HomeLatest NewsSHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ; ಮಿಸ್‌ಫೈರ್ ಆಗಿ ಯುವಕ ಸಾವು |WATCH...

SHOCKING : ಎದೆಗೆ ರಿವಾಲ್ವರ್ ಇಟ್ಟು ರೀಲ್ಸ್ ; ಮಿಸ್‌ಫೈರ್ ಆಗಿ ಯುವಕ ಸಾವು |WATCH VIDEO

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಫೇಮಸ್ ಆಗಲು ಯುವಕರು ಮಾಡುತ್ತಿರುವ ಅಪಾಯಕಾರಿ ಸಾಹಸಗಳು ಇಂದು ಮತ್ತೊಂದು ಬಲಿ ಪಡೆದಿವೆ. ದೆಹಲಿಯ ದಲ್ಲೂಪುರದಲ್ಲಿ ಪವನ್ ಎಂಬ ಯುವಕ ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ದುರಂತ ಅಂತ್ಯ ಕಂಡಿದ್ದಾನೆ. ಲೋಡ್ ಮಾಡಿದ ರಿವಾಲ್ವರ್ ಅನ್ನು ಎದೆಗೆ ಇಟ್ಟುಕೊಂಡು ಪೋಸ್ ನೀಡುತ್ತಿದ್ದಾಗ ಅಚಾನಕ್ಕಾಗಿ ಟ್ರಿಗರ್ ಒತ್ತಲ್ಪಟ್ಟಿದೆ. ಗುಂಡು ಎದೆಯನ್ನು ಸೀಳಿ ಹೋಗಿದ್ದು, ವಿಡಿಯೋ ಮಾಡುತ್ತಿದ್ದ ಗೆಳೆಯನ ಮುಂದೆಯೇ ಯುವಕ ಕುಸಿದು ಬಿದ್ದಿದ್ದಾನೆ. ಈ ಭೀಕರ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ದೆಹಲಿಯ ಪವನ್ ಎಂಬ ಯುವಕ ಸಿನಿಮಾ ಶೈಲಿಯಲ್ಲಿ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ. ರಿವಾಲ್ವರ್ ಹಿಡಿದು ಅದಕ್ಕೆ ಬುಲೆಟ್ ಲೋಡ್ ಮಾಡಿದ ಪವನ್, ಯಾವುದೇ ಭಯವಿಲ್ಲದವನಂತೆ ನಟಿಸಲು ಅದನ್ನು ತನ್ನ ಎದೆಗೆ ಇಟ್ಟುಕೊಂಡಿದ್ದಾನೆ. ಈ ವೇಳೆ ಆತನ ಗೆಳೆಯ ವಿಡಿಯೋ ಚಿತ್ರೀಕರಿಸುತ್ತಿದ್ದನು.

ದುರಂತ ಅಂತ್ಯ: ವಿಡಿಯೋ ಮಾಡುತ್ತಿದ್ದ ಗೆಳೆಯ “ಗುಂಡು ಹಾರಿಸಬೇಡ” ಎಂದು ಎಚ್ಚರಿಕೆ ನೀಡಿದರೂ, ಪವನ್ ನಗುತ್ತಲೇ “ಅರೆ ಇಲ್ಲಪ್ಪ” ಎಂದು ಉತ್ತರಿಸಿದ್ದಾನೆ. ಆದರೆ ಅದೇ ಕ್ಷಣದಲ್ಲಿ ಅಚಾನಕ್ಕಾಗಿ ಟ್ರಿಗರ್ ಒತ್ತಲ್ಪಟ್ಟಿದೆ. ಗುಂಡು ಪವನ್ ಎದೆ ಸೀಳಿ ಹೋಗಿದ್ದು, ಆತ ಗೆಳೆಯನ ಮುಂದೆಯೇ ನೆಲಕ್ಕುರುಳಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅಷ್ಟರಲ್ಲೇ ಆತ ಮೃತಪಟ್ಟಿದ್ದ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಇಡೀ ಘಟನೆಯು ಗೆಳೆಯ ಸೆರೆಹಿಡಿಯುತ್ತಿದ್ದ ವಿಡಿಯೋದಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆಯಲು ಇಂತಹ ಅಪಾಯಕಾರಿ ಸಾಹಸಗಳನ್ನು ಮಾಡುವುದು ಎಂತಹ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular