HomeLatest NewsSHOCKING : ಇಸ್ರೇಲ್ ಸೈನಿಕರಿಂದ ರಾಕ್ಷಸೀಯ ಕೃತ್ಯ : ಪುಟ್ಟ ಮಗುವಿಗೆ  ಸಿಗರೇಟ್‌'ನಿಂದ ಸುಟ್ಟು ,...

SHOCKING : ಇಸ್ರೇಲ್ ಸೈನಿಕರಿಂದ ರಾಕ್ಷಸೀಯ ಕೃತ್ಯ : ಪುಟ್ಟ ಮಗುವಿಗೆ  ಸಿಗರೇಟ್‌’ನಿಂದ ಸುಟ್ಟು , ಮೊಳೆಯಿಂದ ಚುಚ್ಚಿ ಚಿತ್ರಹಿಂಸೆ !

ಗಾಜಾ: ತನ್ನ ತಂದೆಯಿಂದ ಬಲವಂತವಾಗಿ ತಪ್ಪೊಪ್ಪಿಗೆಯನ್ನು ಪಡೆಯಲು 18 ತಿಂಗಳ ಪ್ಯಾಲೇಸ್ಟಿನಿಯನ್ ಮಗುವನ್ನು ಇಸ್ರೇಲ್ ಸೈನಿಕರು ಸುಮಾರು ಹತ್ತು ಗಂಟೆಗಳ ಕಾಲ ಬಂಧನದಲ್ಲಿಟ್ಟು, ಸಿಗರೇಟ್ ಮತ್ತು ಮೊಳೆಗಳಿಂದ ಚಿತ್ರಹಿಂಸೆ ನೀಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಘಟನೆಯ ವಿವರ:

ಅಲ್ ಜಜೀರಾ ವರದಿಯ ಪ್ರಕಾರ, ಕರೀಮ್ ಅಬು ನಾಸರ್ ಎಂಬ ಈ ಮಗು ಮಾರ್ಚ್ 21 ರಂದು ಮಧ್ಯ ಗಾಜಾದ ಅಲ್-ಮಘಾಜಿ ನಿರಾಶ್ರಿತರ ಶಿಬಿರದ ಬಳಿ ತನ್ನ ತಂದೆ ಒಸಾಮಾ ಅಬು ನಾಸರ್ ಜೊತೆಗಿದ್ದಾಗ, ಇಸ್ರೇಲ್ ರಕ್ಷಣಾ ಪಡೆ (IDF) ಅವರ ಮೇಲೆ ಗುಂಡಿನ ದಾಳಿ ನಡೆಸಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸೈನಿಕರು ತಂದೆಯನ್ನು ಬೆತ್ತಲೆಗೊಳಿಸಿ ತಪಾಸಣೆ ನಡೆಸಿದರು ಮತ್ತು ಅವರ ಮುಂದೆಯೇ ಮಗುವಿಗೆ ಚಿತ್ರಹಿಂಸೆ ನೀಡಲು ಆರಂಭಿಸಿದರು.

ಚಿತ್ರಹಿಂಸೆಯ ಭೀಕರತೆ

ಮಗುವಿನ ತಾಯಿ ಮಾಧ್ಯಮಗಳ ಮುಂದೆ ಮಗುವಿನ ದೇಹದ ಮೇಲಿರುವ ಗಾಯದ ಗುರುತುಗಳನ್ನು ತೋರಿಸಿದ್ದಾರೆ. ಸೈನಿಕರು ಮಗುವಿನ ಮೈಮೇಲೆ ಉರಿಯುತ್ತಿರುವ ಸಿಗರೇಟ್‌ನಿಂದ ಸುಟ್ಟಿದ್ದಾರೆ ಮತ್ತು ಕಾಲಿನೊಳಗೆ ಮೊಳೆಯನ್ನು ಚುಚ್ಚಿದ್ದಾರೆ ಎಂದು ಅವರು ಕಣ್ಣೀರಿಟ್ಟಿದ್ದಾರೆ. ಟಿಆರ್‌ಟಿ ವರ್ಲ್ಡ್ ವರದಿಯ ಪ್ರಕಾರ, ವೈದ್ಯಕೀಯ ವರದಿಯು ಮಗುವಿನ ದೇಹದ ಮೇಲಿರುವ ಸುಟ್ಟ ಗಾಯಗಳು ಮತ್ತು ಮೊಳೆಯಿಂದಾದ ರಂಧ್ರಗಳನ್ನು ದೃಢಪಡಿಸಿವೆ. ರೆಡ್‌ಕ್ರಾಸ್ ಸಂಸ್ಥೆಯ ಮಧ್ಯಸ್ಥಿಕೆಯಿಂದಾಗಿ 10 ಗಂಟೆಗಳ ನಂತರ ಮಗುವನ್ನು ಬಿಡುಗಡೆ ಮಾಡಲಾಗಿದ್ದು, ತಂದೆ ಒಸಾಮಾ ಇನ್ನೂ ಇಸ್ರೇಲ್ ವಶದಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಘಟನೆಯು ಜಗತ್ತಿನಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಶ್ವಸಂಸ್ಥೆಯ ವಿಶೇಷ ವರದಿಗಾರ್ತಿ ಫ್ರಾನ್ಸೆಸ್ಕಾ ಅಲ್ಬನೀಸ್ ಈ ಬಗ್ಗೆ ಪ್ರತಿಕ್ರಿಯಿಸಿ, “ಒಬ್ಬ ತಂದೆಯನ್ನು ಮಣಿಸಲು ಮಗುವಿಗೆ ಚಿತ್ರಹಿಂಸೆ ನೀಡುವ ಇವರು ಎಂತಹ ವಿಕೃತ ಅಪರಾಧಿಗಳು?” ಎಂದು ಪ್ರಶ್ನಿಸಿದ್ದಾರೆ.ಅಮೆರಿಕದ ಕೌನ್ಸಿಲ್ ಫಾರ್ ಅಮೇರಿಕನ್ ಇಸ್ಲಾಮಿಕ್ ರಿಲೇಶನ್ಸ್ (CAIR) ಈ ಘಟನೆಯನ್ನು “ನೈತಿಕ ಅಧಃಪತನ” ಎಂದು ಕರೆದಿದ್ದು, ಇಸ್ರೇಲ್‌ಗೆ ನೀಡುತ್ತಿರುವ ಸೇನಾ ನೆರವನ್ನು ನಿಲ್ಲಿಸುವಂತೆ ಅಮೆರಿಕ ಸರ್ಕಾರವನ್ನು ಒತ್ತಾಯಿಸಿದೆ. ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಕೂಡ ಈ ಅಮಾನವೀಯ ಕೃತ್ಯವನ್ನು ಖಂಡಿಸಿದ್ದಾರೆ.

ವಿಶ್ವಸಂಸ್ಥೆಯ ವರದಿ:

ಇತ್ತೀಚೆಗೆ ಬಿಡುಗಡೆಯಾದ ವಿಶ್ವಸಂಸ್ಥೆಯ ‘ಚಿತ್ರಹಿಂಸೆ ಮತ್ತು ನರಮೇಧ’ ಎಂಬ ವರದಿಯ ಪ್ರಕಾರ, ಅಕ್ಟೋಬರ್ 7, 2023 ರಿಂದ ಇಸ್ರೇಲ್ ವಶದಲ್ಲಿರುವ ಪ್ಯಾಲೇಸ್ಟಿನಿಯನ್ನರು ಭೀಕರ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಸುಮಾರು 18,500 ಜನರನ್ನು ಬಂಧಿಸಲಾಗಿದ್ದು, ಅದರಲ್ಲಿ ಕನಿಷ್ಠ 1,500 ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.

View this post on Instagram

A post shared by PalPulse (@pulseofpal)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular