HomeKarnatakaBREAKING: ಬೈ ಎಲೆಕ್ಷನ್: ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಸಾದಿಕ್ ಪೈಲ್ವಾನ್

BREAKING: ಬೈ ಎಲೆಕ್ಷನ್: ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿದ ಸಾದಿಕ್ ಪೈಲ್ವಾನ್

ಬೆಂಗಳೂರು: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಸಮರ್ಥ್ ಶಾಮನೂರು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಕ್ಕೆ ತೀವ್ರ ಅಸಮಾಧಾನಗೊಂದು ಸ್ವಪಕ್ಷದ ವಿರುದ್ಧವೇ ಸಿದಿದೆದ್ದಿದ್ದ ಮುಸ್ಲಿಂ ಮುಖಂಡ ಸಾದಿಕ್ ಪೈಲ್ವಾನ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಸಾದಿಕ್ ಪೈಲಾನ್ ಮನವೊಲಿಕೆ ಮಾಡುವಲ್ಲಿ ಯಶ್ವಿಯಾಗಿದ್ದು, ಚುನಾವಣಾ ಕಣದಿಂದಲೇ ಸಾದಿಕ್ ಪೈಲ್ವಾನ್ ನಿವೃತ್ತಿ ಘೋಷಿಸಿದ್ದಾರೆ.

ಈ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆಗೆ ಮುಸ್ಲಿಂ ಮುಖಂಡರಿಂದ ಎದುರಾಗಿದ್ದ ತೊಡಕು ನಿವಾರಣೆಯಾದಂತಾಗಿದ್ದು, ಸಮಸ್ಯೆ ಬಗೆಹರಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಮತೆ ನಡೆಸಿದ ಬಳಿಕ ಸಾದಿಕ್ ಪೈಲ್ವಾನ್ ಜೊತೆ ನಡೆಸಿದ ಸಂಧಾನ ಸಭೆ ಸಫಲವಾಗಿದ್ದು, ಚುನಾವಣಾ ಕಣದಿಂದಲೇ ಸಾದಿಕ್ ಹಿಂದೆ ಸರಿದಿದ್ದಾರೆ. ಈಗಾಗಲೇ ನಾಮಪತ್ರ ಹಿಂಪಡೆಯುವ ಅವಕಾಶ ಮುಗಿದಿದ್ದರಿಂದ ಚುನಾವಣಾ ಕಣದಿಂದಲೇ ನಿವೃತ್ತಿ ಘೋಷಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾದಿಕ್ ಪೈಲ್ವಾನ್, ಬಂಡಾಯ ಸ್ಪರ್ಧೆಯಿಂದ ನಾನು ನಿವೃತ್ತಿಯಾಗಿದ್ದೇನೆ. ಖಂಡಿತವಾಗಿಯೂ ಅಲ್ಪಸಂಖ್ಯಾತರು, ಅಹಿಂದ ವರ್ಗದ ಜನ ಭುಜಕ್ಕೆ ಭುಜ ಕೊಟ್ಟು ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪುತ್ರನನ್ನು ಗೆಲ್ಲಿಸುತ್ತೇವೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾನು ಕಾಂಗ್ರೆಸ್ ನವನೇ. ನನ್ನ ಮನೆಗೆ ಬಂದಿದ್ದೇನೆ. ಮನೆಯಲ್ಲಿ ಅಣ್ಣ-ತಮ್ಮಂದಿರ ಮಧ್ಯೆ ಜಗಳವಾದರೆ ಹಿರಿಯರು ಬಗೆಹರಿಸುತ್ತಾರೆ. ಹಾಗೇ ಹಿರಿಯ ನಾಯಕರು ಸಮಸ್ಯೆ ಬಗೆಹರಿಸಿದ್ದಾರೆ ಎಂದು ತಿಳಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular