ಬೆಂಗಳೂರು: ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಕೊರತೆಯನ್ನು ನಿವಾರಿಸಲು ಕರ್ನಾಟಕ ಸರ್ಕಾರ ಇಂದು ಮಹತ್ವದ ನಿರ್ಧಾರ ಕೈಗೊಂಡಿದೆ. ನಾಳೆಯಿಂದಲೇ ಜಾರಿಗೆ ಬರುವಂತೆ ಗ್ಯಾಸ್ ವಿತರಣೆಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಇದು ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆಯಿದೆ.
ಯಾರಿಗೆ ಎಷ್ಟು ಆದ್ಯತೆ?
ಗ್ಯಾಸ್ ವಿತರಣೆಯಲ್ಲಿ ಸರ್ಕಾರವು ಅಗತ್ಯ ಸೇವೆಗಳಿಗೆ ಮೊದಲ ಆದ್ಯತೆ ನೀಡಿದೆ. ಏಜೆನ್ಸಿಗಳು ಮತ್ತು ಕಂಪನಿಗಳಿಗೆ ನೀಡಿರುವ ಸೂಚನೆಯಲ್ಲಿ ಯಾವ ವಲಯಕ್ಕೆ ಎಷ್ಟು ಪ್ರಮಾಣದಲ್ಲಿ ಸಿಲಿಂಡರ್ ಪೂರೈಸಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ
ಕಮರ್ಷಿಯಲ್ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದಾಗಿ ಜನಸಾಮಾನ್ಯರಿಗೆ ಮತ್ತು ಸೇವಾ ವಲಯಕ್ಕೆ ತೊಂದರೆಯಾಗಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ. ಈ ಮಾರ್ಗಸೂಚಿಗಳು ನಾಳೆಯಿಂದಲೇ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ಸರ್ಕಾರದ ಈ ಆದೇಶದಿಂದಾಗಿ ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರ ನಿಟ್ಟುಸಿರು ಬಿಟ್ಟಿದ್ದರೆ, ಹೋಟೆಲ್ ಮಾಲೀಕರು ಮಾತ್ರ ಆತಂಕಕ್ಕೆ ಒಳಗಾಗಿದ್ದಾರೆ. ಕೇವಲ ಶೇ.10 ರಷ್ಟು ಗ್ಯಾಸ್ ಪೂರೈಕೆಯಾದರೆ ಮುಂದಿನ ದಿನಗಳಲ್ಲಿ ಹೋಟೆಲ್ ತಿಂಡಿ-ತಿನಿಸುಗಳ ದರ ಏರಿಕೆಯಾಗುತ್ತಾ ಅಥವಾ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಾ ಎಂಬ ಪ್ರಶ್ನೆ ಮೂಡಿದೆ.
ಯಾವ ವಲಯಕ್ಕೆ ಎಷ್ಟು ಶೇಕಡಾವಾರು ಗ್ಯಾಸ್ ವಿತರಣೆ?
ಆಸ್ಪತ್ರೆ – 100%
ಶಿಕ್ಷಣ ಸಂಸ್ಥೆಗಳಿಗೆ- 100%
ಸೀಡ್ ಪ್ರೋಸೆಸಿಂಗ್ – 70%
ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
ಏರ್ ಲೈನ್ಸ್, ರೈಲ್ವೆ – 70%
ಸೀಡ್ ಪ್ರೋಸೆಸಿಂಗ್ – 70%
ಆಯಿಲ್ ಉತ್ಪಾದನೆ ಕಂಪನಿಗಳಿಗೆ – 70%
ಏರ್‌ಲೈನ್ಸ್, ರೈಲ್ವೆ – 70%
ಇಂಡಸ್ಟ್ರೀಯಲ್ ಕ್ಯಾಂಟಿನ್ – 10% ಗ್ಯಾಸ್
ಕಾರ್ಪೋರೇಟ್ ಗೆಸ್ಟ್ ಹೌಸ್ – 10%
ಫುಡ್ ಪ್ರೋಸೆಸಿಂಗ್ ಕಂಪನಿ – 10%
ವದ್ಧಾಶ್ರಮಗಳಿಗೆ – 70%
ಹೋಟೆಲ್ – 10%

