HomeLatest News'ಹೋಟೆಲ್‌' ನಲ್ಲಿ ಲವರ್ ಜೊತೆ ಪತ್ನಿಯನ್ನು ರೆಡ್-ಹ್ಯಾಂಡ್ ಆಗಿ ಹಿಡಿದ ಪತಿ ; ವಿಡಿಯೋ ವೈರಲ್...

‘ಹೋಟೆಲ್‌’ ನಲ್ಲಿ ಲವರ್ ಜೊತೆ ಪತ್ನಿಯನ್ನು ರೆಡ್-ಹ್ಯಾಂಡ್ ಆಗಿ ಹಿಡಿದ ಪತಿ ; ವಿಡಿಯೋ ವೈರಲ್ |WATCH VIDEO

ಉತ್ತರ ಪ್ರದೇಶದ ಅಲಿಗಢದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಹೋಟೆಲ್ ಕೋಣೆಯೊಳಗೆ ಪ್ರಿಯತಮನ ಜೊತೆ ರೆಡ್-ಹ್ಯಾಂಡ್ ಆಗಿ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಕ್ವಾರ್ಸಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮ್‌ಘಾಟ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ

ಬುಲಂದ್‌ಶಹರ್ ಜಿಲ್ಲೆಯ ಗುಲಾವತಿ ನಿವಾಸಿ ಆಕಾಶ್ ಕುಮಾರ್, ಸುಮಾರು ಮೂರೂವರೆ ವರ್ಷಗಳ ಹಿಂದೆ ಈ ಮಹಿಳೆಯನ್ನು ಪ್ರೇಮ ವಿವಾಹವಾಗಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಪತ್ನಿಯ ನಡವಳಿಕೆಯ ಮೇಲೆ ಅನುಮಾನಗೊಂಡು ಆಕೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದರು.

ಶನಿವಾರ ಪತ್ನಿ ಮನೆಯಿಂದ ಹೊರಟಾಗ ಆಕಾಶ್ ಆಕೆಯನ್ನು ಹಿಂಬಾಲಿಸಿದ್ದಾರೆ. ಆಕೆ ಮೃದುಲ್ (ಅಲಿಯಾಸ್ ನಿಖಿಲ್) ಎಂಬ ವ್ಯಕ್ತಿಯ ಜೊತೆ ರಾಮ್‌ಘಾಟ್ ರಸ್ತೆಯ ಹೋಟೆಲ್ ಪ್ರವೇಶಿಸುವುದನ್ನು ಕಂಡು ಕೂಡಲೇ ಕ್ವಾರ್ಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರೊಂದಿಗೆ ಹೋಟೆಲ್ ಕೋಣೆಯ ಮೇಲೆ ದಾಳಿ ಮಾಡಿದಾಗ ಪತ್ನಿ ಮತ್ತು ಪ್ರಿಯತಮ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಕ್ಷಿಣೆ ಕೇಸ್ ಟ್ವಿಸ್ಟ್ : ಈ ನಡುವೆ ಮಹಿಳೆಯು ತನ್ನ ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿರುವುದು ಬೆಳಕಿಗೆ ಬಂದಿದೆ. “ಬೇರೊಬ್ಬನ ಜೊತೆ ಹೊಸ ಜೀವನ ಆರಂಭಿಸಲು ಮತ್ತು ನನ್ನಿಂದ ಹಣ ಪಡೆಯಲು ಅವಳು ಉದ್ದೇಶಪೂರ್ವಕವಾಗಿ ಸುಳ್ಳು ಕೇಸ್ ದಾಖಲಿಸಿದ್ದಾಳೆ” ಎಂದು ಪತಿ ಆಕಾಶ್ ಆರೋಪಿಸಿದ್ದಾರೆ.

ವಿಡಿಯೋ ವೈರಲ್: ಹೋಟೆಲ್‌ನಲ್ಲಿ ಪತಿ, ಪತ್ನಿ ಮತ್ತು ಪ್ರಿಯತಮನ ನಡುವೆ ನಡೆದ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದು ವರದಕ್ಷಿಣೆ ಕಾನೂನುಗಳ ದುರ್ಬಳಕೆಯ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದೆ. ವಿಚಾರಣೆಯ ನಂತರ ಪ್ರಿಯತನ ವಿರುದ್ಧ ಸೆಕ್ಷನ್ 497ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಮಹಿಳೆಯನ್ನು ಆಕೆಯ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಪ್ರಕರಣದ ಕುರಿತು ವಿವರವಾದ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular