HomeLatest NewsLakshmi Panchami 2026 : ಇಂದು ಈ ರೀತಿ ಪೂಜಿಸಿದರೆ ಸಾಲಬಾಧೆಯಿಂದ ಮುಕ್ತಿ! ಧನಲಾಭ, ವ್ಯಾಪಾರ...

Lakshmi Panchami 2026 : ಇಂದು ಈ ರೀತಿ ಪೂಜಿಸಿದರೆ ಸಾಲಬಾಧೆಯಿಂದ ಮುಕ್ತಿ! ಧನಲಾಭ, ವ್ಯಾಪಾರ ವೃದ್ಧಿ

ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಇಂದು ಆಚರಿಸಲಾಗುತ್ತಿರುವ ‘ಲಕ್ಷ್ಮಿ ಪಂಚಮಿ’ ಅಥವಾ ‘ಶ್ರೀ ಪಂಚಮಿ’ ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ಪಡೆಯಲು ಅತ್ಯಂತ ಪ್ರಶಸ್ತ ದಿನವಾಗಿದೆ. ವಿಶೇಷವಾಗಿ ಈ ಬಾರಿ ಸೋಮವಾರ ಮತ್ತು ಕೃತಿಕಾ ನಕ್ಷತ್ರದ ಸಂಯೋಜನೆಯಲ್ಲಿ ಈ ಪಂಚಮಿ ಬಂದಿರುವುದು ದೇವಿಯ ಆರಾಧನೆಗೆ ಹೆಚ್ಚಿನ ಬಲ ನೀಡಿದೆ. ದೀರ್ಘಕಾಲದ ಸಾಲಬಾಧೆಯಿಂದ ಬಳಲುತ್ತಿರುವವರು, ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿರುವವರು ಅಥವಾ ಮನೆಯಲ್ಲಿ ವಾಸ್ತು ದೋಷದ ಸಮಸ್ಯೆ ಎದುರಿಸುತ್ತಿರುವವರು ಇಂದು ಮಹಾಲಕ್ಷ್ಮಿಯನ್ನು ಶಾಸ್ತ್ರೋಕ್ತವಾಗಿ ಪೂಜಿಸುವುದರಿಂದ ಅಷ್ಟೈಶ್ವರ್ಯಗಳು ಪ್ರಾಪ್ತಿಯಾಗಲಿವೆ ಎಂದು ಪಂಡಿತರು ತಿಳಿಸಿದ್ದಾರೆ. ಇಂದಿನ ವಿಶೇಷ ಪೂಜಾ ವಿಧಿಗಳು ಮತ್ತು ದಾರಿದ್ರ್ಯ ದೂರ ಮಾಡುವ ಸರಳ ಪರಿಹಾರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಚೈತ್ರ ನವರಾತ್ರಿಯ ಅಂಗವಾಗಿ ಇಂದು ಲಕ್ಷ್ಮಿ ಪಂಚಮಿ. ಈ ಬಾರಿಯ ಲಕ್ಷ್ಮಿ ಪಂಚಮಿಗೆ ವಿಶೇಷ ಮಹತ್ವವಿದೆ. ಸೋಮವಾರದಂದು ‘ಕೃತಿಕಾ’ ನಕ್ಷತ್ರದಲ್ಲಿ ಈ ಪಂಚಮಿ ಬಂದಿರುವುದರಿಂದ ವಿಶೇಷ ಲಾಭಗಳು ಲಭಿಸಲಿವೆ ಎಂದು ಪಂಡಿತರು ತಿಳಿಸಿದ್ದಾರೆ. ಇಂದು ಮಹಾಲಕ್ಷ್ಮಿಯನ್ನು ಭಕ್ತಿಯಿಂದ ಪೂಜಿಸಿದರೆ ಆರ್ಥಿಕ ಸಂಕಷ್ಟಗಳು ದೂರವಾಗಿ ಧನಧಾನ್ಯ ವೃದ್ಧಿಯಾಗುತ್ತದೆ.

