HomeKarnatakaBREAKING: ಬೆಳಗಾವಿಯಲ್ಲಿ ಭೀಕರ ಬೆಂಕಿ ಅವಘಡ: ಹೋಟೆಲ್, ಮೊಬೈಲ್ ಅಂಗಡಿ, ಫೋಟೋ ಸ್ಟುಡಿಯೋ ಸೇರಿ 12...

BREAKING: ಬೆಳಗಾವಿಯಲ್ಲಿ ಭೀಕರ ಬೆಂಕಿ ಅವಘಡ: ಹೋಟೆಲ್, ಮೊಬೈಲ್ ಅಂಗಡಿ, ಫೋಟೋ ಸ್ಟುಡಿಯೋ ಸೇರಿ 12 ಅಂಗಡಿಗಳು ಬೆಂಕಿಗಾಹುತಿ

ಬೆಳಗಾವಿ: ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 12 ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗೂಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪ್ಯಾಟಿ ಓಣಿಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆಗೆ ರಸಗೊಬ್ಬರ ಅಂಗಡಿ, ಹೊಟೆಲ್, ಫೋಟೋ ಸ್ಟೂಡಿಯೋ, ಐಸ್‌ಕ್ರೀಂ ಅಂಗಡಿಗಳು, ರೈತರ ನೀರಾವರಿ ಸಂಘದ ಕಚೇರಿ ಸೇರಿದಂತೆ ಹಲವು ವ್ಯಾಪಾರ ಮಳಿಗೆಗಳು ಬೆಂಕಿಗಾಹುತಿಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಸ್ಥಳಕ್ಕಾಗಿಮಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾಗವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular