ್ಯಾಕ್ ಮಾಡಿ: ಆಪ್ನಲ್ಲಿ ‘ಮೈ ಬುಕ್ಕಿಂಗ್’ (My Booking) ಅಥವಾ ‘ಟ್ರ್ಯಾಕ್ ಸಿಲಿಂಡರ್’ (Track Cylinder) ವಿಭಾಗಕ್ಕೆ ಹೋದರೆ, ನಿಮ್ಮ ಬುಕ್ಕಿಂಗ್ ದಿನಾಂಕ, ಡಿಸ್ಪ್ಯಾಚ್ ಮತ್ತು ಡೆಲಿವರಿ ಅಪ್ಡೇಟ್ಗಳನ್ನು ನೋಡಬಹುದು.
- ಹೆಲ್ಪ್ಲೈನ್ ಸಂಖ್ಯೆಗಳು: ಸಮಸ್ಯೆಯಾದಲ್ಲಿ ಈ ಕೆಳಗಿನ ಸಂಖ್ಯೆಗಳಿಗೆ ಕರೆ ಮಾಡುವ ಮೂಲಕ ದೂರು ನೀಡಬಹುದು ಅಥವಾ ಟ್ರ್ಯಾಕ್ ಮಾಡಬಹುದು:
- ಇಂಡೇನ್ ಗ್ಯಾಸ್ (Indane): 7718955555
- ಎಚ್ಪಿ ಗ್ಯಾಸ್ (HP): 7903105555
- ಭಾರತ್ ಗ್ಯಾಸ್ (Bharat Gas): 7715012345
ಸಮಸ್ಯೆ ಎಲ್ಲಿಯಾಗಿದೆ ಎಂದು ತಿಳಿದು ದೂರು ದಾಖಲಿಸುವುದರಿಂದ ನಿಮ್ಮ ಸಿಲಿಂಡರ್ ಅನ್ನು ಶೀಘ್ರವಾಗಿ ಪಡೆಯಲು ಅನುಕೂಲವಾಗುತ್ತದೆ.