ಪಾಲಿಸಬೇಕಾದ ನಿಯಮಗಳು
ಇಂದು ಮುಂಜಾನೆ ಬೇಗ ಎದ್ದು ಇಡೀ ಮನೆಯನ್ನು ಸ್ವಚ್ಛಗೊಳಿಸಿ ಅಭ್ಯಂಜನ ಸ್ನಾನ ಮಾಡಬೇಕು.
ಮನೆಯ ಹೊಸ್ತಿಲನ್ನು ತೊಳೆದು ಹಳದಿ-ಕುಂಕುಮ ಹಚ್ಚಿ ಆಕರ್ಷಕ ರಂಗೋಲಿ ಹಾಕಬೇಕು. ಹೊಸ್ತಿಲು ಸ್ವಚ್ಛವಾಗಿದ್ದರೆ ಲಕ್ಷ್ಮಿ ಮನೆಗೆ ಪ್ರವೇಶಿಸುತ್ತಾಳೆ ಎಂಬ ನಂಬಿಕೆಯಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೂಜಾ ವಿಧಾನ

  1. ಲಕ್ಷ್ಮಿ ದೇವಿಯ ಭಾವಚಿತ್ರ ಅಥವಾ ವಿಗ್ರಹ, ತಾಮ್ರದ ಕಲಶ, ಅಕ್ಷತೆ, ತೆಂಗಿನಕಾಯಿ, ಹಣ್ಣು ಮತ್ತು ಹೂವುಗಳನ್ನು ಸಿದ್ಧಪಡಿಸಿಕೊಳ್ಳಿ.
  2. ಪೂಜಾ ಕೋಣೆಯಲ್ಲಿ ಮಣೆಯ ಮೇಲೆ ಕೆಂಪು ವಸ್ತ್ರವನ್ನು ಹಾಸಿ ಅದರ ಮೇಲೆ ಲಕ್ಷ್ಮಿ ದೇವಿಯ ಫೋಟೋ ಇಟ್ಟು ಗುಲಾಬಿ ಹೂವುಗಳಿಂದ ಅಲಂಕರಿಸಿ.
  3. ತಾಮ್ರ ಅಥವಾ ಹಿತ್ತಾಳೆಯ ಕಲಶಕ್ಕೆ ನೀರು ತುಂಬಿಸಿ, ಹಳದಿ-ಕುಂಕುಮ ಹಾಕಿ ಅದರ ಮೇಲೆ ತೆಂಗಿನಕಾಯಿ ಇಡಿ.
  4. ಮೊದಲು ಗಣಪತಿಯನ್ನು ಪೂಜಿಸಿ, ನಂತರ “ಓಂ ಶ್ರೀ ಮಹಾಲಕ್ಷ್ಮೀಯೈ ನಮಃ” ಮಂತ್ರ ಪಠಿಸುತ್ತಾ ತುಪ್ಪದ ದೀಪ ಹಚ್ಚಿ ಪೂಜೆ ಮಾಡಿ.
  5. ನೈವೇದ್ಯವಾಗಿ ಹಾಲಿನಿಂದ ಮಾಡಿದ ಪರಮಾನ್ನ (ಪಾಯಸ) ಅರ್ಪಿಸುವುದು ಶ್ರೇಷ್ಠ.

ವಿಶೇಷ ಪರಿಹಾರಗಳು
• ಸಾಲಬಾಧೆಯಿಂದ ಮುಕ್ತಿ: ಸಾಲದ ಸುಳಿಗೆ ಸಿಲುಕಿದವರು ಇಂದು ಲಕ್ಷ್ಮಿಯ ಮುಂದೆ ಹಚ್ಚುವ ತುಪ್ಪದ ದೀಪಕ್ಕೆ ಎರಡು ಲವಂಗಗಳನ್ನು ಹಾಕಬೇಕು. ದೇವಿಗೆ ಏಲಕ್ಕಿ ಹಾರ ಅರ್ಪಿಸುವುದರಿಂದ ಸಾಲದ ಹೊರೆ ಕಡಿಮೆಯಾಗುತ್ತದೆ.
• ಆಕಸ್ಮಿಕ ಧನಲಾಭ: ಧನಲಾಭ ಬಯಸುವವರು ಇಂದು ವೀಳ್ಯದೆಲೆಯ ಮೇಲೆ ಕರ್ಪೂರವನ್ನಿಟ್ಟು ಲಕ್ಷ್ಮಿಗೆ ಆರತಿ ಬೆಳಗಬೇಕು.
• ಧನಧಾನ್ಯ ವೃದ್ಧಿ: ಇಂದು ಬಡವರಿಗೆ ಅಕ್ಕಿ ಅಥವಾ ಧಾನ್ಯಗಳನ್ನು ದಾನ ಮಾಡುವುದರಿಂದ ವರ್ಷಪೂರ್ತಿ ಮನೆಯಲ್ಲಿ ಅನ್ನದ ಕೊರತೆ ಇರುವುದಿಲ್ಲ.
• ಗೋಮಾತೆ ಪೂಜೆ: ಹಸುವಿನಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆ. ಇಂದು ಹಸುವಿಗೆ ಹಸಿರು ಹುಲ್ಲನ್ನು ನೀಡಿ ನಮಸ್ಕರಿಸಿದರೆ ಕೋರಿಕೆಗಳು ಈಡೇರುತ್ತವೆ.
• ಹೊಸ ಖರೀದಿ: ಇಂದು ಶಕ್ತ್ಯಾನುಸಾರ ಚಿನ್ನ, ಬೆಳ್ಳಿ ಅಥವಾ ವಾಹನಗಳನ್ನು ಖರೀದಿಸುವುದು ಹಾಗೂ ಹೊಸ ಉದ್ಯಮ ಆರಂಭಿಸುವುದು ಅತ್ಯಂತ ಶುಭ.

ಸಮಸ್ಯೆಗಳ ನಿವಾರಣೆಗೆ

  1. ಕಲ್ಲುಪ್ಪು: ಕಲ್ಲುಪ್ಪನ್ನು ಲಕ್ಷ್ಮಿಯ ಸ್ವರೂಪ ಎನ್ನಲಾಗುತ್ತದೆ. ಇಂದು ಹೊಸ ಕಲ್ಲುಪ್ಪಿನ ಪ್ಯಾಕೆಟ್ ತಂದು ಆ ನೀರನ್ನು ಬಳಸಿ ಮನೆ ಸ್ವಚ್ಛಗೊಳಿಸಿದರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.
  2. ವಾಸ್ತು ದೋಷ: ಮನೆಯ ಈಶಾನ್ಯ ಮೂಲೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನು ಇಟ್ಟರೆ ವಾಸ್ತು ದೋಷಗಳು ನಿವಾರಣೆಯಾಗಿ ಐಶ್ವರ್ಯ ವೃದ್ಧಿಸುತ್ತದೆ.
  3. ವ್ಯಾಪಾರ ಅಭಿವೃದ್ಧಿ: ವ್ಯಾಪಾರಸ್ಥರು ಇಂದು ಹಳದಿ ಬಣ್ಣದ ವಸ್ತ್ರದಲ್ಲಿ ಗೋಮತಿ ಚಕ್ರಗಳನ್ನು ಕಟ್ಟಿ ಹಣದ ಪೆಟ್ಟಿಗೆಯಲ್ಲಿ ಇಟ್ಟರೆ ನಷ್ಟಗಳು ದೂರವಾಗಿ ಲಾಭ ಹೆಚ್ಚುತ್ತದೆ.
  4. ತುಳಸಿ ಪೂಜೆ: ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಿ ಹಸಿ ಹಾಲನ್ನು ಅರ್ಪಿಸುವುದರಿಂದ ಆರ್ಥಿಕ ಲಾಭವಾಗುತ್ತದೆ.

ಆಹಾರ ನಿಯಮಗಳು
ಲಕ್ಷ್ಮಿ ಪಂಚಮಿಯ ದಿನದಂದು ಮಾಂಸಾಹಾರ, ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಸಾತ್ವಿಕ ಆಹಾರವನ್ನು ಸೇವಿಸಬೇಕು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular