ಮೈಸೂರಿನ ಗೋಕುಲಂ ಚಿತ್ರಮಂದಿರ ಆವರಣದಲ್ಲಿ ಆಕಸ್ಮಿಕವಾಗಿ ಕಾಣಿಸಿದ ಬೆಂಕಿ ನಂದಿಸಲು ಹೋಗಿ ಭದ್ರತಾ ಸಿಬ್ಬಂದಿ ಸಜೀವ ದಹನವಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಮರಿ ಶೆಟ್ಟಿ(75) ಮೃತಪಟ್ಟ ಭದ್ರತಾ ಸಿಬ್ಬಂದಿ ಗೋಕುಲಂ ಚಿತ್ರಮಂದಿರ ಮುಚ್ಚಿದ್ದು, ಯಾವುದೇ ಚಿತ್ರ ಪ್ರದರ್ಶನ ಆಗುತ್ತಿರಲಿಲ್ಲ. 45 ವರ್ಷಗಳಿಂದ ಮರಿ ಶೆಟ್ಟಿ ಇಲ್ಲಿ ವಾಚ್ ಮನ್ ಆಗಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಚಿತ್ರಮಂದಿರ ಆವರಣ ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಮುಂದಾದಾಗ ಅವರು ಜ್ವಾಲೆಯಿಂದ ಹೊರಬರಲಾರದೆ ಸಜೀವ ದಹನವಾಗಿದ್ದಾರೆ. ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

