ನವದೆಹಲಿ: ಸಂಬಳ ಪಡೆಯುವ ಪ್ರತಿಯೊಬ್ಬ ಉದ್ಯೋಗಿಗೂ ಪಿಎಫ್ (PF) ಎಂಬುದು ಭವಿಷ್ಯದ ದೊಡ್ಡ ಆಸರೆ. ಇದೀಗ 2025-26ನೇ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರವು 8.25% ಬಡ್ಡಿದರವನ್ನು ಕಾಯ್ದುಕೊಂಡಿದ್ದು, ಕೋಟ್ಯಂತರ ಉದ್ಯೋಗಿಗಳ ಖಾತೆಗೆ ಹಣ ಜಮೆಯಾಗುವ ಸಮಯ ಹತ್ತಿರವಾಗುತ್ತಿದೆ.
ನಿಮ್ಮ ಖಾತೆಗೆ ಹಣ ಯಾವಾಗ ಬರಲಿದೆ?
ಸಾಮಾನ್ಯವಾಗಿ ಇಪಿಎಫ್ಒ (EPFO) ಬಡ್ಡಿ ಹಣವನ್ನು ಹಣಕಾಸು ವರ್ಷ ಮುಗಿದ ನಂತರದ ಕೆಲವು ತಿಂಗಳಲ್ಲಿ ಜಮೆ ಮಾಡುತ್ತದೆ. ಕಳೆದ ವರ್ಷದ ಟ್ರೆಂಡ್ ಗಮನಿಸಿದರೆ, ಈ ಬಾರಿ ಜೂನ್ ಮತ್ತು ಸೆಪ್ಟೆಂಬರ್ (2026) ನಡುವೆ ನಿಮ್ಮ ಪಾಸ್ಬುಕ್ಗೆ ಬಡ್ಡಿ ಹಣ ಕ್ರೆಡಿಟ್ ಆಗುವ ನಿರೀಕ್ಷೆಯಿದೆ. ಒಂದು ವೇಳೆ ವಿಳಂಬವಾದರೂ ಚಿಂತಿಸಬೇಡಿ, ನವೆಂಬರ್ 2024ರ ಹೊಸ ನಿಯಮದಂತೆ ಸೆಟಲ್ಮೆಂಟ್ ದಿನಾಂಕದವರೆಗಿನ ಪೂರ್ಣ ಬಡ್ಡಿಯನ್ನು ಸರ್ಕಾರ ನೀಡಲಿದೆ.
ಲೆಕ್ಕಾಚಾರ: ₹5 ಲಕ್ಷಕ್ಕೆ ಎಷ್ಟು ಬಡ್ಡಿ ಸಿಗುತ್ತೆ?
ನಿಮ್ಮ ಇಪಿಎಫ್ ಖಾತೆಯಲ್ಲಿರುವ ಮೊತ್ತಕ್ಕೆ ಸಿಗುವ ವಾರ್ಷಿಕ ಬಡ್ಡಿಯ ಅಂದಾಜು ಪಟ್ಟಿ ಇಲ್ಲಿದೆ:
ವಿವರ ಅಂದಾಜು ಮೊತ್ತ
ಒಟ್ಟು ಪಿಎಫ್ ಬ್ಯಾಲೆನ್ಸ್₹5,00,000
ಬಡ್ಡಿ ದರ (2025-26)8.25%
ವಾರ್ಷಿಕ ಬಡ್ಡಿ ಆದಾಯ₹41,250
ಬ್ಯಾಲೆನ್ಸ್ ಚೆಕ್ ಮಾಡಲು ಬಂದಿದೆ ಹೊಸ Passbook Lite
ಈಗ ಪಿಎಫ್ ಬ್ಯಾಲೆನ್ಸ್ ತಿಳಿಯುವುದು ಮತ್ತಷ್ಟು ಸುಲಭ. ಇಪಿಎಫ್ಒ ಹೊಸದಾಗಿ Passbook Lite ವೈಶಿಷ್ಟ್ಯವನ್ನು ಪರಿಚಯಿಸಿದೆ:
ಇಪಿಎಫ್ಒ ವೆಬ್ಸೈಟ್ಗೆ ಹೋಗಿ UAN ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.
View ಆಯ್ಕೆಯಲ್ಲಿ Passbook Lite ಕ್ಲಿಕ್ ಮಾಡಿ.
ಇಲ್ಲಿ ನಿಮ್ಮ ಇತ್ತೀಚಿನ 5 ಕಾಂಟ್ರಿಬ್ಯೂಷನ್ಗಳನ್ನು ಕ್ಷಣಾರ್ಧದಲ್ಲಿ ನೋಡಬಹುದು.
ಇದಲ್ಲದೆ UMANG ಆಪ್, ಮಿಸ್ಡ್ ಕಾಲ್ ಅಥವಾ ಎಸ್ಎಂಎಸ್ ಮೂಲಕವೂ ಮಾಹಿತಿ ಪಡೆಯಬಹುದು.
ಪಿಎಫ್ ಬಡ್ಡಿಯ ಇತಿಹಾಸ ಕುತೂಹಲಕಾರಿಯಾಗಿದೆ:
1952: ಆರಂಭದಲ್ಲಿ ಬಡ್ಡಿ ದರ ಕೇವಲ ಶೇ. 3 ಇತ್ತು.
1989-1999: ಇದು ಪಿಎಫ್ ಇತಿಹಾಸದ ಸುವರ್ಣ ಕಾಲ. ಆಗ ಬರೋಬ್ಬರಿ ಶೇ. 12 ರಷ್ಟು ಬಡ್ಡಿ ನೀಡಲಾಗುತ್ತಿತ್ತು
ಕಳೆದ 5 ವರ್ಷ: 2020ರಲ್ಲಿ ಶೇ. 8.50 ಇದ್ದ ದರವು, ಕಳೆದ ಮೂರು ವರ್ಷಗಳಿಂದ ಶೇ. 8.25 ರ ಆಸುಪಾಸಿನಲ್ಲೇ ಸ್ಥಿರವಾಗಿದೆ

