ಹಾಸನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮಾರ್ಚ್ 24ರಂದು ನೇರ ಸಂದರ್ಶನ ಆಯೋಜನೆ ಮಾಡಿದೆ. ಸಮೃದ್ದಿಸಿರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಈ ನೇರ ಸಂದರ್ಶನ ಆಯೋಜನೆ ಮಾಡಲಾಗಿದ್ದು, ಆಸಕ್ತರು ಪಾಲ್ಗೊಳ್ಳಬಹುದು.
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಮತ್ತು ನಾಗರಿಕ್ ಎಂಪವರ್ ಮೆಂಟ್ ಸಲ್ಯೂಸನ್ ಲಿಮಿಟೆಡ್ ಹಾಗೂ ಸಮೃದ್ದಿಸಿರಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಸಂಬಂಧ ಮಾರ್ಚ್ 24ರ ಬೆಳಗ್ಗೆ 10.30ಕ್ಕೆ ನೇರ ಸಂದರ್ಶನ ಆಯೋಜಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ಎಸ್ಎಸ್ಎಲ್ಸಿ, ಪಿಯುಸಿ, ಯಾವುದೇ ಪದವಿ ಪಾಸಾದ ಪುರುಷ/ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ನೇರ ಸಂದರ್ಶನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಸರ್ಕಾರಿ ಐ.ಟಿ.ಐ. ಕಾಲೇಜು ಆವರಣ ಇಲ್ಲಿ ನಡೆಯಲಿದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08172-296374 ಸಂಪರ್ಕಿಸಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸ್ವ-ಉದ್ಯೋಗ ತರಬೇತಿ: ಕೂಡಿಗೆ ಯೂನಿಯನ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಿರುದ್ಯೋಗಿ ಯುವತಿಯರಿಗೆ ಊಟ, ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿ ನೀಡಲಾಗುವ ಸ್ವ-ಉದ್ಯೋಗ ತರಬೇತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಅರ್ಜಿ ಸಲ್ಲಿಸಲು 18 ರಿಂದ 50 ವರ್ಷ ವಯೋಮಿತಿಯೊಳಗಿನ ಯುವತಿಯರಿಗೆ ಮಾತ್ರ ಅವಕಾಶ. ಆಸಕ್ತಿ ಉಳ್ಳವರು ಸಂಸ್ಥೆಯನ್ನು ನೇರವಾಗಿ ಅಥವಾ ಕರೆ ಮಾಡಿ ಮಾಹಿತಿ ಪಡೆಯಬಹುದು.
ಬ್ಯೂಟಿ ಪಾರ್ಲರ್ ತರಬೇತಿ 35 ದಿನಗಳು. ಪ್ರಾರಂಭ 01.04.2026 ರಿಂದ 05.05.2026ರ ವರೆಗೆ., ಮಹಿಳೆಯರ ಹೊಲಿಗೆ ತರಬೇತಿ 31 ದಿನಗಳು. ಪ್ರಾರಂಭ 06.05.2026 ರಿಂದ 05.06.2026ರ ವರೆಗೆ.
ಕಂಪ್ಯೂಟರ್ ಲೆಕ್ಕಪತ್ರ ನಿರ್ವಹಣೆ ತರಬೇತಿ 38 ದಿನಗಳು. ಪ್ರಾರಂಭ 13.05.2026 ರಿಂದ 19.06.2026ರ ವರೆಗೆ, ಅಣಬೆ ಬೇಸಾಯ ತರಬೇತಿ 10 ದಿನಗಳು. ಪ್ರಾರಂಭ 27.05.2026 ರಿಂದ 05.06.2026ರ ವರೆಗೆ ನಡೆಯಲಿದೆ.
ಆಸಕ್ತರು ಹೆಚ್ಚಿನ ಮಾಹಿತಿಗೆ 9686406181, 9449402081, 8618471801, 9900142602 ಸಂಖ್ಯೆಗಳನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ ಪ್ರಕಾಶ್ ಕುಮಾರ್ ತಿಳಿಸಿದ್ದಾರೆ.

