ನವದೆಹಲಿ: ರೈಲ್ವೆ ಹಳಿಗಳನ್ನು ದಾಟುವಾಗ ಅಪಘಾತಗಳನ್ನು ತಡೆಗಟ್ಟಲು ದೇಶಾದ್ಯಂತ ಅನುಕೂಲಕರ ಸುರಂಗಮಾರ್ಗಗಳನ್ನು ನಿರ್ಮಿಸಲು ರೈಲ್ವೆ ನಿರ್ಧರಿಸಿವೆ
ನವದೆಹಲಿಯಲ್ಲಿ ಇಂದು ನಡೆದ ಕಾರ್ಯಾಗಾರದಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈ ಉಪಕ್ರಮದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ರೈಲ್ವೆ ಹಳಿಗಳನ್ನು ದಾಟುವಾಗ ಅಪಘಾತಗಳನ್ನು ತಡೆಗಟ್ಟಲು ದೇಶಾದ್ಯಂತ ಅನುಕೂಲಕರ ಸುರಂಗಮಾರ್ಗಗಳನ್ನು ನಿರ್ಮಿಸಲು ತಿಳಿಸಿದ್ದಾರೆ.
ಈ ಸುರಂಗಮಾರ್ಗಗಳನ್ನು ಅನುಕೂಲವಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗುವುದು. ಜನರು ಸುರಂಗಮಾರ್ಗಗಳನ್ನು ಬಳಸಲು ಯಾವುದೇ ಹಿಂಜರಿಕೆಯನ್ನು ತೋರಿಸದಂತೆ ವಿನ್ಯಾಸ ಇರಬೇಕು. ಈ ಸುರಂಗಮಾರ್ಗಗಳ ನಿರ್ಮಾಣದ ಸಮಯದಲ್ಲಿ ಸಾಮಾನ್ಯ ವ್ಯಕ್ತಿಯು ಸೈಕಲ್, ಮೋಟಾರ್ ಸೈಕಲ್ ಅಥವಾ ಅವರ ಕೆಲಸ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಇತರ ವಸ್ತುಗಳನ್ನು ಹೊತ್ತುಕೊಂಡು ಸುಲಭವಾಗಿ ಪ್ರಯಾಣಿಸಲು ಸಾಧ್ಯವಾಗುವಂತೆ ನೋಡಿಕೊಳ್ಳಬೇಕು. ಆ ರೀತಿಯಲ್ಲಿ ವಿನ್ಯಾಸ ಇರಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹಳಿಗಳ ಒಂದು ಬದಿಯಲ್ಲಿ ವಸತಿ ವಸಾಹತು ಇರುವ ಸ್ಥಳಗಳಲ್ಲಿ ಮತ್ತು ಇನ್ನೊಂದು ಬದಿಯಲ್ಲಿ ಹೊಲಗಳು, ಶಾಲೆಗಳು, ಸ್ಮಶಾನಗಳು ಅಥವಾ ಇತರ ಅಗತ್ಯ ಸೌಲಭ್ಯಗಳು ಇರುವ ಸ್ಥಳಗಳಲ್ಲಿ ಈ ರೈಲ್ವೆ ಅಂಡರ್ ಪಾಸ್ ಗಳನ್ನು ನಿರ್ಮಿಸಲಾಗುವುದು.

