HomeLatest Newsಮದುವೆಗೆ ಯಾಕೆ ಕರೀಲಿಲ್ಲ ಎಂದು ಮುನಿಸಿಕೊಂಡ ಪುಟ್ಟ ಅಭಿಮಾನಿ ; ಮನೆಗೆ ಕರೆಸಿ 'ಸ್ಪೆಷಲ್ ಟ್ರೀಟ್'...

ಮದುವೆಗೆ ಯಾಕೆ ಕರೀಲಿಲ್ಲ ಎಂದು ಮುನಿಸಿಕೊಂಡ ಪುಟ್ಟ ಅಭಿಮಾನಿ ; ಮನೆಗೆ ಕರೆಸಿ ‘ಸ್ಪೆಷಲ್ ಟ್ರೀಟ್’ ನೀಡಿದ ವಿಜಯ್-ರಶ್ಮಿಕಾ! | VIDEO

ಹೈದರಾಬಾದ್ : ಟಾಲಿವುಡ್‌ನ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಇತ್ತೀಚಿನ ಸಿನಿಮಾಗಳಿಗಿಂತಲೂ ಹೆಚ್ಚಾಗಿ ತಮ್ಮ ಈ ಒಂದು ನಡೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ. ತಮ್ಮ ಮದುವೆಗೆ ಕರೆಯಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡಿದ್ದ ಒಬ್ಬ ಪುಟ್ಟ ಅಭಿಮಾನಿಯನ್ನು ಮನೆಗೆ ಕರೆಸಿ ಆಕೆಯ  ಬೇಸರ ದೂರ ಮಾಡಿದ್ದಾರೆ.

ಹೌದು.  ತೆರೆಯ ಮೇಲಷ್ಟೇ ಅಲ್ಲದೆ ನಿಜ ಜೀವನದಲ್ಲೂ ಟಾಲಿವುಡ್ ಸ್ಟಾರ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಔದಾರ್ಯ ಮೆರೆದಿದ್ದಾರೆ. ತಮ್ಮ ಮದುವೆಗೆ ಆಮಂತ್ರಣ ನೀಡಲಿಲ್ಲವೆಂದು ಬೇಸರಗೊಂಡಿದ್ದ ಪುಟಾಣಿ ಅಭಿಮಾನಿಯೊಬ್ಬನ ಮುಗ್ಧ ಮುನಿಸನ್ನು ಗಮನಿಸಿದ ಈ ಜೋಡಿ, ಆತನನ್ನು ವಿಶೇಷವಾಗಿ ತಮ್ಮ ಮನೆಗೆ ಆಹ್ವಾನಿಸಿ ‘ಸ್ಪೆಷಲ್ ಟ್ರೀಟ್’ ನೀಡುವ ಮೂಲಕ ಅಭಿಮಾನಿಯ ಮನ ಗೆದ್ದಿದ್ದಾರೆ. ಪುಟಾಣಿ ಅಭಿಮಾನಿಗಾಗಿ ಸಮಯ ಮೀಸಲಿಟ್ಟ ಈ ತಾರಾ ಜೋಡಿಯ ನಡೆಗೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗುತ್ತಿದೆ.

ಏನಿದು ಘಟನೆ ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು. ಇದನ್ನು ನೋಡಿದ ಒಬ್ಬ ಪುಟ್ಟ ಅಭಿಮಾನಿ, “ನನ್ನನ್ನು ಯಾಕೆ ಮದುವೆಗೆ ಕರೆಯಲಿಲ್ಲ?” ಎಂದು ವಿಡಿಯೋ ಮಾಡಿ ತನ್ನ ಮುಗ್ಧ ಬೇಸರವನ್ನು ವ್ಯಕ್ತಪಡಿಸಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಭಿಮಾನಿಯ ಈ ವಿಡಿಯೋವನ್ನು ಗಮನಿಸಿದ ವಿಜಯ್ ಮತ್ತು ರಶ್ಮಿಕಾ, ಆ ಪುಟ್ಟ ಬಾಲಕಿಯನ್ನು ಮತ್ತು ಆತನ ಕುಟುಂಬವನ್ನು ತಮ್ಮ ಮನೆಗೆ ಆತ್ಮೀಯವಾಗಿ ಆಹ್ವಾನಿಸಿದರು. ಸಾಕಷ್ಟು ಸಮಯ ಕಳೆದ ಈ ಜೋಡಿ, ಆಕೆಗೆ  ಇಷ್ಟವಾದ ತಿಂಡಿ-ತಿನಿಸುಗಳನ್ನು ನೀಡಿ ‘ಸ್ಪೆಷಲ್ ಟ್ರೀಟ್’ ನೀಡಿದರು. ವಿಜಯ್ ಮತ್ತು ರಶ್ಮಿಕಾ ಜೊತೆ ಫೋಟೋ ತೆಗೆಸಿಕೊಂಡ ಬಾಲಕಿಯ  ಮುಖದಲ್ಲಿ ಈಗ ನಗು ಅರಳಿದೆ. ತಮ್ಮ ಮುಂದಿನ ಚಿತ್ರ ಬಿಡುಗಡೆ ಸಿದ್ಧತೆ ಮತ್ತು ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರೂ, ಈ ಜೋಡಿ ಅಭಿಮಾನಿಗಾಗಿ ಸಮಯ ಮೀಸಲಿಟ್ಟಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ವೈರಲ್ ಫೋಟೋಗಳು

ವಿಜಯ್ ಮತ್ತು ರಶ್ಮಿಕಾ ಆ ಪುಟಾಣಿ ಅಭಿಮಾನಿಯ ಜೊತೆ ನಗುತ್ತಿರುವ ಫೋಟೋಗಳು ಈಗ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡ್ ಆಗುತ್ತಿವೆ. ಅಭಿಮಾನಿಗಳ ಮೇಲಿರುವ ಇವರ ಪ್ರೀತಿಯನ್ನು ಕಂಡು ನೆಟ್ಟಿಗರು ‘ರಿಯಲ್ ಸ್ಟಾರ್ಸ್’ ಎಂದು ಹೊಗಳುತ್ತಿದ್ದಾರೆ.

View this post on Instagram

A post shared by urs lucky thalli 😍 (@urs_luckythalli)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular