HomeLatest NewsIPL 2026: ಆಲ್‌ಟೈಮ್ ಆರ್‌ಸಿಬಿ ಬೆಸ್ಟ್ ತಂಡ ಹೆಸರಿಸಿದ ಕೊಹ್ಲಿ; 7 ವರ್ಷ ಶ್ರಮಿಸಿದವನಿಗೆ, ಕಪ್...

IPL 2026: ಆಲ್‌ಟೈಮ್ ಆರ್‌ಸಿಬಿ ಬೆಸ್ಟ್ ತಂಡ ಹೆಸರಿಸಿದ ಕೊಹ್ಲಿ; 7 ವರ್ಷ ಶ್ರಮಿಸಿದವನಿಗೆ, ಕಪ್ ಗೆಲ್ಲಿಸಿದವರಿಗೆ ಬೆಲೆ ಇಲ್ವ ಎಂದ ಫ್ಯಾನ್ಸ್!

ಇದೇ ಮಾರ್ಚ್ 28ರಿಂದ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾಗಲಿದ್ದು, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉದ್ಘಾಟನಾ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ.

ಟೂರ್ನಿ ಸನಿಹಕ್ಕೆ ಬರುತ್ತಿದ್ದಂತೆ ಎಲ್ಲ ಫ್ರಾಂಚೈಸಿಗಳು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಐಪಿಎಲ್ ಕುರಿತು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲ್ಲ ಆವೃತ್ತಿಗಳಲ್ಲಿಯೂ ಪ್ರತಿನಿಧಿಸಿರುವ ವಿರಾಟ್ ಕೊಹ್ಲಿ ಸಂದರ್ಶನದ ವಿಡಿಯೊವೊಂದನ್ನು ಹಂಚಿಕೊಂಡಿದೆ.

ಈ ವಿಡಿಯೊದಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಾರ್ವಕಾಲಿಕ ಆಡುವ ಬಳಗವನ್ನು ಹೆಸರಿಸಿದ್ದಾರೆ. ಆರಂಭಿಕ ಆಟಗಾರನನ್ನಾಗಿ ಕ್ರಿಸ್ ಗೇಲ್‌ ಆರಿಸಿದ ಕೊಹ್ಲಿ ಅವರ ಜತೆ ತಮ್ಮನ್ನು ಸಹ ಆರಂಭಿಕನಾಗಿ ಹೆಸರಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್‌ಸಿಬಿ ತಂಡದ ಆಪದ್ಭಾಂದವ ಎಬಿ ಡಿವಿಲಿಯರ್ಸ್ ಅವರನ್ನು ಮೂರನೇ ಕ್ರಮಾಂಕಕ್ಕೆ ಆರಿಸಿದ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಕೆಎಲ್ ರಾಹುಲ್, ಐದನೇ ಸ್ಥಾನದಲ್ಲಿ ಈಗಿನ ನಾಯಕ ರಜತ್ ಪಟಿದಾರ್ ಹಾಗೂ ಆರನೇ ಸ್ಥಾನಕ್ಕೆ ದಿನೇಶ್ ಕಾರ್ತಿಕ್‌ ಹೆಸರನ್ನು ತೆಗೆದುಕೊಂಡಿದ್ದಾರೆ.

ಇನ್ನು ಏಳನೇ ಸ್ಥಾನಕ್ಕೆ ಹರ್ಷಲ್ ಪಟೇಲ್ ಹೆಸರು ತೆಗೆದುಕೊಂಡ ಕೊಹ್ಲಿ ಸ್ಪಿನ್ನರ್‌ಗಳಾದ ಅನಿಲ್ ಕುಂಬ್ಳೆ ಹಾಗೂ ಯುಜ್ವೇಂದ್ರ ಚಹಲ್‌ರನ್ನು ಹೆಸರಿಸಿದರು. ವೇಗಿಗಳಾಗಿ ಡೇಲ್ ಸ್ಟೈನ್ ಹಾಗೂ ಮಿಚೆಲ್ ಸ್ಟಾರ್ಕ್‌ರನ್ನು ಹೆಸರಿಸಿದ್ದಾರೆ.

ಹೀಗೆ ಕೊಹ್ಲಿ ಹೆಸರಿಸಿದ ಸಾರ್ವಕಾಲಿಕ ಆರ್‌ಸಿಬಿ ತಂಡದ ಕುರಿತು ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಪ್ರಮುಖವಾಗಿ ಮೊಹಮ್ಮದ್ ಸಿರಾಜ್ ಹೆಸರನ್ನು ಕೈಬಿಟ್ಟದ್ದಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಏಳು ವರ್ಷ ತಂಡಕ್ಕೆ ಶ್ರಮಿಸಿದ ಆಟಗಾರನನ್ನು ಕೈಬಿಟ್ಟಿದ್ದು ಎಷ್ಟು ಸರಿ ಎಂದು ಪ್ರಶ್ನೆ ಹಾಕಿದ್ದಾರೆ.

ಅಲ್ಲದೇ ಕಳೆದ ಬಾರಿ ಆರ್‌ಸಿಬಿ ಚಾಂಪಿಯನ್ ಆಗಲು ಪ್ರಮುಖ ಕಾರಣರಾದ ಆಟಗಾರರಾದ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹೇಜಲ್‌ವುಡ್ ಇಬ್ಬರನ್ನೂ ಕಡೆಗಣಿಸಿದ್ದೂ ಸಹ ವಿರೋಧಕ್ಕೆ ಎಡೆ ಮಾಡಿಕೊಟ್ಟಿವೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular