HomeLatest NewsBIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ ಜನ ಗಣತಿ ಕಾರ್ಯ...

BIG NEWS : ರಾಜ್ಯದಲ್ಲಿ 50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ ಜನ ಗಣತಿ ಕಾರ್ಯ ಕಡ್ಡಾಯ ; ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ಮುಂಬರುವ ಜನಗಣತಿ-2027 ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಶಿಕ್ಷಕರನ್ನು ನಿಯೋಜಿಸುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದೆ. ಹಿರಿಯ ಶಿಕ್ಷಕರಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ ಎಂಬ ವದಂತಿಗಳನ್ನು ಸರ್ಕಾರ ತಳ್ಳಿಹಾಕಿದೆ.

50 ವರ್ಷ ದಾಟಿದ ಮಹಿಳಾ ಶಿಕ್ಷಕರಿಗೆ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಲಾಗಿದೆ ಎಂದು ಕೆಲವು ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಸುದ್ದಿಯನ್ನು ಸರ್ಕಾರ ನಿರಾಕರಿಸಿದೆ.ವರ್ಷ ಮೇಲ್ಪಟ್ಟ ಮಹಿಳಾ ಶಿಕ್ಷಕರು ಸೇರಿದಂತೆ ಅರ್ಹವಿರುವ ಎಲ್ಲಾ ಶಿಕ್ಷಕರನ್ನು ಜನಗಣತಿ ಮತ್ತು ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು.

ಜಿಲ್ಲಾಧಿಕಾರಿಗಳಿಗೆ ಸೂಚನೆ: ಈ ಬಗ್ಗೆ ಯಾವುದೇ ಗೊಂದಲ ಬೇಡ, ಅಗತ್ಯಕ್ಕೆ ತಕ್ಕಂತೆ ಎಲ್ಲಾ ಶಿಕ್ಷಕರನ್ನು ಗಣತಿದಾರರನ್ನಾಗಿ ನಿಯೋಜಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಆಯುಕ್ತರಿಗೆ ಸರ್ಕಾರ ಸೂಚನೆ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದೆ ಆದೇಶದಲ್ಲಿ..?

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖ(1)ರಲ್ಲಿನ ವಿಜಯ ವಾಣಿ ದಿನಪತ್ರಿಕೆಯಲ್ಲಿ ದಿನಾಂಕ: 19.03.2026 ರಂದು “50 ವರ್ಷ ದಾಟಿದ ಶಾಲಾ ಶಿಕ್ಷಕಿಯರಿಗೆ ಗಣತಿ ವಿನಾಯಿತಿ” ಎಂಬ ಶೀರ್ಷಿಕೆಯಡಿ ಹಾಗೂ ಉಲ್ಲೇಖ(2)ರಲ್ಲಿನ ವಿಶ್ವ ವಾಣಿ ದಿನಪತ್ರಿಕೆಯಲ್ಲಿ ದಿನಾಂಕ: 19.03.2026 ರಂದು “ಹಿರಿಯ ಮಹಿಳಾ ಶಿಕ್ಷಕರಿಗೆ ವಿನಾಯಿತಿ” ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿರುತ್ತದೆ.

ಪರಿಶೀಲಿಸಲಾಗಿ, ಪತ್ರಿಕೆಯಲ್ಲಿ ಪ್ರಕಟವಾದಂತಹ ಯಾವುದೇ ನಿರ್ದೇಶನಗಳನ್ನು ಸರ್ಕಾರದಿಂದ ತಮಗೆ ನೀಡಿರುವುದಿಲ್ಲ. ಭಾರತ ಚುನಾವಣಾ ಆಯೋಗದಿಂದ ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಕಾರ್ಯಕ್ಕೆ ಮತ್ತು ಜನಗಣತಿ ಕಾರ್ಯಕ್ಕೆ 50 ವರ್ಷ ದಾಟಿದ ಮಹಿಳಾ ಶಾಲಾ ಶಿಕ್ಷಕರನ್ನು ಒಳಗೊಂಡಂತೆ ಎಲ್ಲಾ ಶಿಕ್ಷಕರನ್ನು ಅಗತ್ಯಕ್ಕನುಗುಣವಾಗಿ ಗಣತಿದಾರ ಕಾರ್ಯಕ್ಕೆ ನಿಯೋಜಿಸಿಕೊಳ್ಳುವಂತೆ ತಮಗೆ ತಿಳಿಸಲು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular