ಜಾತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಡೆಯುವ ‘ಮರ್ಯಾದೆಗೇಡು ಹತ್ಯೆ’ (Honour Killing) ಹಾಗೂ ದೌರ್ಜನ್ಯಗಳನ್ನು ತಡೆಯಲು ಕರ್ನಾಟಕ ಸರ್ಕಾರವು ಅತ್ಯಂತ ಕಟ್ಟುನಿಟ್ಟಿನ ಕಾಯಿದೆಯನ್ನು ಜಾರಿಗೆ ತಂದಿದೆ. 12ನೇ ಶತಮಾನದ ಬಸವಣ್ಣನವರ “ಇವ ನಮ್ಮವ ಇವ ನಮ್ಮವ” ಎಂಬ ವಿಶ್ವಮಾನವ ಸಂದೇಶದ ಸಾಲುಗಳನ್ನೇ ಈ ವಿಧೇಯಕಕ್ಕೆ ಹೆಸರಾಗಿ ಇಡಲಾಗಿದೆ. ಈ ವಿಧೇಯಕವನ್ನು ಸಚಿವ ಪ್ರಿಯಾಂಕ್ ಖರ್ಗೆ ನಿನ್ನೆ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.
ಈ ಕಾಯ್ದೆಯಡಿ ಮರ್ಯಾದಾ ಹತ್ಯೆ ಮಾಡುವವರಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ ದಂಪತಿಗೆ ಕಿರುಕುಳ ನೀಡುವವರಿಗೆ ಭಾರಿ ದಂಡ ವಿಧಿಸುವ ಕಠಿಣ ನಿಯಮಗಳನ್ನು ರೂಪಿಸಲಾಗಿದೆ. ಹೌದು. ಅಂತರ್ಜಾತಿ ವಿವಾಹವಾಗುವ ಜೋಡಿಗಳಿಗೆ ಎದುರಾಗುವ ಸಾಮಾಜಿಕ ಬಹಿಷ್ಕಾರ, ಕಿರುಕುಳ ಮತ್ತು ಮರ್ಯಾದಾ ಹತ್ಯೆಗಳಂತಹ ಘಟನೆಗಳನ್ನು ತಡೆಯಲು ಕರ್ನಾಟಕ ಸರ್ಕಾರವು ವಿಧಾನಸಭೆಯಲ್ಲಿ ಈ ಹೊಸ ವಿಧೇಯಕವನ್ನು ಮಂಡಿಸಿದೆ.
ಅಂತರ್ಜಾತಿ ಮದುವೆಯಾದವರಿಗೆ ಸಾಮಾಜಿಕ ಅಥವಾ ಆರ್ಥಿಕ ಬಹಿಷ್ಕಾರ ಹಾಕುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ದಂಪತಿಯನ್ನು ಅವರ ವಾಸಸ್ಥಳದಿಂದ ಹೊರಹಾಕುವಂತೆ ಒತ್ತಾಯಿಸುವುದು ಅಪರಾಧವಾಗುತ್ತದೆ.
- ‘ಇವ ನಮ್ಮವ ಇವ ನಮ್ಮವ’ ವಿಧೇಯಕ-2026: ಮರ್ಯಾದಾ ಹತ್ಯೆ (Honour Killing) ಮತ್ತು ಅಂತರ್ಜಾತಿ ವಿವಾಹಿತರ ಮೇಲೆ ನಡೆಯುವ ದೌರ್ಜನ್ಯಗಳನ್ನು ತಡೆಯಲು ಸಚಿವ ಸಂಪುಟವು ಈ ವಿಶೇಷ ವಿಧೇಯಕಕ್ಕೆ ಅನುಮೋದನೆ ನೀಡಿದೆ.
• ಜೀವಾವಧಿ ಶಿಕ್ಷೆ: ಜಾತಿ ಕಾರಣಕ್ಕಾಗಿ ಮರ್ಯಾದಾ ಹತ್ಯೆ ಮಾಡುವವರಿಗೆ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ. - • ದೈಹಿಕ ಹಲ್ಲೆಗೆ ದಂಡನೆ: ಅಂತರ್ಜಾತಿ ವಿವಾಹಿತರ ಮೇಲೆ ಹಲ್ಲೆ ನಡೆಸಿದರೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
- • ಮೋಸದ ಮದುವೆಗೆ ಶಿಕ್ಷೆ: ವಿವಾಹದ ಆಮಿಷವೊಡ್ಡಿ ಲೈಂಗಿಕ ಸಂಪರ್ಕ ಬೆಳೆಸಿ, ನಂತರ ಜಾತಿಯ ಕಾರಣ ನೀಡಿ ಮದುವೆಗೆ ನಿರಾಕರಿಸಿದರೆ ಅದನ್ನು ‘ಅತ್ಯಾಚಾರ’ ಎಂದು ಪರಿಗಣಿಸಿ ಕಠಿಣ ಶಿಕ್ಷೆ ನೀಡಲಾಗುವುದು.
- ಸಾಮಾಜಿಕ ಬಹಿಷ್ಕಾರಕ್ಕೆ ಬ್ರೇಕ್: ಅಂತರ್ಜಾತಿ ಮದುವೆಯಾದ ಕಾರಣಕ್ಕೆ ಕುಟುಂಬ ಅಥವಾ ದಂಪತಿಯನ್ನು ಊರಿನಿಂದ ಹೊರಹಾಕುವುದು, ಸಾಮಾಜಿಕವಾಗಿ ಬಹಿಷ್ಕರಿಸುವುದು ಅಥವಾ ಆರ್ಥಿಕವಾಗಿ ತೊಂದರೆ ಕೊಡುವುದನ್ನು ಈ ಕಾಯ್ದೆ ಕಟ್ಟುನಿಟ್ಟಾಗಿ ನಿಷೇಧಿಸುತ್ತದೆ.
- ಹಣಕಾಸಿನ ನೆರವು (Incentives): ಅಂತರ್ಜಾತಿ ವಿವಾಹವನ್ನು ಪ್ರೋತ್ಸಾಹಿಸಲು ಸರ್ಕಾರವು ಆರ್ಥಿಕ ಸಹಾಯವನ್ನೂ ನೀಡುತ್ತಿದೆ:
• ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡದ (ST) ವ್ಯಕ್ತಿಯನ್ನು ಅನ್ಯ ಜಾತಿಯವರು ಮದುವೆಯಾದರೆ, ಅಂತಹ ದಂಪತಿಗಳಿಗೆ ಅವರ ವಾರ್ಷಿಕ ಆದಾಯದ ಮಿತಿಯ ಆಧಾರದ ಮೇಲೆ 50,000 ರೂ.ನಿಂದ 5 ಲಕ್ಷ ರೂ.ವರೆಗೆ ಪ್ರೋತ್ಸಾಹಧನ ನೀಡಲಾಗುತ್ತದೆ. - ರಕ್ಷಣೆ ಮತ್ತು ಭದ್ರತೆ: ಜೀವ ಬೆದರಿಕೆ ಇರುವ ಅಂತರ್ಜಾತಿ ವಿವಾಹಿತ ದಂಪತಿಗಳಿಗೆ ಪೊಲೀಸ್ ಇಲಾಖೆಯ ಮೂಲಕ ವಿಶೇಷ ರಕ್ಷಣೆ ಒದಗಿಸಲು ಮತ್ತು ಅವರಿಗಾಗಿ ‘ಸುರಕ್ಷಿತ ಮನೆ’ಗಳನ್ನು (Safe Houses) ಸ್ಥಾಪಿಸಲು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.
- ಸ್ವತಂತ್ರ ವಿವಾಹ: ಇಬ್ಬರು ವಯಸ್ಕರು ವಿವಾಹವಾಗಲು ಪೋಷಕರ ಒಪ್ಪಿಗೆಯ ಅಗತ್ಯವಿಲ್ಲ ಎಂದು ವಿಧೇಯಕ ಸ್ಪಷ್ಟಪಡಿಸಿದೆ.
*ಧಾರ್ಮಿಕ ಮತ್ತು ಆಸ್ತಿ ಹಕ್ಕು: ಅಂತರ್ಜಾತಿ ವಿವಾಹಿತರಿಗೆ ಪೂಜಾ ಸ್ಥಳಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಮತ್ತು ಕುಟುಂಬದ ಆಸ್ತಿಯಿಂದ ಅವರನ್ನು ವಂಚಿಸುವಂತಿಲ್ಲ.
*ಕಿರುಕುಳಕ್ಕೆ ತಡೆ: ದಂಪತಿಗೆ ಕೆಲಸ ನೀಡಲು ನಿರಾಕರಿಸುವುದು, ಬ್ಯಾಂಕ್ ಖಾತೆ ಸ್ಥಗಿತಗೊಳಿಸುವುದು ಅಥವಾ ಅವರಿಗೆ ಸಹಕಾರ ನೀಡುವವರನ್ನು ಬಹಿಷ್ಕರಿಸುವುದು ಶಿಕ್ಷಾರ್ಹ ಅಪರಾಧ.
*ದೈಹಿಕ ಹಿಂಸೆ ಮತ್ತು ಮರ್ಯಾದಾ ಹತ್ಯೆ: ಬಲವಂತದ ಗರ್ಭಪಾತಕ್ಕೆ ಒತ್ತಡ ಹೇರುವುದು ಅಥವಾ ದಂಪತಿಯನ್ನು ಬೇರ್ಪಡಿಸಿ ಬೇರೆ ಮದುವೆ ಮಾಡಿಸುವುದು ಅಪರಾಧ. ಮರ್ಯಾದಾ ಹತ್ಯೆ ಮಾಡಿದರೆ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ.
*ಶಿಕ್ಷೆಯ ಪ್ರಮಾಣ: ದಂಪತಿಯನ್ನು ಗಾಯಗೊಳಿಸಿದರೆ 3 ಲಕ್ಷ ರೂ. ದಂಡ ಮತ್ತು 3 ವರ್ಷ ಜೈಲು, ಬೆದರಿಕೆ ಹಾಕಿದರೆ 5 ರಿಂದ 7 ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಕಾಶವಿದೆ.
*ಗೌಪ್ಯತೆ: ವಿವಾಹಿತ ಜೋಡಿಯ ವಿಚಾರದಲ್ಲಿ ಸಾಕ್ಷಿಗಳ ಗುರುತು ಮತ್ತು ವಿಳಾಸವನ್ನು ಬಹಿರಂಗಪಡಿಸುವಂತಿಲ್ಲ.
ಮರ್ಯಾದೆಗೇಡು ಹತ್ಯೆಗೆ ಕಠಿಣ ಶಿಕ್ಷೆ: ಮರ್ಯಾದೆ ಅಥವಾ ಸಂಪ್ರದಾಯದ ಹೆಸರಿನಲ್ಲಿ ದಂಪತಿ ಅಥವಾ ಅವರಲ್ಲಿ ಯಾರನ್ನಾದರೂ ಹತ್ಯೆ ಮಾಡಿದರೆ, ಅಪರಾಧಿಗಳಿಗೆ ಕನಿಷ್ಠ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲು ಈ ವಿಧೇಯಕದಲ್ಲಿ ಅವಕಾಶವಿದೆ.

